ಯೋಗಿ ಮತ್ತು ಭಕ್ತ

ಪ.ಪೂ. ಭಕ್ತರಾಜ ಮಹಾರಾಜರ ಬೋಧನೆ
ಅ.  ಮೇಣಬತ್ತಿಯ ಪ್ರಕಾಶವೆಂದರೆ  ಭಕ್ತಿ  ಮತ್ತು ದೊಡ್ಡದಾದ ಬೆಳಕು ಎಂದರೆ ಯೋಗ.  ಯೋಗಿಯ ತೇಜಸ್ಸನ್ನು ಸಹಿಸಲಾಗುವುದಿಲ್ಲ ಮತ್ತು ಭಕ್ತಿಯ ಮಂದ  ಪ್ರಕಾಶದಿಂದಾಗಿ  ಅದರ  ಬೆಲೆಯು  ತಿಳಿಯುವುದಿಲ್ಲ.  ಯೋಗಿಯ ತೇಜವು ಕಾಣಿಸುತ್ತದೆ; ಆದರೆ ಭಕ್ತಿಯ ಸಾಮರ್ಥ್ಯವು  ಗುಪ್ತವಾಗಿರುತ್ತದೆ.
ಆ. ಉಸಿರಾಟದೊಂದಿಗೆ ಯಾರ ಅನುಸಂಧಾನವಿರುತ್ತದೆಯೋ, ಅವರೇ  ನಿಜವಾದ  ಯೋಗಿ.
ಭಾವಾರ್ಥ :
ಧ್ಯಾನಯೋಗಿಯ ಧ್ಯಾನವು ಮುಗಿದ ನಂತರ   ಅವನ ಅನುಸಂಧಾನವು ನಿಲ್ಲುತ್ತದೆ. ಆದರೆ ಯಾರ ನಾಮಜಪವು  ಉಸಿರಾಟದೊಂದಿಗೆ ಆಗುತ್ತದೆಯೋ, ಅವರ ನಾಮಜಪದ ಜಾಗ ದಲ್ಲಿ  ಕೇವಲ ಉಸಿರಾಟದ ಅರಿವಿರುತ್ತದೆ, ಅವರ ಉಸಿರಾಟದಂತೆಯೇ  ನಿರಂತರ ಅನುಸಂಧಾನವಿರುತ್ತದೆ. (ಆಧಾರ : ಸನಾತನದ ಪ್ರಕಾಶನ ‘ಸಂತ ಭಕ್ತರಾಜ ಮಹಾರಾಜರ ಬೋಧನೆ’)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಯೋಗಿ ಮತ್ತು ಭಕ್ತ