ಬಾಲಿವುಡ್ ಯಾರಪ್ಪನದ್ದಲ್ಲ (ಅಂತೆ)! ಪಾಕಿಸ್ತಾನಿ ನಟ ಫವಾದ ಖಾನ್‌ನ ಬಣ್ಣ ಬಯಲು !

ಪಾಕಿಸ್ತಾನದ ಕಲಾವಿದರನ್ನು ಬೆಂಬಲಿಸುವ ಭಾರತೀಯರು ಈಗ ಬಾಯಿ ತೆರೆಯುವರೇ ?
ಮುಂಬಯಿ : ಚಲನಚಿತ್ರ ನಿರ್ಮಾಪಕರ ಸಂಘಟನೆ ಇಂಡಿಯನ್ ಮೋಶನ್ ಪಿಕ್ಚರ್ಸ್ ಅಸೋಸಿಯೇಶನ್ (ಇಂಪಾ) ಪಾಕಿಸ್ತಾನ ಕಲಾವಿದರ ಮೇಲೆ ನಿಷೇಧ ಹೇರಿದೆ. ಈ ನಿರ್ಧಾರದ ವಿರುದ್ಧ ಪಾಕಿಸ್ತಾನಿ ನಟ ಫವಾದ ಖಾನನು ಬಾಲಿವುಡ್ ಯಾರಪ್ಪನ್ನದ್ದಲ್ಲ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿರುವುದಾಗಿ ಸ್ಪಾಟ್‌ಬಾಯ್ ಜಾಲತಾಣವು ಸುದ್ದಿ ನೀಡಿದೆ. ಈ ವಿಷಯವನ್ನು ‘ಇಂಪಾ’ ಇದರ ಅಧ್ಯಕ್ಷ ಹಾಗೂ ನಿರ್ಮಾಪಕ ಅಗರವಾಲ ಇವರು ದೃಢಪಡಿಸಿ, ಫವಾದ ಖಾನನ ಈ ಹೇಳಿಕೆಯ ಬಗ್ಗೆ ಅಗರವಾಲ ಇವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮನಸಾದ ಚಲನಚಿತ್ರ ಶಾಖೆಯ ಅಧ್ಯಕ್ಷರಾದ ಅಮೇಯ ಖೋಪಕರ ಸಹ  ಫವಾದನ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾ, ಭಾರತೀಯ ಜನರ ಮನಸ್ಸು ವ್ಯಾಪಕವಿಲ್ಲವೆಂದು ಫವಾದ ಹೇಳಿದ ಮಾತು ತಿಳಿಯಿತು. ಪಾಕಿಸ್ತಾನಿ ಕಲಾವಿದರು ಭಾರತ ದಲ್ಲಿ ಬೇರೆಯೇ ತೆರನಾಗಿ ಮಾತನಾಡುತ್ತಾರೆ ಮತ್ತು ತಮ್ಮ ದೇಶಕ್ಕೆ ಹೋಗಿ ಕ್ರೋಧ ವ್ಯಕ್ತಪಡಿಸುತ್ತಾರೆ ಎಂದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬಾಲಿವುಡ್ ಯಾರಪ್ಪನದ್ದಲ್ಲ (ಅಂತೆ)! ಪಾಕಿಸ್ತಾನಿ ನಟ ಫವಾದ ಖಾನ್‌ನ ಬಣ್ಣ ಬಯಲು !