ಹಿಂದೂ ಧರ್ಮದಲ್ಲಿರುವ ಯಜ್ಞದ ಹವನಗಳಿಂದ ನಿರ್ಮಾಣವಾಗುವ ಧೂಮ ಮತ್ತು ಇತರ ಕಾರಣಗಳಿಂದ ನಿರ್ಮಾಣವಾಗುವ ಹೊಗೆ

ಸೌ. ರಂಜನಾ ಗಡೇಕರ
ಇಲ್ಲಿ ಯಜ್ಞದಿಂದ ವಾತಾವರಣ ಮತ್ತು ಮಾನವನ ಮೇಲೆ ಯಾವ ರೀತಿಯಲ್ಲಿ ಒಳ್ಳೆಯ ಪರಿಣಾಮವಾಗುತ್ತದೆ ಎಂದು ವಿಶ್ಲೇಷಣೆ ಮಾಡಲಾಗಿದೆ. ಯಜ್ಞದ ಲಾಭ ತಿಳಿಯಬೇಕೆಂದು ಯಜ್ಞದ ಧೂಮ ಮತ್ತು ವಾಯು ಮಾಲಿನ್ಯಗೊಳಿಸುವ ಹಾನಿಕಾರಿ ಹೊಗೆಗಳ ತುಲನೆಯನ್ನು ಮಾಡಲಾಗಿದೆ. ಈ ವಿಶ್ಲೇಷಣೆ ಎಲ್ಲರಿಗೂ ಪ್ರಬೋಧನಾತ್ಮಕವಾಗಿದೆ. ವಿಶೇಷವಾಗಿ ಪ್ರಗತಿಪರರು ಮತ್ತು ಬುದ್ಧಿಪ್ರಾಮಾಣ್ಯವಾದಿಗಳೂ ಅದನ್ನು ತಿಳಿದುಕೊಳ್ಳಬೇಕು. ಏಕೆಂದರೆ ಅವರು ಯಾವಾಗಲೂ ಯಜ್ಞಗಳ ವಿರುದ್ಧ ಮಾತನಾಡುತ್ತಾರೆ. ಅವರು ಮುಂದಿನ ವಿಷಯಗಳ ವಿಚಾರವನ್ನು ಮಾಡಿ ಈ ವಿವೇಚನೆಯನ್ನು ಓದಬೇಕು.
೧. ಬುದ್ಧಿಪ್ರಾಮಾಣ್ಯವಾದಿಗಳು ಎಲ್ಲ ವಿಷಯಗಳನ್ನು ಒಂದೇ ತೆರನಾಗಿ ಅಳೆಯುತ್ತಾರೆ. ಅವರು ಸಾತ್ತ್ವಿಕತೆ-ತಾಮಸಿಕತೆಯನ್ನು ಗಮನಿಸುವುದಿಲ್ಲ. ಈ ಕಾರಣದಿಂದ ಅವರಿಗೆ ಕೈಗಾರಿಕೆಗಳಿಂದ ಹೊರಸೂಸುವ ಹೊಗೆ ಮತ್ತು ಯಜ್ಞದಿಂದ ನಿರ್ಮಾಣವಾಗುವ ಧೂಮ ಒಂದೇ ತೆರನಾಗಿ ಕಂಡುಬಂದರೆ ಆಶ್ಚರ್ಯವೆನಿಸುವುದಿಲ್ಲ.
೨. ಅವರು ಯಜ್ಞದ ಧೂಮದ ಲ್ಲಿರುವ ಘಟಕಗಳಾವುವು ಹಾಗೂ ವಾಯುಮಾಲಿನ್ಯ ಮಾಡುವ ಹೊಗೆಯಲ್ಲಿರುವ ಘಟಕಗಳಾವವು ಎನ್ನುವುದನ್ನು ವಿಚಾರ ಮಾಡುವುದಿಲ್ಲ. ಅಂದರೆ ಅವರು ಬುದ್ಧಿಯ ಉಪಯೋಗವನ್ನು ಮಾಡುವುದಿಲ್ಲ.
೩. ಅವರು ಹಿಂದೂ ಧರ್ಮದ ವೈರಿಗಳಾಗಿರುವಂತೆ ವರ್ತಿಸುತ್ತಾರೆ. ಋಷಿ-ಮುನಿಗಳು ಸುಖಾಸುಮ್ಮನೆ ವೆಚ್ಚ ಮಾಡುವ ಸಲುವಾಗಿ ಯಜ್ಞಗಳನ್ನು ಹೇಳಿ ದ್ದಾರೆಯೇ ?  ಬುದ್ಧಿಪ್ರಾಮಾಣ್ಯವಾದಿಗಳು ಯಜ್ಞಗಳಲ್ಲಿರುವ ಸೂಕ್ಷ್ಮದಲ್ಲಿರುವ ಮತ್ತು ವ್ಯಾಪಕ ಲಾಭವನ್ನು ಏಕೆ ತಿಳಿದುಕೊಳ್ಳುವುದಿಲ್ಲ ? ಯಜ್ಞವೆಂದರೆ ಕೇವಲ ಸಮಿಧೆ, ತುಪ್ಪ ಮುಂತಾದವುಗಳನ್ನು ಅನಾವಶ್ಯಕವಾಗಿ ಸುಡುವುದಲ್ಲ ! ಅದರಲ್ಲಿಯೂ ಅಧ್ಯಾತ್ಮಶಾಸ್ತ್ರವಿದೆ. ಯಾವ ಲಾಭಕ್ಕಾಗಿ ಯಾವ ಹವನಗಳ ಸಾಮಗ್ರಿಗಳನ್ನು ಉಪಯೋಗಿಸಬೇಕೆಂದು ನಿರ್ಧಾರವಾಗಿದೆ. ಉದಾ: ಅರಳುಗಳ ಆಹುತಿಯನ್ನು ನೀಡುವುದರಿಂದ ಹವನ ಮಾಡುವವನಿಗೆ ಯಶಸ್ಸು ಮತ್ತು ಬುದ್ಧಿ ದೊರೆಯುತ್ತದೆ, ಮೋದಕದ ಹವನದಿಂದ ಇಚ್ಛಿಸಿದ ಫಲ ದೊರೆಯುತ್ತದೆ, ಎಳ್ಳಿನ ಹವನದಿಂದ ಸರ್ವಸಾಧಾರಣ ಲಾಭವಾಗುತ್ತದೆ  ಇತ್ಯಾದಿ. ಹೀಗೆ ವಿವಿಧ ಲಾಭವನ್ನು ಮಾಡಿಕೊಡುವಂತಹ ನೂರಾರು ಯಜ್ಞಗಳನ್ನು ಧರ್ಮ
ಗ್ರಂಥಗಳಲ್ಲಿ ವಿವರಿಸಲಾಗಿದೆ. ಇಷ್ಟು ಶಾಸ್ತ್ರ ಶುದ್ಧವಾಗಿರುವಾಗ ಯಜ್ಞಗಳಿಗೆ ಸುಮ್ಮನೇ ವಿರೋಧವೇಕೆ ?
 ೪. ಯಜ್ಞವನ್ನು ಮಾಡದೆಯೇ ಯಜ್ಞಗಳಿಗೆ  ಆಗುವ ವೆಚ್ಚವನ್ನು ಬಡವರಿಗೆ ಮಾಡಿದರೆ ಆಯಾ ಯಜ್ಞಗಳ ಆಯಾ ಫಲಗಳು ದೊರೆಯಬಲ್ಲವೇ? ಪ್ರತಿಯೊಂದು ವಿಷಯವನ್ನು ಸೂಕ್ತ ಕಾರಣಕ್ಕಾಗಿ ಮಾಡಿದರೆ ಮಾತ್ರ ಅದರ ಸರಿಯಾದ ಪರಿಣಾಮ ವಾಗುತ್ತದೆ. ಹಸಿವಾದರೆ ಯಾರಾದರೂ ನೀರು ಕುಡಿಯುತ್ತಾರೆಯೇ? ಆಗ ಅನ್ನವೇ ಬೇಕಾಗುತ್ತದೆ.
೫. ಬುದ್ಧಿಪ್ರಾಮಾಣ್ಯವಾದಿಗಳಿಗೆ ಸೂಕ್ಷ್ಮದ ಬಗ್ಗೆ ತಿಳಿಯುವುದಿಲ್ಲ. ಇದನ್ನು ಒಪ್ಪಿಕೊಳ್ಳೋಣ; ಆದರೆ ಅವರು ಸೂಕ್ಷ್ಮ ಪರಿಣಾಮವನ್ನು ಸ್ವಲ್ಪ ಮಟ್ಟಿಗೆ ಸ್ಥೂಲದಲ್ಲಿ ತೋರಿಸುವ ವಿಜ್ಞಾನದ ಉಪಯೋಗವನ್ನೂ ಮಾಡುವುದಿಲ್ಲ ಮತ್ತು ಸುಮ್ಮನೆ ವಾದಿಸುತ್ತಾರೆ. ಈಗ ಅದನ್ನು ತಿಳಿಸುವ ವೈಜ್ಞಾನಿಕ ಉಪಕರಣಗಳು ಲಭ್ಯ ವಿದೆ. ಉದಾ : ಪಾಲಿಕಾಂಟ್ರಾಸ್ಟ್ ಇಂಟರ್‌ಫೆರನ್ಸ್ ಫೊಟೋಗ್ರಾಫಿ (ಪಿಪ್), ರೆಝೊನೆಂಟ್ ಫಿಲ್ಡ್ ಇಮೇಜಿಂಗ್ (ಆರ್.ಎಫ್.ಐ.), ಇಲೆಕ್ಟ್ರೋ-ಮ್ಯಾಗ್ನೆಟಿಕ್ ಫೀಲ್ಡ್ ಮಾಪಕ, ಯುನಿವರ್ಸಲ್ ಥರ್ಮೋ ಸ್ಕ್ಯಾನರ್ ಇತ್ಯಾದಿಗಳು. ಪ್ರಗತಿಪರರು ಮತ್ತು ಬುದ್ಧಿಪ್ರಾಮಾಣ್ಯವಾದಿಗಳಿಗೆ ಇದು ಸರಿಯೆನಿಸುತ್ತಿದ್ದಲ್ಲಿ, ಅವರಿಗೆ ಮುಂದಿನ ಅಂಶಗಳು ಸಹಜವಾಗಿ ತಿಳಿದು ಯಜ್ಞದ ಮಹತ್ವದ ಅರಿವಾಗುತ್ತದೆ. 
 

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದೂ ಧರ್ಮದಲ್ಲಿರುವ ಯಜ್ಞದ ಹವನಗಳಿಂದ ನಿರ್ಮಾಣವಾಗುವ ಧೂಮ ಮತ್ತು ಇತರ ಕಾರಣಗಳಿಂದ ನಿರ್ಮಾಣವಾಗುವ ಹೊಗೆ