ಭಾರತದಲ್ಲಿ ವಾಯುಮಾಲಿನ್ಯದಿಂದಾಗಿ ವರ್ಷಕ್ಕೆ ೬ ಲಕ್ಷದ ೨೧ ಸಾವಿರದ ೧೩೮ ಜನರ ಸಾವು ! - ವಿಶ್ವ ಆರೋಗ್ಯ ಸಂಘಟನೆ

ಭೌತಿಕ ವಿಕಾಸವು ಮಾನವನಿಗೆ ವರದಾನವಾಗದೇ ಶಾಪವೇ ಆಗಿದೆ. ಮಾನವನ ಉನ್ನತಿಗೆ ಇಂತಹ
ಅಭಿವೃದ್ಧಿಯಲ್ಲ, ಆನಂದ ಮತ್ತು ಶಾಂತಿಯನ್ನು ನೀಡುವ ಹಿಂದೂ ಸಂಸ್ಕೃತಿಯನ್ನು ಸ್ವೀಕರಿಸುವುದು ಅವಶ್ಯಕವಾಗಿದೆ !
 ಮುಂಬಯಿ :  ವಿಶ್ವದಲ್ಲಿ ಪ್ರತಿದಿನ ನಡೆಯುವ ಸಂಶೋಧನೆಯಿಂದ ಹೊಸಹೊಸ ತಂತ್ರಜ್ಞಾನಗಳು ಬಂದು ಮಾನವನ ಜೀವನವು ಸರಳವಾಗುತ್ತಿದೆ. ಆದರೆ ಇದರಿಂದ ಮಾನವನ ಸರಾಸರಿ ಆಯುಷ್ಯವೂ ಕ್ಷೀಣಿಸುತ್ತಿದೆ ಎಂಬ ಮಾಹಿತಿಯನ್ನು  ವಿಶ್ವ ಆರೋಗ್ಯ ಸಂಘಟನೆಯ ವರದಿಯಲ್ಲಿ ಪ್ರಕಟವಾಗಿದೆ. ಈ ವರದಿಯಲ್ಲಿ ಭಾರತದಲ್ಲಿ ವಾಯುಮಾಲಿನ್ಯದಿಂದ ವರ್ಷಾದ್ಯಂತ ಸುಮಾರು ೬ ಲಕ್ಷದ   ೨೧ ಸಾವಿರದ ೧೩೮ ಜನರು ಸಾವನ್ನಪ್ಪುತ್ತಾರೆಂದು ತಿಳಿಸಿದೆ.
೧. ವಿಶ್ವ ಆರೋಗ್ಯ ಸಂಘಟನೆಯ ೨೦೧೨ ರ ಅಂಕಿಅಂಶಗಳಿಗನುಸಾರ ಭಾರತದಲ್ಲಿ ಜರುಗುವ ಒಟ್ಟು ಸಾವಿನಲ್ಲಿ ಶೇ. ೭೫ ರಷ್ಟು ಮೃತ್ಯುವು ವಾಯು ಮಾಲಿನ್ಯಕ್ಕೆ ಸಂಬಂಧಿಸಿದೆ.
೨. ಬಹುತೇಕ ಜನರು ಉಸಿರಾಟದ ತೊಂದರೆ, ಹೃದಯರೋಗ, ಹಾಗೆಯೇ ಪುಪ್ಪುಸಗಳಿಗೆ ಸಂಬಂಧಿ ಸಿದ ರೋಗಗಳಿಂದ ನರಳುತ್ತಿದ್ದಾರೆ.
೩. ಜಗತ್ತಿನಾದ್ಯಂತ ಪ್ರತಿ ೧೦ ಜನರಲ್ಲಿ ೯ ಜನರು ಅಪಾಯಕಾರಿ ವಾಯುವನ್ನು ಸೇವಿಸುತ್ತಾರೆ.
೪. ಮಧ್ಯಮ ಹಾಗೂ ಅತಿ ಕಡಿಮೆ ಉತ್ಪನ್ನ ಹೊಂದಿ ರುವ ದೇಶಗಳಲ್ಲಿ ವಾಯುಮಾಲಿನ್ಯದಿಂದ ಶೇ. ೯೦ ರಷ್ಟು ಜನರು ಸಾವನ್ನಪ್ಪುತ್ತಿದ್ದಾರೆ.
೫. ಭಾರತದಲ್ಲಿ ಹೃದಯರೋಗದಿಂದ ೨ ಲಕ್ಷದ ೪೯ ಸಾವಿರದ ೩೮೮ ಜನರು ಪ್ರತಿವರ್ಷ ಸಾವನ್ನಪ್ಪು ತ್ತಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭಾರತದಲ್ಲಿ ವಾಯುಮಾಲಿನ್ಯದಿಂದಾಗಿ ವರ್ಷಕ್ಕೆ ೬ ಲಕ್ಷದ ೨೧ ಸಾವಿರದ ೧೩೮ ಜನರ ಸಾವು ! - ವಿಶ್ವ ಆರೋಗ್ಯ ಸಂಘಟನೆ