ಪಾಕಿಸ್ತಾನಿ ಕಲಾವಿದರು ಮತ್ತು ತಂತ್ರಜ್ಞರಿಗೆ ಭಾರತೀಯ ಚಲನಚಿತ್ರಗಳಲ್ಲಿ ಕೆಲಸ ಮಾಡಲು ನಿಷೇಧ !

ಇಂಡಿಯನ್ ಮೋಶನ್ ಪಿಕ್ಚರ್ಸ್ ಪ್ರೊಡ್ಯುಸರ್ಸ್‌ ಎಸೋಸಿಯೇಶನ್‌ನ ಅಭಿನಂದನೀಯ ನಿರ್ಣಯ !
ಪುಣೆ : ಇನ್ನು ಮುಂದೆ ಪಾಕಿಸ್ತಾನದ ಕಲಾವಿ ದರು ಮತ್ತು ತಂತ್ರಜ್ಞರು ಯಾರೂ ಭಾರತೀಯ ಚಲನಚಿತ್ರಗಳಲ್ಲಿ ಕೆಲಸ ಮಾಡಬಾರದು ಹಾಗೂ ಸದ್ಯ ಮಾಡಿರುವ ಎಲ್ಲ ಒಪ್ಪಂದಗಳನ್ನು ರದ್ದುಗೊಳಿಸ ಬೇಕೆಂದು ಇಂಡಿಯನ್ ಮೋಶನ್ ಪಿಕ್ಚರ್ಸ್‌ ಪ್ರೊಡ್ಯೂಸರ್ಸ್‌ ಎಸೋಸಿಯೇಶನ್ (ಇಂಪಾ) ದೃಢವಾದ ನಿರ್ಣಯ ನೀಡಿದೆ. ಹಿಂದಿ ಮತ್ತು ಪ್ರಾದೇಶಿಕ ಚಲನಚಿತ್ರ ಕ್ಷೇತ್ರಗಳಲ್ಲಿ ೮ ಸಾವಿರ ನಿರ್ಮಾಪಕ ಸದಸ್ಯರಿರುವ ಇಂಪಾ ಸಂಘಟನೆಯ ೭೭ ನೇ ಸಾಮಾನ್ಯ ವಾರ್ಷಿಕ ಸಭೆ ಇತ್ತೀಚೆಗಷ್ಟೇ ಮುಂಬಯಿಯಲ್ಲಿ  ನೆರವೇರಿತು.
ಈ ಸಭೆಯಲ್ಲಿ ಪಾಕಿಸ್ತಾನವು ಉರಿಯಲ್ಲಿ ಮಾಡಿದ ಆಕ್ರಮಣವನ್ನು ನಿಷೇಧಿಸುತ್ತಾ ಒಮ್ಮತದಿಂದ ಈ ನಿರ್ಣಯ ತೆಗೆದುಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಇಂಪ್‌ನ ಸಂಚಾಲಕ ವಿಕಾಸ ಪಾಟೀಲ ಮಾತನಾಡುತ್ತಾ, ಗಡಿಯಲ್ಲಿ ಸೈನಿಕರು ಬಲಿದಾನ ಮಾಡುತ್ತಿರುವಾಗ ಪಾಕಿಸ್ತಾನಿ ಕಲಾವಿದರನ್ನು ಸ್ವಾಗತಿಸುವುದು ಯೋಗ್ಯವಲ್ಲ. ಯಾವುದೇ ಕಲೆ ದೇಶಕ್ಕಿಂತ ದೊಡ್ಡದಲ್ಲ. ಪಾಕಿಸ್ತಾನಿ ಕಲಾವಿದರು, ತಂತ್ರಜ್ಞರಿಗೆ ಇನ್ನು ಮುಂದೆ ಚಲನಚಿತ್ರ ಮತ್ತು ಮಾಲಿಕೆ ಗಳಲ್ಲಿ ಕೆಲಸ ಮಾಡಲು ಅವಕಾಶ ನೀಡದೆ ನಾವು ನಮ್ಮ ಪದ್ಧತಿಯಲ್ಲಿ ಪಾಕಿಸ್ತಾನವನ್ನು ನಿಷೇಧಿಸುತ್ತಿದ್ದೇವೆ. ಎಲ್ಲರೂ ಇದೇ ರೀತಿಯಲ್ಲಿ ನಿಷೇಧಿಸಬೇಕು’ ಎಂದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಾಕಿಸ್ತಾನಿ ಕಲಾವಿದರು ಮತ್ತು ತಂತ್ರಜ್ಞರಿಗೆ ಭಾರತೀಯ ಚಲನಚಿತ್ರಗಳಲ್ಲಿ ಕೆಲಸ ಮಾಡಲು ನಿಷೇಧ !