ಅಮೇರಿಕದಲ್ಲಿ ೧೮ ರಿಂದ ೩೪ ವಯಸ್ಸಿನ ನಾಗರಿಕರು ಪಾಲಕರೊಂದಿಗೆ ಇರುವ ಪ್ರಮಾಣದಲ್ಲಿ ಹೆಚ್ಚಳ !

ಭಾರತೀಯ ಕುಟುಂಬಪದ್ಧತಿಯನ್ನು ಅವಹೇಳನೆ ಮಾಡಿ
ಪಾಶ್ಚಾತ್ಯರ ಜೀವನಶೈಲಿಯನ್ನು ಸ್ವೀಕರಿಸುವ ಭಾರತೀಯರಿಗೆ ತಪರಾಕಿ !
ಅಮೇರಿಕದ ಯುವಕರಲ್ಲಿ ಕೌಟುಂಬಿಕ ಜೀವನದ ಬಗ್ಗೆ ಹೆಚ್ಚುತ್ತಿರುವ ಸೆಳೆತ !
ವಾಶಿಂಗ್ಟನ್ : ಆಧುನಿಕ ಇತಿಹಾಸದಲ್ಲಿ ಮೊದಲ ಬಾರಿಗೆ ೧೮ ರಿಂದ ೩೪ ವಯಸ್ಸಿನ ಬಹುಸಂಖ್ಯಾತ ಅಮೇರಿಕನ್ನರು ತಮ್ಮ ಪ್ರೇಮಿಗಳೊಡನೆ ಇರುವುದನ್ನು ಬಿಟ್ಟು ಪಾಲಕರೊಂದಿಗೆ ಇರಲು ಇಷ್ಟ ಪಡುತ್ತಿದ್ದಾರೆ, ಎಂದು ಪ್ಯೂ ರೀಸರ್ಚ್ ಸೆಂಟರ್ ಮಾಡಿದ ಹೊಸ ಜನಗಣನೆಯಲ್ಲಿ ಕಂಡುಬಂದಿದೆ. ಹಿಂದಿನ ಪೀಳಿಗೆಗಿಂತ ಈಗಿನ ಪೀಳಿಗೆಯಲ್ಲಿ ವಿವಾಹದ ಪ್ರಮಾಣವು ಕಡಿಮೆಯಾಗಿದೆ. ೨೦೧೪ ರ ಅಂಕಿಅಂಶಕ್ಕನುಸಾರ ಈ ವಯೋಮಾನದ ಶೇ. ೩೨.೧ ರಷ್ಟು ನಾಗರಿಕರು ಪಾಲಕರೊಂದಿಗೆ ಇರುತ್ತಾರೆ ಹಾಗೂ ಶೇ. ೩೧.೬ ರಷ್ಟು ನಾಗರಿಕರು ಪತಿ-ಪತ್ನಿ ಅಥವಾ ಪ್ರೇಮಿಗಳೊಡನೆ ವಾಸಿಸುತ್ತಿದ್ದಾರೆ.
ಅಮೇರಿಕಾದಲ್ಲಿ ವಿವಾಹವಾಗುವ ಪ್ರಮಾಣ ಅಥವಾ ತಮ್ಮ ಪ್ರೇಮಿಗಳೊಡನೆ ಬೇರೆ ಇರುವ ಪ್ರಮಾಣವು ಸಾಕಷ್ಟು ಕಡಿಮೆಯಾಗಿದೆ, ಎಂದು ಪ್ಯೂನ ಅರ್ಥತಜ್ಞ ರಿಚರ್ಡ್ ಪ್ರೈ ಅವರು ಹೇಳಿಕೆಯನ್ನು ನೀಡಿದ್ದಾರೆ.
೧೯೬೦ ರಲ್ಲಿ ಇಲ್ಲಿನ ಯುವಕರು ಅತ್ಯಂತ ಕಿರಿಯ ವಯಸ್ಸಿನಲ್ಲಿ ವಿವಾಹ ಮಾಡಿಕೊಳ್ಳುತ್ತಿದ್ದರು ಮತ್ತು ಮನೆಬಿಟ್ಟು ಬೇರೆ ಸಂಸಾರ ಹೂಡುತ್ತಿದ್ದರು; ಆದರೆ ಈಗಿನ ದಶಮಾನದಲ್ಲಿ ವಿವಾಹದ ಪ್ರಮಾಣವು ಕಡಿಮೆಯಾಗಿದೆ ಅಥವಾ ವಿವಾಹವನ್ನು ಸ್ವಲ್ಪ ತಡವಾಗಿ ಮಾಡುತ್ತಿದ್ದಾರೆ.
೧೯೬೦ ರಲ್ಲಿ ಮಹಿಳೆಯರ ವಿವಾಹದ ಸರಾಸರಿ ವಯಸ್ಸು ೨೦ ಮತ್ತು ಪುರುಷರ ವಯಸ್ಸು ೨೨ ಇತ್ತು, ಈಗ ಈ ದಶಮಾನದಲ್ಲಿ ಮಹಿಳೆಯರ ವಿವಾಹದ ವಯಸ್ಸು ಸರಾಸರಿ ೨೭ ಮತ್ತು ಪುರುಷರ ವಯಸ್ಸು ೨೯ ಇದೆ, ಎಂದು ವರದಿಯಲ್ಲಿ ಹೇಳಲಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಮೇರಿಕದಲ್ಲಿ ೧೮ ರಿಂದ ೩೪ ವಯಸ್ಸಿನ ನಾಗರಿಕರು ಪಾಲಕರೊಂದಿಗೆ ಇರುವ ಪ್ರಮಾಣದಲ್ಲಿ ಹೆಚ್ಚಳ !