ನಿಜವಾದ ಸಂತರು ಮತ್ತು ಢೋಂಗಿ ಸಂತರು ಇವರಲ್ಲಿ ವ್ಯತ್ಯಾಸ

(ಸದ್ಗುರು)
ಶ್ರೀ. ರಾಜೇಂದ್ರ ಶಿಂದೆ
ಇತ್ತೀಚೆಗೆ ಸಮಾಜದಲ್ಲಿ ಕಾವಿ ಬಟ್ಟೆ ಧರಿಸಿ ದೊಡ್ಡ ದೊಡ್ಡ ಬಿರುದುಗಳನ್ನು ಹಚ್ಚಿಕೊಂಡ ಅನೇಕ ವ್ಯಕ್ತಿಗಳು ಸಂತರೆಂದು ಮೆರೆಯುತ್ತಿರುವುದು ಕಾಣಿಸುತ್ತದೆ. ಸಾಧನೆ ಮತ್ತು ಧರ್ಮ ಇವುಗಳ ಕುರಿತು ಅಜ್ಞಾನವಿರುವ ಜನಸಾಮಾನ್ಯರು ಇಂತಹ ಢೋಂಗಿ ಸಂತರ ಬೆನ್ನು ಹತ್ತಿ ತಮ್ಮ ಜೀವನದ ಸಾಧನೆಯ ಅಮೂಲ್ಯ ವರ್ಷ ಮತ್ತು ಹಣ ಅನಗತ್ಯವಾಗಿ ವೆಚ್ಚ ಮಾಡುತ್ತಾರೆ ಮತ್ತು ಕೈಗೆ ಏನೂ ದಕ್ಕದಿರುವುದರಿಂದ ಹತಾಶರಾಗಿ ನಿರಾಶರಾಗುತ್ತಾರೆ. ಆದುದರಿಂದ ಅವರಿಗೆ ಗುರು, ಸಂತರು ಮತ್ತು ದೇವತೆಗಳ ಮೇಲಿನ ವಿಶ್ವಾಸ ಇಲ್ಲವಾಗುತ್ತದೆ.
ಸಾಧನೆ ಮಾಡಿ ಕನಿಷ್ಠಪಕ್ಷ ಶೇ. ೭೦ ಆಧ್ಯಾತ್ಮಿಕ ಮಟ್ಟಕ್ಕೆ ತಲುಪಿದವರನ್ನೇ ನಾವು ಸಂತರು ಎನ್ನಬಹುದು. ಇದೆಲ್ಲವೂ ಸೂಕ್ಷ್ಮದ ವಿಷಯವಾಗಿರುವುದರಿಂದ ಅದು ಜನಸಾಮಾನ್ಯರಿಗೆ ತಿಳಿಯುವುದಿಲ್ಲ. ಮುಂದಿನ ಕೋಷ್ಟಕದಲ್ಲಿ ಢೋಂಗಿ ಸಂತರು ಮತ್ತು ನಿಜವಾದ ಸಂತರು ಇವರಲ್ಲಿರುವ ವ್ಯತ್ಯಾಸ ಕೊಡಲಾಗಿದೆ. ಅದರ ಅಧ್ಯಯನ ಮಾಡಿದರೆ ನಾವು ಸ್ವಲ್ಪ ಮಟ್ಟಿಗಾದರೂ ನಿಜವಾದ ಸಂತರನ್ನು
ಗುರುತಿಸಬಹುದು.
ಧರ್ಮಶಿಕ್ಷಣದ ಅಭಾವದಿಂದಾಗಿ ಇಂದು ಸಮಾಜದ ಸ್ಥಿತಿಯು ಸಂಪೂರ್ಣ ಹದಗೆಟ್ಟಿದೆ. ಸಮಾಜವು ಸಾಧನೆ ಮಾಡುವುದಿಲ್ಲ. ಆದುದರಿಂದ ಅವರಿಗೆ ನಿಜವಾದ ಸಂತರು ಮತ್ತು ಢೋಂಗಿ ಸಂತರು ಯಾರು ಎಂದು ಗುರುತಿಸಲು ಬರುವುದಿಲ್ಲ. ಆದುದರಿಂದ ಇತ್ತೀಚೆಗೆ ತೋರಿಕೆ ಮಾಡುವ ಢೋಂಗಿ ಸಂತರಿಗೆ ಸಾಕಷ್ಟು ಸನ್ಮಾನ ಸಿಗುತ್ತದೆ ಹಾಗೂ ನಿಜವಾದ ಸಂತರನ್ನು ದುರ್ಲಕ್ಷಿಸಲಾಗುತ್ತದೆ ಮತ್ತು ಅವರ ಅವಮಾನ ಮಾಡಲಾಗುತ್ತದೆ. ಇದನ್ನು ಸುಧಾರಿಸಲು ಹಿಂದೂ ರಾಷ್ಟ್ರದ ( ಸನಾತನ ಧರ್ಮ ರಾಜ್ಯದ ) ಸ್ಥಾಪನೆ ಮಾಡುವುದು ಆವಶ್ಯಕವಿದೆ.
- (ಸದ್ಗುರು ) ಶ್ರೀ. ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವ, ಪನವೇಲ್. ( ೯.೮.೨೦೧೬)
ನಿಜವಾದ ಸಾಧು-ಸಂತರು ಹಿಂದೂ ಧರ್ಮಕ್ಕೆ ಭೂಷಣಪ್ರಾಯ ವಾಗಿದ್ದಾರೆ. ಅವರ ಆಚರಣೆಯಿಂದಾಗಿ ಮತ್ತು ಸದ್ವರ್ತನೆಯಿಂದಾಗಿ ಅವರ ಸಂತತ್ವವು ವ್ಯಕ್ತವಾಗುತ್ತಿರುತ್ತದೆ. ಕೆಲವು ಢೋಂಗಿ ಸಾಧು ಸಂತರ ಅಯೋಗ್ಯ ಕೃತಿಯಿಂದ ಮಾತ್ರ ಹಿಂದೂ ಧರ್ಮವು ಕಳಂಕಿತವಾಗುತ್ತಿದೆ. ಅವರ ಕುರಿತು ಜಾಗೃತಿ ಮಾಡಲು ಈ ಲೇಖನ ಪ್ರಕಟಿಸುತ್ತಿದ್ದೇವೆ.- ಸಂಪಾದಕರು

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ನಿಜವಾದ ಸಂತರು ಮತ್ತು ಢೋಂಗಿ ಸಂತರು ಇವರಲ್ಲಿ ವ್ಯತ್ಯಾಸ