ಸನಾತನದ ೫೬ ನೇ ಸಂತರಾದ ಪೂ. ಶಂಕರ ಗುಂಜೇಕರ್‌ರವರ ಕಠಿಣ ಜೀವನ ಯಾತ್ರೆ ಮತ್ತು ಅವರು ಅನುಭವಿಸಿದ ಅಲೌಕಿಕ ಅನುಭೂತಿಗಳು

ಪೂ. ಶಂಕರ ಗುಂಜೇಕರ್
ರಾಮನಗರವು ಬೆಳಗಾವಿ ಜಿಲ್ಲೆಯ ಒಂದು ಊರಾಗಿದೆ. ಈ ಗ್ರಾಮದಲ್ಲಿ ಕಾಣುವ ಸಾಮಾನ್ಯ ಪ್ರಾಮಾಣಿಕ ಜನರು, ಅವರು ಬದುಕುವ ಸಾಮಾನ್ಯ ಜೀವನ ಮತ್ತು ಅವರ ಕಣ್ಣುಗಳಲ್ಲಿನ ಮುಗ್ದಭಾವ ಇವು ಅವರ ವೈಶಿಷ್ಟ್ಯಗಳಾಗಿವೆ. ಈ ಗ್ರಾಮದಲ್ಲಿ ಸನಾತನದ ೫೬ ನೇ ಸಂತರಾದ ಪೂ. ಗುಂಜೇಕರ ಮಾಮಾರವರು ನೆಲೆಸುತ್ತಿದ್ದಾರೆ ! ಇಂದು ನಾವು, ಅವರು ತಮ್ಮ ಕಠಿಣ ಜೀವನ ಯಾತ್ರೆಯಲ್ಲಿಯೂ ಯಾವ ರೀತಿ ಸಾಧನೆ ಮಾಡಿದರು, ಎನ್ನುವುದನ್ನು ನೋಡುವವರಿದ್ದೇವೆ. ಪೂ. ಮಾಮಾರವರು ಅನುಭವಿಸಿದ ಕಠಿಣ ಜೀವನಯಾತ್ರೆಯು ಎಲ್ಲರಿಗೂ ಆದರ್ಶವಾಗಿದೆ. ಅವರ ಈ ಜೀವನ ಯಾತ್ರೆಯ ಅವಲೋಕನ ಮಾಡಿ ನಾವು ನಮ್ಮ ದುಃಖಗಳನ್ನು ಮರೆಯೋಣ.
ಹೊಲದಲ್ಲಿ ಭಾವಪೂರ್ಣವಾಗಿ ಕೆಲಸಮಾಡಿ
ಸಂತಪದವಿಯನ್ನು ಪ್ರಾಪ್ತ ಮಾಡಿಕೊಂಡ ಸನಾತನದ ಪೂ
. ಶಂಕರ

ಗುಂಜೇಕರರವರು ಆತ್ಮಹತ್ಯೆ ಮಾಡಲು ಯತ್ನಿಸುವ ರೈತರಿಗೆ ನೀಡಿದ ಸಂದೇಶ !
ರೈತ ಬಾಂಧವರೇ, ಹೊಲದಲ್ಲಿ ಸಾಧನೆಯೆಂದು
ಕೆಲಸ ಮಾಡಿದರೆ ಮಾತ್ರ ನಿಮಗೆ ಪರಮೇಶ್ವರನ ಸಹಾಯ ಲಭಿಸುತ್ತದೆ !
ಸದ್ಯ ಭಾರತದ ರೈತರ ಸ್ಥಿತಿ ತುಂಬಾ ದಯನೀಯವಾಗಿದೆ. ಅವರ ಆಹಾರ, ಉಡುಗೆ, ನಿವಾಸಗಳಂತಹ ಮೂಲಭೂತ ಆವಶ್ಯಕತೆಗಳು ಸಹ ಪೂರ್ಣವಾಗುವುದಿಲ್ಲ. ಆದುದರಿಂದ ಇಂತಹ ಜೀವನಕ್ಕೆ ಬೇಸತ್ತು ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರವೃತ್ತರಾಗುತ್ತಾರೆ.
ರೈತರು ತಮ್ಮ ಸ್ವಾರ್ಥಕ್ಕಾಗಿ ಹೊಲದಲ್ಲಿ ಕೆಲಸ ಮಾಡುತ್ತಿರುವುದರಿಂದ ಅದರಿಂದ ಅವರಿಗೆ ಏನೂ ಸಾಧ್ಯವಾಗುವುದಿಲ್ಲ. ಇದಕ್ಕಿಂತ ಸಾಧನೆಯೆಂದು ಹೊಲದಲ್ಲಿ ಕೆಲಸ ಮಾಡಿದರೆ ಅವರಿಗೆ ದೇವರ ಸಹಾಯ ಲಭಿಸುತ್ತದೆ.’ ಅದೇರೀತಿ ನಮ್ಮ ಅವಶ್ಯಕತೆಗಳನ್ನು ಪೂರ್ಣಗೊಳಿಸಲು ಅವರು ಸರಕಾರವನ್ನು ಅವಲಂಬಿಸಿರುವುದಕ್ಕಿಂತ ಸರ್ವಜ್ಞನಾದ ಪರಮೇಶ್ವರನನ್ನು ಅವಲಂಬಿಸಿದರೆ ಮಾತ್ರ ಅವರಲ್ಲಿ ಸರ್ವಾಂಗೀಣ ಪ್ರಗತಿಯಾಗಲು ಸಾಧ್ಯ.’
- ಪೂ. ಶಂಕರ ಗುಂಜೇಕರ, ರಾಮನಗರ, ಬೆಳಗಾವಿ. (..೨೦೧೬)

. ಕಠಿಣ ಬಾಲ್ಯ
೧ ಅ. ಚಿಕ್ಕಂದಿನಿಂದಲೇ ದೇವರ ಬಗ್ಗೆ ಆಸಕ್ತಿಯಿರುವುದು : ಪೂ. ಗುಂಜೇಕರ ಮಾಮನವರಿಗೆ ಚಿಕ್ಕಂದಿನಲ್ಲಿಯೇ ದೇವರ ಬಗ್ಗೆ ಆಸಕ್ತಿಯಿತ್ತು. ಮನೆಯಲ್ಲಿ, ಹೊರಗೆ ಅಥವಾ ಹೊಲದಲ್ಲಿ ಕಾಣುವ ಕಲ್ಲು-ಮಣ್ಣುಗಳಲ್ಲಿ ಅವರು ದೇವರನ್ನು ನೋಡುತ್ತಿದ್ದರು. ಮಣ್ಣಿನಿಂದ ಶಿವಲಿಂಗವನ್ನು ತಯಾರಿಸುವುದು, ಅದರ ಪೂಜೆ ಮಾಡುವುದು, ಇತ್ಯಾದಿ ಅವರ ಇಷ್ಟವಾದ ಹವ್ಯಾಸಗಳಾಗಿದ್ದವು.
೧ ಆ. ಮನೆಯ ಆರ್ಥಿಕ ಸ್ಥಿತಿ ತೀರ ಹದಗೆಟ್ಟಿದ್ದರಿಂದ ಶಿಕ್ಷಣವನ್ನು ಬಿಟ್ಟು ಹೊಲದಲ್ಲಿ ಕೆಲಸ ಮಾಡುವುದು : ಪೂ. ಮಾಮಾರವರ ಮನೆಯ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿತ್ತು. ಈ ಬಿಕ್ಕಟ್ಟಿನ ಸ್ಥಿತಿಯಲ್ಲಿ ತಂದೆ-ತಾಯಿ ಮತ್ತು ಎಂಟು ಜನ ಸಹೋದರ-ಸಹೋದರಿಯರು ಹೀಗೆ ಒಟ್ಟು ೧೦ ಜನರು ಒಂದೇ ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ನಿತ್ಯದ ಅನ್ನ, ಉಡುಗೆ-ತೊಡುಗೆಗಳಂತಹ ಮೂಲಭೂತ ಅವಶ್ಯಕತೆಗಳನ್ನು ಸಹ ಪೂರ್ಣಗೊಳಿಸಲು ಅವರಿಗೆ ಸಾಧ್ಯವಿರಲಿಲ್ಲ. ಇವುಗಳನ್ನು ಪೂರ್ಣಗೊಳಿಸುವುದಕ್ಕಾಗಿ ಪೂ. ಮಾಮಾರವರು ತಮ್ಮ ಇತರ ಸಹೋದರರಿಗೆ ಸ್ವಲ್ಪ ಮಟ್ಟಿಗೆ ಶಾಲೆಯ ಶಿಕ್ಷಣ ಪಡೆದುಕೊಳ್ಳಲು ಹೇಳಿ ಸ್ವತಃ ಹೊಲದಲ್ಲಿ ಕೆಲಸ ಮಾಡುತ್ತಿದ್ದರು.
೧ ಇ. ಹದಿನೈದು ವರ್ಷಗಳ ಕಾಲ ಅವರು ಕೇವಲ ಗಂಜಿನೀರು ಕುಡಿದು ಜೀವನ ಸಾಗಿಸುವುದು :
ಪೂ. ಮಾಮಾರವರು ಮತ್ತು ಅವರ ಸಹೋದರರಿಗೆ ಊಟ ಮಾಡಲು ಬೇಕಾಗುವಷ್ಟು ಅನ್ನ ಇರುತ್ತಿರಲಿಲ್ಲ. ಹೊಲದಲ್ಲಿ ಬೆಳೆಯುವ ಅಕ್ಕಿಯ ಅನ್ನ ಮಾಡಿ ತಂದೆ-ತಾಯಿಗೆ ನೀಡುತ್ತಿದ್ದರು. ತಂದೆ-ತಾಯಿಯರು ಅವರ
ಊಟದ ಬಗ್ಗೆ ಕೇಳಿದಾಗ ಅವರು ಪ್ರತೀಬಾರಿ ‘ಒಳಗಡೆ ಒಲೆಯಲ್ಲಿ ಅನ್ನ ಇಟ್ಟಿದ್ದೇನೆ. ನಾವು ನಂತರ ಊಟ ಮಾಡುತ್ತೇವೆ’ ಎಂದು ಹೇಳುತ್ತಿದ್ದರು. ಆದರೆ ಪ್ರತ್ಯಕ್ಷದಲ್ಲಿ ೧೫ ವರ್ಷ ಅವರು ಕೇವಲ ಗಂಜಿನೀರನ್ನು ಸೇವಿಸಿ ಬದುಕಿದರು.
. ಚಿಕ್ಕಂದಿನಲ್ಲಿಯೇ ಕುಟುಂಬದ ಜವಾಬ್ದಾರಿ ಬರುವುದು
೨ ಅ. ಅವಿತುಕೊಂಡು ಹೊಲದಲ್ಲಿ ಕೆಲಸ ಮಾಡಲು ಕಲಿಯುವುದು : ಪೂ. ಮಾಮನವರಿಗೆ ಹೊಲ ಊಳಲು ಬರುತ್ತಿರಲಿಲ್ಲ ಮತ್ತು ಕಲಿಸುವವರೂ ಯಾರೂ ಇರಲಿಲ್ಲ. ಆದುದರಿಂದ ಪೂ. ಮಾಮಾನವರು ಬೇರೆ ರೈತರು ಹೊಲದಲ್ಲಿ ಕೆಲಸ ಮಾಡುವುದನ್ನು ಅವಿತುಕೊಂಡು ನೋಡುತ್ತಿದ್ದರು ಮತ್ತು ‘ಹೊಲದಲ್ಲಿ ಊಳುಮೆ ಹೇಗೆ ಮಾಡುವುದು ? ಕೊಯ್ಲು ಹೇಗೆ ಮಾಡುವುದು ?’, ಎನ್ನುವುದನ್ನು ಕಲಿಯುತ್ತಿದ್ದರು.
೨ ಆ. ತೊಡಲು ಬಟ್ಟೆ ಇಲ್ಲದಿರುವುದರಿಂದ ಹೊಲದಲ್ಲಿ ನಿಲ್ಲಿಸಿದ ಬೆದರುಗೊಂಬೆಗೆ ಹಾಕಿದ ಬಟ್ಟೆಯನ್ನು ತೆಗೆದು ಅದನ್ನು ಸ್ವತಃ ತೊಡುವುದು : ಹೊಲಕ್ಕೆ ಹೋಗುವಾಗ ಮೈಮುಚ್ಚಿಕೊಳ್ಳಲು ಬಟ್ಟೆ ಇಲ್ಲದಿರುವುದರಿಂದ ಪೂ. ಮಾಮಾರವರು ನಸುಕಿನಲ್ಲಿ ೩ ಗಂಟೆಗೆ ಹೊರಡುತ್ತಿದ್ದರು, ಕತ್ತಲಲ್ಲಿ ಯಾರೂ ನೋಡಬಾರದೆಂದು ರಸ್ತೆಯ ಬದಿಯ ಹೊಲದಲ್ಲಿರುವ ಬೆದರುಗೊಂಬೆಗೆ ಹಾಕಿದ ಬಟ್ಟೆ ತೆಗೆದು ಅವರು ಸ್ವತಃ ತೊಡುತ್ತಿದ್ದರು. ಕಾಲಿಗೆ ಚಪ್ಪಲಿಯೂ ಇರಲಿಲ್ಲ. ರಸ್ತೆಯಲ್ಲಿ ಬಿದ್ದಿರುವ ಹರಿದ ಚಪ್ಪಲಿ ತೆಗೆದುಕೊಂಡು ಅದನ್ನು ಹೊಲಿದು ಉಪಯೋಗಿಸುತ್ತಿದ್ದರು.
. ಹೊಲದಲ್ಲಿ ಕೆಲಸ ಮಾಡುವಾಗ ಪೂ. ಮಾಮಾರಿಗೆ ಬಂದ ಅಲೌಕಿಕ ಅನುಭೂತಿ
ಮನೆಯ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದ್ದರೂ
ಸಾಧನೆಯ ಚೈತನ್ಯದಿಂದಾಗಿ ಆನಂದದಿಂದ
ಇರುವ ಪೂ. ಶಂಕರ ಗುಂಜೇಕರ ಮಾಮಾ !
ಪೂ. ಮಾಮಾರವರು ಖರೀದಿಸಿದ ಹೊಲದ ಜಾಗವು ಮನೆಯಿಂದ ೬ ಕಿ.ಮೀ. ದೂರದಲ್ಲಿದೆ. ಮನೆಯಿಂದ ಪೂ. ಮಾಮಾರವರು ಪ್ರತೀದಿನ ಕಾಲ್ನಡಿಗೆಯ ಮೂಲಕ ಅಥವಾ ಸೈಕಲ್‌ನಲ್ಲಿ ಹೋಗುತ್ತಾರೆ. ಹೊಲಕ್ಕೆ ಹೋಗುವಾಗ ದಟ್ಟವಾದ ಅರಣ್ಯ ಮಾರ್ಗದಿಂದ ಹೋಗಬೇಕಾಗುತ್ತದೆ. ಈ ಅರಣ್ಯದಲ್ಲಿ ಕ್ರೂರ ಪ್ರಾಣಿಗಳು, ಸರ್ಪ ಮತ್ತು ನಾಗರಹಾವುಗಳು ಇರುತ್ತವೆ; ಆದರೆ ನಮ್ಮ ರಕ್ಷಣೆ ಮಾಡುವವನು ಪ್ರತ್ಯಕ್ಷ ಭಗವಂತನಿರುವಾಗ, ನಾವು ಕ್ರೂರ ಪ್ರಾಣಿಗಳಿಗೆ ಭಯ ಪಡುವುದೇಕೆ ? ಪೂ. ಮಾಮಾನವರು ಸಾಧನೆಯೆಂದು ಹೊಲದಲ್ಲಿ ಸೇವೆ ಮಾಡಿದ್ದರಿಂದ ಅವರು ಅನುಭವಿಸಿದ ಅನುಭೂತಿಗಳು ವೈಶಿಷ್ಟ್ಯಪೂರ್ಣ ಮತ್ತು ಅಲೌಕಿಕವಾಗಿರುತ್ತವೆ.
೩ ಅ. ಸಾಕಷ್ಟು ಗೊಬ್ಬರ ಇಲ್ಲದಿರುವಾಗ ಮತ್ತು ಬರಗಾಲ ಬಂದುದರಿಂದ ನೀರು ಇಲ್ಲದಿದ್ದರೂ ನಾಲ್ಕು ಪಟ್ಟು ಫಸಲು ಬರುವುದು (ಈ ಬಗ್ಗೆ ವಿಜ್ಞಾನನಿಷ್ಠರು ಏನು ಹೇಳುತ್ತಾರೆ ?) : ಪೂ. ಮಾಮಾರವರು ಹೊಲಕ್ಕಾಗಿ ಖರೀದಿಸಿದ ಭೂಮಿಯಲ್ಲಿ ಹಿಂದೆ ೧-೨ ಜನರ ಕೊಲೆಯಾಗಿದೆ. ಆದುದರಿಂದ ಈ ಮೊದಲು ಆ ಹೊಲದಲ್ಲಿ ಕೆಲಸ ಮಾಡಿದ ವ್ಯಕ್ತಿಗಳಿಗೆ ಅನೇಕ ಅಡಚಣೆಗಳು ಬರುತ್ತಿದ್ದವು. ಆದುದರಿಂದ ಅನೇಕ ಜನರು ಪೂ. ಮಾಮಾರವರಿಗೆ ಆ ಹೊಲದ ಭೂಮಿಯನ್ನು ಖರೀದಿಸಬೇಡಿ’, ಎಂದು ಹೇಳುತ್ತಿದ್ದರು. ಆದರೆ ಭೂಮಿಯು ಕಡಿಮೆ ಬೆಲೆಯಲ್ಲಿ ಸಿಗುತ್ತಿದ್ದುದರಿಂದ ‘ಮುಂದೆ ದೇವರೆ ಕಾಪಾಡುತ್ತಾನೆ’, ಎಂಬ ವಿಚಾರ ಮಾಡಿ ಅವರು ಆ ಭೂಮಿಯನ್ನು ಖರೀದಿಸಿದರು. ಆರಂಭದಲ್ಲಿ ಆ ಭೂಮಿಯಲ್ಲಿ ಬೇಸಾಯ ಮಾಡಿದಾಗ ೮-೯ ಚೀಲಗಳಷ್ಟು ಮಾತ್ರ ಭತ್ತ ಬೆಳೆಯುತ್ತಿತ್ತು. ಬೇಸಾಯ ಮಾಡಲು ಸಾಕಷ್ಟು ಗೊಬ್ಬರ ಇಲ್ಲದಿರುವಾಗ ಮತ್ತು ಬರಗಾಲ ಬಂದುದರಿಂದ ನೀರು ಇಲ್ಲದಿದ್ದರೂ ೨೦೧೫ ರಲ್ಲಿ ೩೭ ಚೀಲ ಭತ್ತ ಬೆಳೆಯಿತು, ಅಂದರೆ ನಾಲ್ಕು ಪಟ್ಟು ಫಸಲು ಬಂತು.
೩ ಆ. ‘ಗುಡಿಸಲಿನ ಹೊರಗೆ ಹೋಗಬೇಡ’, ಎಂದು ಧ್ವನಿ ಕೇಳಿ ಬರುವುದು, ಆಜ್ಞಾಪಾಲನೆ ಮಾಡಬೇಕೆಂದು ಗುಡಿಸಲಿನ ಹೊರಗೆ ಹೋಗದೇ ೬ ಗಂಟೆ ನಾಮಜಪ ಮತ್ತು ಮಂಡಲ ಹಾಕುತ್ತಾ ಗುಡಿಸಲಿನಲ್ಲೇ ಉಳಿಯುವುದು : ಮಳೆಗಾಲದಲ್ಲಿ ಪೂ. ಮಾಮಾರವರು ೩-೪ ತಿಂಗಳು ಹೊಲದಲ್ಲಿ ಒಬ್ಬರೇ ಅವರ ಗುಡಿಸಲಿನಲ್ಲಿ ಇರುತ್ತಿದ್ದರು. ಸುತ್ತಲೂ ದಟ್ಟವಾದ ಅರಣ್ಯ ಇದ್ದುದರಿಂದ ಆ ಸ್ಥಳದಲ್ಲಿ ರಾತ್ರಿ ಹೊತ್ತು ಒಬ್ಬರೇ ನಿಲ್ಲುವುದು ತುಂಬಾ ಕಠಿಣವಾಗಿತ್ತು. ಒಂದು ದಿನ ಪೂ. ಮಾಮಾರವರು ಹೊಲದಲ್ಲಿ ಕೆಲಸ ಮಾಡಿ ಸಾಯಂಕಾಲ ೬ ಗಂಟೆಗೆ ಗುಡಿಸಲಿಗೆ ಬಂದಿದ್ದರು. ಆಗ ಮೂತ್ರವಿಸರ್ಜನೆಗೆಂದು ಪೂ. ಮಾಮಾರವರು ಹೊರಗೆ ಹೋಗುವವರಿದ್ದರು, ಅಷ್ಟರಲ್ಲಿ ಗುಡಿಸಲಿನಲ್ಲಿ ‘ನೀನು ಈಗ ಹೊರಗೆ ಹೋಗ ಬೇಡ’ ಎಂಬ ಧ್ವನಿ ಕೇಳಿತು. ಪೂ. ಮಾಮಾರವರು ಎಲ್ಲೆಡೆ ಗಮನ ಹರಿಸಿದರು. ಗುಡಿಸಲಿನಲ್ಲಿ ಯಾರೂ ಇರಲಿಲ್ಲ. ಪೂ. ಮಾಮಾರವರಿಗೆ ಸ್ವಲ್ಪ ಸಿಟ್ಟು ಬಂತು. ಆ ಧ್ವನಿಗೆ ಮರು ಉತ್ತರವೆಂದು ಸಿಟ್ಟಿನಿಂದ, ‘ನಾನು ಹೊರಗೆ ಹೋಗುವೆನು, ನನಗೆ ಎಂತಹ ಭಯ ?’ ಎಂದರು. ಮಾಮಾರವರ ಈ ಮಾತಿಗೆ ಪುನಃ ಉತ್ತರ ಬಂತು, ‘ನಾನು ಹೇಳುತ್ತೇನೆ; ಈಗ ಹೊರಗೆ ಹೋಗಬೇಡ’ ಎಂದು ಹೇಳಿದಾಗ, ಆ ಧ್ವನಿಯ ಆಜ್ಞೆಯ ಪಾಲನೆ ಮಾಡಲು ಪೂ. ಮಾಮಾರವರು ಗುಡಿಸಲಿನಲ್ಲಿಯೇ ಕುಳಿತರು ಮತ್ತು ಅವರು ತಮ್ಮ ಸುತ್ತ ಹಾಗೂ ಗುಡಿಸಲಿನ ಸುತ್ತಲೂ ಮತ್ತು ಹೊಲದ ಸುತ್ತಲೂ ನಾಮಜಪದ ಮಂಡಲ ಹಾಕಲು ಪ್ರಾರಂಭಿಸಿದರು. ಸಂಜೆ ೭ ರಿಂದ ರಾತ್ರಿ ೧ ಗಂಟೆಯವರೆಗೆ ಪೂ. ಮಾಮಾರವರು ಮಂಡಲವನ್ನೇ ಹಾಕುತ್ತಿದ್ದರು. ಪೂ. ಮಾಮಾರವರು ಪ್ರಾರ್ಥನೆ ಮಾಡಿ ಪುನಃ ಕೇಳಿದರು, ‘ಈಗಲಾದರೂ ನಾನು ಮೂತ್ರವಿಸರ್ಜನೆಗೆ ಹೋಗಬಹುದೇ ?’ ಅದಕ್ಕೆ ‘ಈಗ ನೀನು ಹೋಗಬಹುದು’ ಎಂದು ಮರು ಉತ್ತರ ಬಂತು. ನಂತರ ಈ ಪ್ರಸಂಗವನ್ನು ಸದ್ಗುರು (ಸೌ.) ಅಂಜಲಿ ಗಾಡಗೀಳಕಾಕೂರವರಿಗೆ ಹೇಳಿದಾಗ ಅವರು, ‘ಒಳಗಿನಿಂದ ಬರುತ್ತಿದ್ದ ಈ ಧ್ವನಿಯು ಒಳ್ಳೆಯ ಶಕ್ತಿಯದ್ದಾಗಿತ್ತು. ಹೊರಗೆ ಹೋಗುತ್ತಿದ್ದರೆ ತೊಂದರೆಯಾಗುತ್ತಿತ್ತೆಂದು ಒಳ್ಳೆಯ ಶಕ್ತಿಯು ‘ಹೊರಗೆ ಹೋಗಬೇಡ’ ಎಂದು ಹೇಳಿತು’ ಎಂದರು.
ಪೂ. ಮಾಮಾರವರು ಅನಾರೋಗ್ಯದಿಂದ
ಬಳಲುತ್ತಿದ್ದಾಗ ಅವರ ಗುಡಿಸಲಿನಲ್ಲಿ ಸಾಕ್ಷಾತ್ ಶಿವನು ದರ್ಶನ
ನೀಡಿದ್ದಾನೆ
. ಗುಡಿಸಲಿನಲ್ಲಿ ಸಾಕ್ಷಾತ್ ಶಿವನ ಅಸ್ತಿತ್ವ ಇರುವುದರಿಂದ ಅಲ್ಲಿ
ತುಂಬಾ ತಂಪೆನಿಸುತ್ತದೆ
. ಅದೇರೀತಿ ಈ ಗುಡಿಸಲಿನ ಪಕ್ಕದಲ್ಲಿ ತಾನಾಗಿ ಬೆಳೆದ
ಬಿಲ್ವಪತ್ರೆಯಗಿಡವು ಗುಡಿಸಲಿನಲ್ಲಿ ಕಾರ್ಯನಿರತವಾಗಿರುವ ಶಿವತತ್ತ್ವಕ್ಕೆ ಸಾಕ್ಷಿನೀಡುತ್ತದೆ
.
೩ ಇ. ಪ್ರತ್ಯಕ್ಷ ಕ್ಷೇತ್ರಪಾಲ ದೇವರು ಹೊಲದ ರಕ್ಷಣೆ ಮಾಡುತ್ತಿದ್ದಾರೆಂದು ಪೂ. ಮಾಮಾರವರು ಹೇಳುವುದು : ಒಮ್ಮೆ ಪೂ. ಮಾಮಾರವರು ಹೊಲದಲ್ಲಿ ಕೆಲಸ ಮುಗಿಸಿ ಸಂಜೆ ಮನೆಗೆ ಬಂದರು; ಆದರೆ ರಾತ್ರಿಯ ಸಮಯದಲ್ಲಿ ಹೊಲದ ಗುಡಿಸಲಿನಲ್ಲಿ ಯಾರೋ ಮಲಗಿದ್ದಾರೆ, ಎಂದು ಊರ ಜನರಿಗೆ ಕಾಣಿಸಿತು. ಊರಿನ ಒಬ್ಬ ವ್ಯಕ್ತಿಯು ಗುಡಿಸಲಿನ ಬಳಿ ಪೂ. ಮಾಮಾರವರನ್ನು ಕರೆದನು. ಆದರೆ ಯಾರೂ ಓಗೊಡಲಿಲ್ಲ. ‘ಪೂ ಮಾಮಾರವರು ಗಾಢ ನಿದ್ರೆಯಲ್ಲಿರಬಹುದು’ ಎಂದು ತಿಳಿದು ಅವರು ಅಲ್ಲಿಂದ ಹೊರಟು ಹೋದರು. ಮರುದಿನ ಹೊಲದಲ್ಲಿ ಪೂ. ಮಾಮಾರವರು ಭೇಟಿಯಾದಾಗ ಅವರು ಮಾಮಾರನ್ನು ಉದ್ದೇಶಿಸಿ, ನಿನ್ನೆ ರಾತ್ರಿ ನಾನು ಎಷ್ಟು ಕರೆದರೂ ನೀವು ಉತ್ತರಿಸಲೇ ಇಲ್ಲ ?’ ಎಂದರು. ಆಗ ಪೂ. ಮಾಮಾರವರು ‘ಇಲ್ಲ, ನಾಳೆ ಖಂಡಿತ ಉತ್ತರಿಸುವೆನು’ ಎಂದರು. ಮತ್ತೆ ಮರುದಿನ ಊರ ಜನರಿಗೆ ಅಲ್ಲಿ ಯಾರೋ ಮಲಗಿರುವಂತೆ ಮತ್ತು ಬಿಸಿಗಾಗಿ ಬೆಂಕಿ ಮಾಡಿರುವಂತೆ ಕಂಡಿತು. ಬೆಳಗಿನ ಜಾವ ಊರಿನ ಒಬ್ಬ ವ್ಯಕ್ತಿಯು ನೋಡಿದಾಗ ಅಲ್ಲಿ ಯಾರೂ ಇರಲಿಲ್ಲ; ಆದರೆ ಬೆಂಕಿ ಮಾತ್ರ ಉರಿಯುತ್ತಿತ್ತು. ಆ ವ್ಯಕ್ತಿಯು ಪೂ. ಮಾಮಾರವರಿಗೆ ಕೇಳಿದಾಗ ಪೂ. ಮಾಮಾರವರು, ‘ನಾನು ರಾತ್ರಿ ಹೊಲದಲ್ಲಿ ಇರುವುದೇ ಇಲ್ಲ. ನನ್ನ ಹೊಲದ ರಕ್ಷಣೆಯನ್ನು ಕ್ಷೇತ್ರಪಾಲ ದೇವರೇ ಮಾಡುತ್ತಾನೆ. ಹೀಗಾಗಿ ನಿಮ್ಮ ಕರೆಗೆ ಅವನು ಉತ್ತರಿಸಲಿಲ್ಲ’ ಎಂದರು.
೩ ಈ. ಕೆಸರಿರುವುದರಿಂದ ಟ್ರ್ಯಾಕ್ಟರ್‌ನ ಮೂಲಕ ಭತ್ತವನ್ನು ತರಲು ಸಾಧ್ಯವಿಲ್ಲದಿದ್ದರೂ ದೇವರ ಕೃಪೆಯಿಂದ ಅದು ಸಾಧ್ಯವಾಗುವುದು, ಟ್ರ್ಯಾಕ್ಟರ್‌ಗೆ ಕಟ್ಟಿದ ಹಗ್ಗ ಬಿಚ್ಚಿದರೂ ಒಂದು ಚೀಲವೂ ಕೆಳಗೆ ಬೀಳದಿರುವುದು ಮತ್ತು ಆ ಹೊತ್ತಿಗೆ ಕ್ಷೇತ್ರಪಾಲದೇವರು ದರ್ಶನ ನೀಡುವುದು : ಒಮ್ಮೆ ಹೊಲದಲ್ಲಿ ನೀರು ನಿಂತಿರುವಾಗ ಪೂ. ಮಾಮಾರವರಿಗೆ ಭತ್ತವನ್ನು ಹೊಲದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಕೊಂಡೊಯ್ಯಲಿಕ್ಕಿತ್ತು. ನಿಂತ ನೀರಿನಲ್ಲಿ ಟ್ರ್ಯಾಕ್ಟರ್ ಹೋಗಲು ಸಾಧ್ಯವಿರಲಿಲ್ಲ; ಆದರೆ ಬೇರೆ ದಾರಿಯಿಲ್ಲದೇ ಪೂ. ಮಾಮಾರವರು, ‘ದೇವರೇ ನನಗೆ ಸಹಾಯ ಮಾಡುವನು. ಈಗ ಬೇರೆ ದಾರಿ ಇಲ್ಲ. ನಿನ್ನ ಟ್ರ್ಯಾಕ್ಟರಿಗೆ ಏನಾದರೂ ಆದರೆ ಅದನ್ನು ನಾನು ಭರಿಸುತ್ತೇನೆ; ಆದರೆ ಈಗ ಟ್ರ್ಯಾಕ್ಟರನ್ನು ನೀನು ನೀರಿನಲ್ಲಿ ತೆಗೆದುಕೊಂಡು ಹೋಗು’ ಎಂದರು. ಟ್ರ್ಯಾಕ್ಟರಿನ ಮಾಲೀಕನು ಪೂ. ಮಾಮಾ ಹೇಳಿದಂತೆ ಟ್ರ್ಯಾಕ್ಟರನ್ನು ನೀರಿನಲ್ಲಿ ಒಯ್ಯಲು ಪ್ರಾರಂಭಿಸಿದನು, ಆಗ ಚಮತ್ಕಾರವಾಯಿತು. ಟ್ರ್ಯಾಕ್ಟರ್ ನೀರಿನ ಮೇಲೆ ತೇಲಿ ಹೋದಂತೆ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ತಲುಪಿತು. ಟ್ರ್ಯಾಕ್ಟರ್ ಅರ್ಧ ದಾರಿಗೆ ತಲುಪಿದಾಗ ಅದರ ಹಿಂದಿನಿಂದ, ‘ಹಿಂದೆ ತಿರುಗಿ ನೋಡು’ ಎಂಬ ಧ್ವನಿ ಕೇಳಿತು. ಪೂ. ಮಾಮಾ ನೋಡಿದಾಗ ಟ್ರ್ಯಾಕ್ಟರಿಗೆ ಕಟ್ಟಿದ ಹಗ್ಗ ಬಿಚ್ಚಿತ್ತು; ಆದರೆ ಒಂದು ಚೀಲವೂ ನೀರಿಗೆ ಬಿದ್ದಿರಲಿಲ್ಲ. ಪೂ. ಮಾಮಾರವರು ‘ತಾವು ಯಾರು ?’ಎಂದು ಕೇಳಿದಾಗ ಪೂ. ಮಾಮಾರಿಗೆ ಪ್ರಥಮ ಬಾರಿ ಕ್ಷೇತ್ರಪಾಲ ದೇವರ ದರ್ಶನವಾಯಿತು. ನಂತರ ಕ್ಷೇತ್ರಪಾಲ ದೇವರಿಗೆ ನಮಸ್ಕರಿಸಿದರು.
೩ ಉ. .ಪೂ. ಡಾಕ್ಟರರಂತಹ ಗುರುಗಳು ಸಿಗಲು, ಪರಮ ಭಾಗ್ಯವೇ ಬೇಕು, ಅವರು ಹೇಳುವಂತೆ ಮಾಡಲು ಕ್ಷೇತ್ರಪಾಲ ದೇವರು ಹೇಳುವುದು :
ಆ ನಂತರ ಪೂ. ಮಾಮನವರಿಗೆ ಹೊಲದಲ್ಲಿ ಆಗಾಗ ಕ್ಷೇತ್ರಪಾಲ ದೇವರ ದರ್ಶನವಾಗತೊಡಗಿತು. ಒಮ್ಮೆ ಹೊಲದ ಕೆಲಸ ಮುಗಿಸಿ ಪೂ. ಮಾಮನವರು ಅವರ ಗುಡಿಸಲಿನಲ್ಲಿ ಕುಳಿತಿರುವಾಗ ಅವರಿಗೆ ಕ್ಷೇತ್ರಪಾಲ ದೇವರ ದರ್ಶನವಾಯಿತು. ನಂತರ ಕ್ಷೇತ್ರಪಾಲ ದೇವರು ಮತ್ತು ಪೂ.ಮಾಮನವರಲ್ಲಿ ಮುಂದಿನ ಸಂಭಾಷಣೆಯಾಯಿತು.
ಪೂ. ಮಾಮ : ನೀವು ಪ.ಪೂ. ಡಾಕ್ಟರರನ್ನು ಗುರುತ್ತಿಸುತ್ತೀರಾ ?
ಕ್ಷೇತ್ರಪಾಲ ದೇವರು : ಹೌದು. ಅವರಂತಹ ಗುರುಗಳು ಸಿಗುವುದು, ನಿನ್ನ ಪರಮ ಭಾಗ್ಯವೇ ಆಗಿದೆ. ಅವರು ಹೇಳುವುದನ್ನು ಮಾಡುತ್ತಾ ಹೋಗು. ಅದರಲ್ಲಿಯೇ ನಿನ್ನ ಕಲ್ಯಾಣವಿದೆ.
ಪೂ. ಮಾಮ : ನೀವು ನನ್ನ ಕುಲದೇವತೆಯ ದರ್ಶನ ಮಾಡಿದ್ದೀರಾ ?
ಕ್ಷೇತ್ರಪಾಲದೇವರು : ಅವಳೇ ನಿನ್ನ ರಕ್ಷಣೆಗೆಂದು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾಳೆ.

ಪೂ. ಮಾಮಾರವರ ಮನೆಗೆ ಪ್ರತಿದಿನ ಬೆಳಗ್ಗೆ ಗೋಮಾತೆ ಬರುತ್ತಾಳೆ
ಮತ್ತು ಪೂ
. ಮಾಮಾರವರ ಕೈಯಿಂದ ರೊಟ್ಟಿ ತಿನ್ನದೇ ಹೋಗುವುದಿಲ್ಲ.
೩ ಊ. ಪೂ. ಮಾಮನವರು ದೇವರಿಗೆ ಪ್ರಾರ್ಥನೆ ಮಾಡಿದ ನಂತರ ಪ್ರಜ್ಞೆ ತಪ್ಪಿದ ಎತ್ತು ಎಚ್ಚರಗೊಳ್ಳುವುದು : ಒಮ್ಮೆ ಹೊಲದಲ್ಲಿ ನೇಗಿಲಿಗೆ ಕಟ್ಟುವ ಎತ್ತಿನ ಜೋಡಿಯಲ್ಲಿ ಒಂದು ಎತ್ತಿಗೆ ಹಾವು ಕಚ್ಚಿತು. ಆಗ ಪೂ. ಮಾವನವರಿಗೆ ತುಂಬಾ ಚಿಂತೆಯಾಯಿತು. ‘ಈಗ ಹೊಲದಲ್ಲಿ ಹೇಗೆ ಕೆಲಸ ಮಾಡುವುದು ?’, ಎಂಬ ಪ್ರಶ್ನೆ ಬಂತು. ಇದರಿಂದ ಅವರಿಗೆ ಅಳು ಬರುತ್ತಿತ್ತು. ತುಂಬಾ ಸಮಯದವರೆಗೆ ಅಸ್ವಸ್ತರಾಗಿ ಅವರಿಗೆ ನಿದ್ರೆಯೂ ಬರಲಿಲ್ಲ. ಪೂ. ಮಾಮನವರು ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದರಲ್ಲಿ ವಿಭೂತಿ ಹಾಕಿ ಆ ನೀರನ್ನು ಪ್ರಜ್ಞೆ ತಪ್ಪಿ ಬಿದ್ದ ಎತ್ತಿನ ಮೇಲೆ ಸಿಂಪಡಿಸಿ, ಪ್ರಾರ್ಥನೆ ಮಾಡಿದರು, ‘ಎತ್ತಿಗೆ ಏರಿದ ಎಲ್ಲ ವಿಷವು ಇದರಲ್ಲಿ ಎಳೆಯಲ್ಪಡಲಿ,’ ಎಂದು ಹೇಳಿ ಅವರು ಮತ್ತೆ ಮಲಗಿದರು. ಸ್ವಲ್ಪ ಹೊತ್ತಿನ ನಂತರ ಎತ್ತು ಕೂಗುವ ಧ್ವನಿ ಕೇಳಿ ಬಂತು. ಪೂ. ಮಾಮನವರು ಗಾಬರಿಯಾಗಿ ಎಚ್ಚರಗೊಂಡರು. ಅವರು ಹೋಗಿ ನೋಡಿದಾಗ ಎತ್ತು ಎಚ್ಚರಗೊಂಡಿತ್ತು.
ಪೂ. ಗುಂಜೇಕರ ಮಾಮನವರರ ಅನುಭೂತಿಗಳು ಅಲೌಕಿಕವಾಗಿವೆ. ಪೂ. ಮಾಮನವರಿಗೆ ದೇವರ ಮೇಲಿರುವ ಧೃಢವಾದ ಶ್ರದ್ಧೆಯಿಂದಾಗಿ ಅವರಿಗೆ ಇಂತಹ ಅನುಭೂತಿಗಳು ಬರುತ್ತವೆ.’ - ಕು. ಪ್ರಿಯಾಂಕಾ ಲೋಟಲೀಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನದ ೫೬ ನೇ ಸಂತರಾದ ಪೂ. ಶಂಕರ ಗುಂಜೇಕರ್‌ರವರ ಕಠಿಣ ಜೀವನ ಯಾತ್ರೆ ಮತ್ತು ಅವರು ಅನುಭವಿಸಿದ ಅಲೌಕಿಕ ಅನುಭೂತಿಗಳು