ಭಾರತ ಬಹಳ ಹಿಂದೆಯೇ ಸೈನ್ಯ ಕಾರ್ಯಾಚರಣೆ ಮಾಡಬೇಕಿತ್ತು ! - ಬಲೂಚಿ ನಾಯಕರು

ನವದೆಹಲಿ : ಬಲೂಚಿಸ್ತಾನ ಹಾಗೂ ಜಗತ್ತಿನಲ್ಲಿರುವ ಬಲೂಚಿ ನಾಯಕರು ಭಾರತವು ಪಾಕ್‌ಆಕ್ರಮಿತ ಕಾಶ್ಮೀರದಲ್ಲಿ ಮಾಡಿದ ಸೈನ್ಯ ಕಾರ್ಯಾಚರಣೆಯನ್ನು ಸ್ವಾಗತಿಸಿದ್ದಾರೆ. ಇಂತಹ ಕಾರ್ಯಾಚರಣೆ ನಡೆಸುತ್ತಿರ ಬೇಕೆಂದು ಸಹ ವಿನಂತಿಸಿದ್ದಾರೆ.
೧. ಸ್ವಿಝರ್ಲ್ಯಾಂಡ್‌ನಲ್ಲಿರುವ ಬಲೂಚ್ ರಿಪಬ್ಲಿಕನ್ ಪಾರ್ಟಿಯ ವಕ್ತಾರ ಶೇರ್ ಮಹಮ್ಮದರವರು ಹೀಗೆಂದಿದ್ದಾರೆ, ಇಂತಹ ಕಾರ್ಯಾಚರಣೆಯನ್ನು ಬಹಳ ಹಿಂದೆಯೇ ಮಾಡಬೇಕಿತ್ತು. ಪಾಕಿಸ್ತಾನವು ಉಗ್ರವಾದಿಗಳಿಗೆ ಸ್ವರ್ಗವಾಗಿದೆ; ಆದರೆ ಜಗತ್ತಿಗೆ ಅದು ಅರ್ಬುದ ರೋಗವಾಗಿದೆ. ಅದನ್ನು ತಡೆಯದಿದ್ದರೆ ಅದು ಜಗತ್ತಿಗೇ ಅಪಾಯಕಾರಿಯಾಗುತ್ತದೆ.
೨. ಲಂಡನ್‌ನಲ್ಲಿನ ಫ್ರೀ ಬಲೂಚಿಸ್ತಾನ ಮೂವ್ ಮೆಂಟ್‌ನ ಫೈಜ್ ಮಹಮ್ಮದ ಬಲೂಚ್ ಇವರು ತಮ್ಮ ಹೇಳಿಕೆ ನೀಡುತ್ತಾ, ಇದು ಯೋಗ್ಯವಾದ ಹೆಜ್ಜೆಯಾಗಿದೆ. ಉರಿಯ ಆಕ್ರಮಣದ ಹಿಂದೆ ಪಾಕಿಸ್ತಾನದ ಕೈವಾಡವೇ ಇದೆ ಎಂಬುದು ಇಡೀ ಜಗತ್ತಿಗೇ ತಿಳಿದಿದೆ. ಶಾಂತಿ ಭಂಗ ಮಾಡುವವರ ವಿರುದ್ಧ ಕ್ರಮತೆಗೆದುಕೊಂಡಿರುವುದು ಯೋಗ್ಯವೇ ಆಗಿದೆ, ಎಂದರು.
೩. ದೆಹಲಿಯಲ್ಲಿನ ಪಾಕಿಸ್ತಾನದ ರಾಯಭಾರಿ ಕಛೇರಿಯ ಹೊರಗಡೆ ಪ್ರತಿಭಟನೆ ಮಾಡಿದ ಬಲೂಚಿ ನಾಗರಿಕರು ಭಾರತ ನಡೆಸಿದ ಸೈನ್ಯ ಕಾರ್ಯಾಚರಣೆಯನ್ನು ಸ್ವಾಗತಿಸಿದರಲ್ಲದೇ ಉಗ್ರವಾದಿಗಳನ್ನು ನಾಶಗೊಳಿಸುವವರೆಗೆ ಈ ಕಾರ್ಯಾಚರಣೆಯನ್ನು ಮುಂದುವರಿಸುವ ಅವಶ್ಯಕತೆಯಿದೆ ಎಂದು ಸಹ ಹೇಳಿದ್ದಾರೆ. 
೪. ಭಾರತದಲ್ಲಿನ ಬಲೂಚಿಸ್ತಾನದ ನಾಯಕ ಮಜದಕ ದಿಲಶಾದ ಬಲೂಚ್‌ರವರು ಹೀಗೆಂದಿದ್ದಾರೆ, ನಮಗೆ ಬಹಳ ಸಂತೋಷವಾಗಿದೆ. ಇಂತಹ ಕಾರ್ಯಾಚರಣೆ ರಾವಲ್‌ಪಿಂಡಿಯಲ್ಲಿಯೂ ಮಾಡಬೇಕೆಂಬುದು ನಮ್ಮ ಇಚ್ಛೆಯಾಗಿದೆ. ಅಲ್ಲಿ ನಿಜವಾದ ಉಗ್ರವಾದಿ ಗಳಿದ್ದಾರೆ. ಭಾರತ ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಸಂಘರ್ಷ ಮಾಡುತ್ತಿರುವ ಜನರ ರಕ್ಷಣೆಗಾಗಿ ಇಂತಹ ಕಾರ್ಯಾಚರಣೆ ಮಾಡಿದಾಗ ನಮಗೆ ಬಹಳ ಆನಂದವಾಗುವುದು.
೫. ಮಜದಕ ಇವರು ಮಾತು ಮುಂದುವರಿಸುತ್ತಾ, ಪಾಕ್ ಆಕ್ರಮಿತ ಕಾಶ್ಮೀರವೆಂದರೆ ಅನಧಿಕೃತವಾಗಿ ಕಬಳಿಸಿದ ಭಾರತದ ಅವಿಭಾಜ್ಯ ಅಂಗವಾಗಿದೆ. ಆದ್ದರಿಂದ ಭಾರತದ ಸೈನಿಕರು ಮಾಡಿದ ಕಾರ್ಯಾಚರಣೆ ಅಯೋಗ್ಯ ವಲ್ಲ, ಎಂದು ಹೇಳಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭಾರತ ಬಹಳ ಹಿಂದೆಯೇ ಸೈನ್ಯ ಕಾರ್ಯಾಚರಣೆ ಮಾಡಬೇಕಿತ್ತು ! - ಬಲೂಚಿ ನಾಯಕರು