ಅಣ್ವಸ್ತ್ರಯುದ್ಧ

ಭಾರತದ ಸೈನಿಕರು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ನಡೆಸಿದ ಸೀಮಿತ ದಾಳಿ (ಸರ್ಜಿಕಲ್ ಸ್ಟ್ರೈಕ್) ಬಳಿಕ ಪಾಕ್ ದಿಗ್ಭ್ರಮೆಗೊಳಗಾಗಿದೆ. ಅದಕ್ಕೆ ಏನು ಮಾಡಬೇಕು ಏನು ಮಾಡಬಾರದು ಎನ್ನುವುದೇ ತಿಳಿಯುತ್ತಿಲ್ಲ.  ಇಂತಹ ಸಮಯದಲ್ಲಿ ಪಾಕ್‌ನಿಂದ ಅನಾಹುತವಾಗುವ ಸಾಧ್ಯತೆಗಳಿವೆ. ಪಾಕ್ ಭಾರತದ ವಿರುದ್ಧ ಅಣುಯುದ್ಧ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯಲಾರದು. ಇಲ್ಲದಿದ್ದರೂ ಪಾಕಿಸ್ತಾನ ಸತತವಾಗಿ ಅಣುಯುದ್ಧದ ಬೆದರಿಕೆ ನೀಡುತ್ತಲೇ ಇದೆ. ಈ ಸೇನಾ ಕಾರ್ಯಾಚರಣೆಯ ಒಂದು ದಿನ ಹಿಂದೆಯಷ್ಟೇ ಪಾಕ್‌ನ ರಕ್ಷಣಾಸಚಿವ ಖ್ವಾಜಾ ಆಸಿಫ್ ಪಾಕ್ ಅಣುಬಾಂಬ್ ಅನ್ನು ಶೋಕೇಸ್‌ನಲ್ಲಿಟ್ಟುಕೊಳ್ಳಲು ತಯಾರಿಸಿಲ್ಲ ಎಂದು ದರ್ಪದಿಂದ ಹೇಳಿದ್ದರು. ೧೯೪೭ ರಿಂದ ಪಾಕ್‌ನೊಂದಿಗೆ ನಡೆದ ಪ್ರತಿಯೊಂದು ಯುದ್ಧ ದಲ್ಲಿಯೂ ಪಾಕ್‌ಗೆ ಮಣ್ಣು ಮುಕ್ಕಿಸಿದ್ದಾರೆ.
೧೯೭೧ ರ ಯುದ್ಧದಲ್ಲಿ ಭಾರತವು ಪಾಕ್‌ಅನ್ನು ಎರಡು ತುಂಡುಗಳನ್ನಾಗಿ ಮಾಡಿದ್ದಕ್ಕಾಗಿ ಪಾಕ್ ಭಾರತದೊಂದಿಗೆ ನೇರವಾಗಿ ಯುದ್ಧ ಮಾಡುವುದನ್ನು ಬಿಟ್ಟು ಜಿಹಾದಿ ಉಗ್ರರ ಮೂಲಕ ಕಳೆದ ೩ ದಶಕಗಳಿಂದ ಯುದ್ಧ ಮಾಡುತ್ತಿದೆ. ಈ ಯುದ್ಧವು ದುರ್ಬಲ ಭಾರತೀಯ ರಾಜಕಾರಣಿಗಳಿಂದಾಗಿ ಇಂದಿಗೂ ಗೆಲ್ಲಲು ಆಗುತ್ತಿಲ್ಲ; ಏಕೆಂದರೆ ಇದು ಯುದ್ಧವಾಗಿದ್ದು ಅದನ್ನು ನಿರ್ಣಾಯಕ ಸ್ಥಿತಿಗೆ ಹೋಗಿ ಹೋರಾಡಬೇಕು, ಎಂಬುದು ಇನ್ನೂ ಅವರ ಗಮನಕ್ಕೆ ಬಂದಿಲ್ಲ. ಸೀಮಿತ ದಾಳಿಯ ನಂತರ ಭಾರತವು ಈ ಉಗ್ರರನ್ನು ಪಾಕ್ ನೊಳಗೆ ನುಗ್ಗಿ ನಾಶ ಮಾಡಬಹುದು, ಎಂಬ ಆತ್ಮವಿಶ್ವಾಸವು ಈ ರಾಜಕಾರಣಿ ಗಳಲ್ಲಿ ನಿರ್ಮಾಣವಾಗಿದೆ ಹಾಗೂ ಮತ್ತೊಂದೆಡೆ ಪಾಕ್‌ಗೆ ಈ ಉಗ್ರರ ಮೂಲಕ ಭಾರತದ ಮೇಲೆ ಯುದ್ಧ ನಡೆಸುವುದು ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಈಗ ಮುಂದಿನ ಹೆಜ್ಜೆಯೆಂದು ಪಾಕ್ ಅಣುಯುದ್ಧವನ್ನು ನಡೆಸುವ ಸಾಧ್ಯತೆಗಳಿವೆ. ಇದು ಅಮೇರಿಕಾಗೂ ತಿಳಿದಿರುವುದರಿಂದ ತಕ್ಷಣ ಅದು ಪಾಕ್‌ಅನ್ನು ಖಂಡಿಸಿತು. ಏಕೆಂದರೆ ಪಾಕ್ ಭಾರತದ ವಿರುದ್ಧ ಅಣುಯುದ್ಧವೇನಾದರೂ ಪ್ರಾರಂಭಿಸಿದರೆ ಇದರಿಂದ ಮೂರನೇ ಮಹಾಯುದ್ಧವಾಗುವ ಸಾಧ್ಯತೆಗಳಿವೆ ಹಾಗೂ ಇದರಿಂದ ಪಾಕ್ ಜಗತ್ತಿನ ನಕಾಶೆಯಿಂದ ಶಾಶ್ವತವಾಗಿ ಅಳಿಸಿ ಹೋಗುವುದು ಎಂದು ಅಮೇರಿಕಾಗೂ ತಿಳಿದಿದೆ. ಭಾರತ- ಪಾಕ್ ನಡುವೆ ಯುದ್ಧವಾದರೆ ಭಾರತಕ್ಕೂ ಹಾನಿಯಾಗುವುದು ಹಾಗೂ ಇದರಿಂದ ಭಾರತದ ಮೂಲಕ ಚೀನಾದ ಮೇಲೆ ಒತ್ತಡ ಹೇರುವ ಪ್ರಯತ್ನಕ್ಕೆ ಸ್ವಲ್ಪ ಪ್ರಮಾಣದಲ್ಲಿ ತಡೆಯಾಗುವುದು. ಅದೇ ರೀತಿ ಈ ಯುದ್ಧದಲ್ಲಿ ಚೀನಾ ಪಾಕ್‌ಗೆ ಬೆಂಬಲವಾಗಿ ನಿಂತರೆ ಅಮೇರಿಕಾವು ಯುದ್ಧಕ್ಕೆ ಇಳಿಯಬೇಕಾಗಬಹುದು. ಹೀಗೆ ಜಗತ್ತೇ ಮೂರನೇ ಮಹಾಯುದ್ಧಕ್ಕೆ ಇಳಿಯಬೇಕಾಗುವುದು. ಈಗಿರುವ ಸ್ಥಿತಿಯಲ್ಲಿ ಅಮೇರಿಕಾಗೆ ಯುದ್ಧ ಮಾಡುವುದು ಬೇಡವಾಗಿದೆ. ಏಕೆಂದರೆ ಅಮೇರಿಕಾದ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ. ಮತ್ತೊಂದು ಕಡೆ ಮಧ್ಯ-ಪೂರ್ವ ಸ್ಥಿತಿಯಿಂದ ಯುರೋಪ್ ಸಹ ಅಡಚಣೆಯಲ್ಲಿದೆ. ಆದ್ದರಿಂದ ಅಮೇರಿಕಾದ ಮಿತ್ರ ರಾಷ್ಟ್ರಗಳಿಗೂ ಯುದ್ಧ ಬೇಡವಾಗಿದೆ. ಈ ಕಾರಣಗಳಿಂದ ಭಾರತ ಸಹ ಯುದ್ಧಕ್ಕಿಳಿಯಬಾರದು, ಎಂಬುದಕ್ಕಾಗಿ ಅಮೇರಿಕಾ ಭಾರತದ ಮೇಲೆ  ಒತ್ತಡ ಹೇರುತ್ತಿರುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೂ ಭಾರತೀಯರ ಹಾಗೂ ಭಾರತೀಯ ಸೈನಿಕರ ಭಾವನೆ ತೀವ್ರವಾಗಿರುವುದರಿಂದ ಭಾರತವು ಅಮೇರಿಕಾವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಥವಾ ಅಮೇರಿಕಾದ ಹೇಳಿಕೆಯಂತೆ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿತು ಎಂದು ಹೇಳಿದರೆ ಅದು ಅತಿಶಯೋಕ್ತಿಯಾಗುವುದಿಲ್ಲ. ಈ ಕಾರ್ಯಾಚರಣೆಯಾದ ತಕ್ಷಣ ಭಾರತವು ನಾವು ಪುನಃ ಈ ರೀತಿಯ ಕಾರ್ಯಾಚರಣೆ ನಡೆಸುವುದಿಲ್ಲ ಎಂದು ಸ್ಪಷ್ಟಗೊಳಿಸಿದೆ; ಆದರೆ ಉಗ್ರರು ಕಾರ್ಯಾಚರಣೆ ನಡೆಸಿದರೆ ನಾವು ಪುನಃ ಕಾರ್ಯಾಚರಣೆ ನಡೆಸುವೆವು, ಎಂದು ಬೆದರಿಸಿದೆ. ಅಂದರೆ ಭಾರತಕ್ಕೂ ಯುದ್ಧ ಬೇಡವಾಗಿದೆ. ಏಕೆಂದರೆ ಪಾಕ್ ಅಣ್ವಸ್ತ್ರವನ್ನು ಉಪಯೋಗಿಸಬಹುದು, ಎಂಬ ಭಯ ಭಾರತಕ್ಕೂ ಇದೆ. ಆದರೂ ಪಾಕ್‌ನಿಂದ ಅಣುಯುದ್ಧದ ಬೆದರಿಕೆ  ಶಾಶ್ವತವಾಗಿ ಇದ್ದೇ ಇದೆ. ಇದನ್ನು ಅಮೇರಿಕಾದಲ್ಲಿನ ಡೆಮೋಕ್ರೆಟಿಕ್ ಪಕ್ಷದ ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಹೇಳಿದ್ದಾರೆ. ಅವರು ಪಾಕ್‌ನ ಜಿಹಾದಿ ಉಗ್ರರ ಕೈಗೆ ಅಣ್ವಸ್ತ್ರಗಳು ಹೋಗಬಹುದು; ಆದ್ದರಿಂದ ನಾವು ಚಿಂತಿಸುತ್ತಿದ್ದೇವೆ ಎಂದು ಹೇಳಿದರು. ಅಮೇರಿಕಾದ ಚಿಂತೆಯೇನು, ಎಂಬುದು ಈ ಅಂಶ ದಿಂದ ಗಮನಕ್ಕೆ ಬರುತ್ತದೆ. ಈ ಜಿಹಾದಿ ಉಗ್ರರ ಭಸ್ಮಾಸುರರ ಮೇಲೆ ಯಾರ ನಿಯಂತ್ರಣವೂ ಇಲ್ಲ. ಪಾಕ್‌ನ ಸಿಂಧ್, ಬಲುಚಿಸ್ತಾನ್ ಇತ್ಯಾದಿ ಭಾಗಗಳು ಪಾಕ್‌ನಿಂದ ಸ್ವತಂತ್ರರಾಗಲು ಆಂದೋಲನ ನಡೆಸುತ್ತಿವೆ. ನಾಳೆ ಒಂದು ವೇಳೆ ಪಾಕ್‌ನ ವಿಭಜನೆಯಾದರೆ, ಈ ಅಣ್ವಸ್ತ್ರಗಳು ಉಗ್ರರ ಕೈಸೇರುವ ಸಾಧ್ಯತೆಗಳಿವೆ. ಈಗ ಯಾರಾದರೂ ಭಾರತ - ಪಾಕ್ ನಡುವಿನ ಅಣುಯುದ್ಧವನ್ನು ನಿಲ್ಲಿಸಲು ಪ್ರಯತ್ನಿಸಿದರೂ, ಅದು ಒಂದಲ್ಲ ಒಂದು ದಿನ ನಡೆದೇ ನಡೆಯುವುದು, ಎಂಬುದನ್ನು ನಿರಾಕರಿಸಲು ಸಾಧ್ಯ ವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಭಾರತವು ಈ ಸ್ಥಿತಿಯನ್ನೆದುರಿಸಲು ಸಿದ್ಧವಾಗಿದೆಯೇ, ಎಂಬುದನ್ನು ಈಗಿನಿಂದಲೇ ವಿಚಾರ ಮಾಡಿ ಹಾಗೂ ಅದಕ್ಕೆ ಉಪಾಯಯೋಜನೆ ಪ್ರಾರಂಭಿಸಬೇಕು. ಇದರಿಂದ ಆಗುವ ಹಾನಿಯನ್ನು ಕಡಿಮೆ ಮಾಡುವ ಪ್ರಯತ್ನಗಳಾಗಬಹುದು. ಅದೇ ರೀತಿ ಭಾರತದ ಜನತೆಗೆ ಈ ಪರಿಣಾಮವನ್ನು ಸ್ವೀಕರಿಸುವ ಮಾನಸಿಕ ಸ್ಥಿತಿ ನಿರ್ಮಾಣವಾಗಬಹುದು. ಅಮೇರಿಕಾದಲ್ಲಿ ೯/೧೧ ರ ಆಕ್ರಮಣದ ಬಳಿಕ ಅಲ್ಲಿನ ನಾಗರಿಕರು ಆತಂಕದಲ್ಲಿದ್ದರು. ಅಣುಯುದ್ಧದ ಆತಂಕ ಇನ್ನೂ ಹೆಚ್ಚಾಗಿರುತ್ತದೆ. ಯಾವುದಾದರೂ ಒಂದು ನಗರದ ಮೇಲೆ ಅಣು ಬಾಂಬ್ ಬಿದ್ದರೆ ತಕ್ಷಣ ಅಲ್ಲಿ ಸಹಾಯ ನೀಡಲು ಸಾಧ್ಯವಿಲ್ಲ; ಆದರೆ ಸ್ವಲ್ಪ ಸಮಯದ ಬಳಿಕ ಅವರಿಗೆ ಸಹಾಯ ಮಾಡಲು ಸಾಧ್ಯ. ಅದೇ ವೇಳೆ ಸಹಾಯಕ್ಕಾಗಿ ಉಪಯೋಗವಾಗುವ ಸಾಮಗ್ರಿಗಳಿರುವುದು ಸಹ ಅಷ್ಟೇ ಮಹತ್ವದ್ದಾಗಿದೆ. ಭಾರತದಲ್ಲಿ ಮೊದಲೇ ಆಪತ್ಕಾಲೀನ ಸ್ಥಿತಿಯ ನಿರ್ವಹಣೆ ಸ್ಥಿತಿಯು ಪರಿಣಾಮಕಾರಿಯಾಗಿಲ್ಲ ಎಂಬ ಅನುಭವವಿದೆ. ಆದ್ದರಿಂದ ಈಗಿನಿಂದಲೇ ಅದಕ್ಕೆ ತಯಾರಿ ಮಾಡಿಕೊಳ್ಳಬೇಕು. ಪಾಕ್ ಭಾರತದಲ್ಲಿನ ದೊಡ್ಡ ನಗರಗಳನ್ನು ಗುರಿ ಮಾಡಬಹುದು. ಉದಾ. ದೆಹಲಿ, ಜಯಪುರ್, ಕರ್ಣಾವತಿ, ಮುಂಬೈ, ಪುಣೆ, ಬೆಂಗಳೂರು. ಈ ನಗರಗಳ ಪಕ್ಕದಲ್ಲಿರುವ ಸಣ್ಣ ನಗರಗಳಲ್ಲಿ ಅಥವಾ ಜಿಲ್ಲೆಗಳಲ್ಲಿ ಈ ರೀತಿಯ ವ್ಯವಸ್ಥೆ ಮಾಡಬೇಕಾಗುವುದು. ದೆಹಲಿಯು ದೇಶದ ರಾಜಧಾನಿ ಹಾಗೂ ಮುಂಬೈ ಆರ್ಥಿಕ ರಾಜಧಾನಿಯಾಗಿದೆ. ಈ ಸ್ಥಳಗಳಲ್ಲಿ ಅಣುಬಾಂಬ್ ಹಾಕಿದರೆ ಭಾರತವು ಅದನ್ನು ಹೇಗೆ ಎದುರಿಸಬಹುದು ಎಂಬ ಬಗ್ಗೆ ಯೋಜನೆ ರೂಪಿಸಬೇಕು. ಭಾರತದ ಮುಂದೆ ಈಗ ಆಪತ್ಕಾಲವು ಬಂದು ನಿಂತಿದೆ.  ಇಂತಹ ಸಮಯದಲ್ಲಿ ರಾಜಕಾರಣಿಗಳಿಗೆ, ಆಡಳಿತದವರು ಎಷ್ಟರ ಮಟ್ಟಿಗೆ ಸಹಾಯ ಮಾಡಬಹುದು, ಎಂಬುದು ಕಾಲವೇ ನಿರ್ಧರಿಸುವುದು; ಆದರೆ ಭಾರತೀಯರೇನಾದರೂ ಸಾಧನೆ ಮಾಡಿದರೆ, ಆಗ ಇಂತಹ ಆಪತ್ಕಾಲೀನ ಸ್ಥಿತಿಯಲ್ಲಿ ದೇವರು ಅವನ ಭಕ್ತರನ್ನು ರಕ್ಷಿಸುತ್ತಾನೆ, ಎಂಬುದು ಅವರು ಗಮನದಲ್ಲಿಟ್ಟುಕೊಂಡು ಆಧ್ಯಾತ್ಮಿಕ ಸಾಧನೆ ಮಾಡಬೇಕೆಂಬುದು ಅಪೇಕ್ಷಿತವಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಣ್ವಸ್ತ್ರಯುದ್ಧ