ಹಿಂದೂಗಳೇ, ಜಾಗೃತರಾಗಿ ! ಪವಿತ್ರ ಗಂಗಾಜಲ ಮಾರುತ್ತಿದ್ದಾರೆ !

ಗಂಗಾಜಲ ಮಾರಾಟ ಮಾಡುವುದು ಮಹಾಪಾಪ !
ಧರ್ಮಶಿಕ್ಷಣದ ಅಭಾವದಿಂದ ನಮ್ಮದೇ (ಹಿಂದೂಗಳದ್ದೇ) ಶ್ರದ್ಧಾಸ್ಥಾನಗಳನ್ನು ಮಾರಾಟ ಮಾಡಿ ಹಣ ಗಳಿಸುವ ವ್ಯಾಪಾರಿವೃತ್ತಿಯ ಜನ್ಮ ಹಿಂದೂಗಳು ಮತ್ತು ಅವರು ಆರಿಸಿದ ಸರಕಾರ. ರಾಜಕಾರಣಿಗಳ ಅಧರ್ಮಾಚರಣೆಯಿಂದಾಗಿ ಒಂದು ಕಾಲದಲ್ಲಿ ಸುವರ್ಣಭೂಮಿಯೆಂದು ಖ್ಯಾತಿ ಪಡೆದಿದ್ದ ಭಾರತದಿಂದ ಆನಂದ, ಸುಖ ಮತ್ತು ಸಂಪತ್ತು ಹೊರಟು ಹೋಗಿದೆ. ಹಣಕ್ಕಾಗಿ ಪಾಪನಾಶಿನಿ ಗಂಗಾನದಿಯ ಜಲವನ್ನು ಮಾರಾಟ ಮಾಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಸ್ವಾಮಿ ಅಚ್ಯುತಾನಂದ ಮಹಾರಾಜ, ಮಹಾಮಂಡಲೇಶ್ವರ ಸ್ವಾಮಿ ಪ್ರೇಮಾನಂದ ಮಹಾರಾಜ, ಮಹಂತ ವಿನೋದಗಿರಿ ಮಹಾರಾಜ ಮುಂತಾದ ಸಂತರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಲೇಖನ !

೧. ಪವಿತ್ರ ಗಂಗಾಜಲವನ್ನು ಮನೆಮನೆಗೆ ತಲುಪಿಸುವ ಕೇಂದ್ರಸರಕಾರದ ಯೋಜನೆಯು ವಂಚನೆ !
೫ ರಿಂದ ೧೬ ಜೂನ್ ೨೦೧೬ ಈ ಅವಧಿಯಲ್ಲಿ  ಗಂಗಾದಶಹರಾ ಆಚರಣೆಯಾಯಿತು. ಈ ಅವಕಾಶವನ್ನು ಸಾಧಿಸಿ ಗಂಗಾಜಲವನ್ನು ಮನೆಮನೆಗೆ ತಲುಪಿಸುವ ಯೋಜನೆಯನ್ನು ಕೇಂದ್ರ ಸರಕಾರ ಹಮ್ಮಿ ಕೊಂಡಿದೆ. ಗಂಗಾನದಿ ಹಿಂದೂಗಳ ಶ್ರದ್ಧೆಯ ವಿಷಯವಾಗಿದೆ. ಗಂಗಾಜಲವನ್ನು ಈ ಪದ್ಧತಿಯಿಂದ ತಲುಪಿಸುವುದು ಕೇವಲ ಅಯೋಗ್ಯ ಮಾತ್ರವಲ್ಲ, ಮಹಾಪಾಪವೂ ಆಗಿದೆ, ಎಂಬುದನ್ನು ಎಲ್ಲ ಹಿಂದೂಗಳು ಗಮನಿಸಬೇಕು.
೨. ಗಂಗಾಮಹಾತ್ಮೆ ಮತ್ತು ಪೂಜೆ
ಗೋವು, ಭಗವದ್ಗೀತೆಯಂತೆಯೇ ಗಂಗಾನದಿಯು ಸಹ ಹಿಂದೂಗಳ ಪವಿತ್ರ ಶ್ರದ್ಧಾಸ್ಥಾನವಾಗಿದೆ. ಪವಿತ್ರ ನದಿಗಳ ಪೈಕಿ ಗಂಗಾ ನದಿಯ ಹೆಸರು ಮೇಲ್ಪಂಕ್ತಿಯಲ್ಲಿದೆ. ಮೃತ್ಯುವಿನ ಸಮಯದಲ್ಲಿ ಬಾಯಿಗೆ ಗಂಗಾಜಲ ಮತ್ತು ತುಳಸಿಎಲೆ ಹಾಕಲು ಸುಲಭವಾಗಬೇಕೆಂಬ ಉದ್ದೇಶದಿಂದ ಹಿಂದಿನ ಕಾಲದಲ್ಲಿ ಹಿಂದೂಗಳ ಪ್ರತಿಯೊಂದು ಮನೆಯಲ್ಲಿ ಗಂಗಾಜಲದ ಬಾಟ್ಲಿ ಇರುತ್ತಿತ್ತು. ಹಿಂದಿನ ಕಾಲದಲ್ಲಿ ಶ್ರದ್ಧಾವಂತ ಹಿಂದೂಗಳು ಚಾರ್‌ಧಾಮ ಯಾತ್ರೆ ಮಾಡುತ್ತಿದ್ದರು. ಅದು ಸಾಧ್ಯವಾಗದಿದ್ದರೆ, ಕಾಶಿ-ರಾಮೇಶ್ವರ ಯಾತ್ರೆ ಮಾಡುತ್ತಿದ್ದರು ಮತ್ತು ಅದೂ ಸಾಧ್ಯವಾಗದಿದ್ದರೆ, ಕನಿಷ್ಠ ಗಂಗಾಸ್ಥಾನ ಮತ್ತು ಮನೆಗೆ ಬಂದನಂತರ ಗಂಗಾಪೂಜೆ ಮಾಡುತ್ತಿದ್ದರು. ಆಗ ಅನ್ನದಾನ ಮಾಡಲಾಗುತ್ತಿತ್ತು ಹಾಗೂ ಗಂಗಾಪ್ರಸಾದ (ಹಸಿರು ಬಳೆ, ಅರಳು-ಬತ್ತಾಸು, ಗಂಗಾಜಲದ ಬಾಟ್ಲಿ)ವನ್ನು ಶ್ರದ್ಧಾಪೂರ್ವಕ ಅಂತಃಕರಣದಿಂದ ಕೊಡುತ್ತಿದ್ದರು ಮತ್ತು ತೆಗೆದುಕೊಳ್ಳುತ್ತಿದ್ದರು. ಆ ಕಾಲದಲ್ಲಿ ಮಧ್ಯಮವರ್ಗದ ಮತ್ತು ಸಾಮಾನ್ಯ ಹಿಂದೂಗಳು ಮನೋರಂಜನೆಗಾಗಿ ಪ್ರಯಾಣ ಮಾಡುತ್ತಿರಲಿಲ್ಲ. ಪ್ರಯಾಣವೆಂದರೆ ಅದು ದೇವತೆಗಳ ಯಾತ್ರೆಗಾಗಿಯೇ ಇರುತ್ತಿತ್ತು.
೩. ಪೋಸ್ಟ್‌ನಿಂದ ಗಂಗಾಜಲವನ್ನು ಕಳುಹಿಸುವ ಯೋಜನೆಯಲ್ಲಿ ತೀರ್ಥಯಾತ್ರೆಯ ಉದ್ದೇಶ ಸಫಲವಾಗಬಹುದೇ ?
ದೇವರ ಭೇಟಿಯ ಸೆಳೆತ ನಿರ್ಮಾಣವಾಯಿತೆಂದರೆ, ಹಿಂದೂ ಭಕ್ತನು ಸಂಸಾರದ ಎಲ್ಲ ಭಾರವನ್ನು ದೇವರ ಮೇಲೆ ಹೊರಿಸಿ ಒತ್ತಡಮುಕ್ತನಾಗುತ್ತಾನೆ ಹಾಗೂ ಶ್ರದ್ಧೆಯಿಂದ ದೇವರನ್ನು ಕರೆಯುತ್ತಾ ಅವನು ಇಷ್ಟದೇವತೆಯ ದರ್ಶನಕ್ಕಾಗಿ ಆಯಾ ಧಾರ್ಮಿಕಸ್ಥಳಗಳ ದಾರಿ ಹಿಡಿಯುತ್ತಾನೆ. ಇದು ಅವನ ಸಾಧನೆಯ ಕಾಲವಾಗಿರುತ್ತದೆ. ನಾಮಜಪ, ಉಪವಾಸ, ಭಜನೆ, ಅನುಸಂಧಾನ ಇತ್ಯಾದಿಗಳಿಂದ ಅವನ ಸಾತ್ತ್ವಿಕತೆ ಹೆಚ್ಚಾಗುತ್ತದೆ. ಈ ಅವಧಿಯಲ್ಲಿ ದೇವರ ದರ್ಶನದ ತಳಮಳದಿಂದ ಅವನಿಗೆ ಅನೇಕ ಅನುಭೂತಿಗಳು ಬರುತ್ತವೆ. ಅವನಿಗೆ ಜನಜೀವನ, ಅವರ ಸಮಸ್ಯೆಗಳು, ಕ್ಷಮತೆ ಇತ್ಯಾದಿಗಳ ಜ್ಞಾನವಾಗುತ್ತದೆ. ಭವ್ಯ, ದಿವ್ಯ ಹಾಗೂ ಆನಂದದಾಯಕ ನಿಸರ್ಗ, ಮಂಜುಗಡ್ಡೆಗಳ ಹೊದಿಕೆ ಇರುವ ಹಿಮಶಿಖರಗಳು, ಮೇಲಿಂದ ಜಿಗಿಯುತ್ತಿರುವ ಜಲಪಾತ, ಹಸಿರು ಬಣ್ಣದಿಂದ ಕಂಗೊಳಿಸುವ ಎತ್ತರದಲ್ಲಿರುವ ಅರಣ್ಯಶಿಖರಗಳು ಅವನನ್ನು ಕರೆಯುತ್ತಿವೆ. ನಿಸರ್ಗದಲ್ಲಿನ ಚೈತನ್ಯ, ಭವ್ಯತೆ ಮತ್ತು ಪಾವಿತ್ರ್ಯ ಇತ್ಯಾದಿಗಳ ಅನುಭೂತಿ ಪಡೆಯುವಾಗ ಅವನು ತನ್ನನ್ನೇ ಮರೆಯುತ್ತಾನೆ. ಅವನ ಕರುಳಿನ ಬಳ್ಳಿ ಶಾಶ್ವತವಾಗಿ ಆನಂದದೊಂದಿಗೆ ಜೋಡಿಸಲ್ಪಡುತ್ತದೆ. ಈ ಪ್ರವಾಸದಲ್ಲಿ ಅವನು ಪ್ರಯತ್ನಿಸಲು ಕಲಿಯುತ್ತಾನೆ. ಅವನ ಕಲಿಯುವ ವೃತ್ತಿ ಹೆಚ್ಚಾಗುತ್ತದೆ. ಅವನು ನಿಸರ್ಗದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಅವನು ಹರಿದ್ವಾರಕ್ಕೆ ತಲುಪುತ್ತಾನೆ. ಗಂಗೆ ಪಾಪ ವಿಮೋಚನೆ ಮಾಡುತ್ತಾಳೆ, ವಂಶವೃದ್ಧಿ ಮಾಡುತ್ತಾಳೆ. ಪುಣ್ಯಪ್ರಾಪ್ತಿ ಮಾಡಿಕೊಡುತ್ತಾಳೆ, ಪಿತೃಗಳಿಗೆ ಮೋಕ್ಷಪ್ರಾಪ್ತಿ ಮಾಡಿಕೊಡುತ್ತಾಳೆ; ಅಷ್ಟು ಮಾತ್ರವಲ್ಲ, ಅವಳು ಕಾಯಿಕ, ವಾಚಕ, ಮತ್ತು ಮಾನಸಿಕ ಹೀಗೆ ೧೦ ಪ್ರಕಾರದ ಪಾಪಗಳನ್ನು ನಾಶಗೊಳಿಸುತ್ತಾಳೆ, ಎಂಬುದು ಅವನ ಶ್ರದ್ಧೆ ಯಾಗಿದೆ. ಅವನು ಗಂಗೆಯಲ್ಲಿ ಸ್ನಾನ, ದಾನ ಮತ್ತು ಪಿತೃಗಳಿಗೆ ತರ್ಪಣ ನೀಡುತ್ತಾನೆ, ಗಂಗೆಗೆ ಆರತಿ ಮಾಡುತ್ತಾನೆ, ವಂಶವೃದ್ಧಿಗಾಗಿ ಗಂಗೆಯ ದಡದಲ್ಲಿ ಗೋಘೃತದ ದೀಪವನ್ನು ಬಿಡುತ್ತಾನೆ. ಗಂಗಾಪ್ರಸಾದವೆಂಬ ಭಾವದಿಂದ ತಾಯಿತ, ಮಂತ್ರಿಸಿದ ದಾರ, ಬತ್ತಾಸು, ಪುಟಾಣಿ, ಮಿಠಾಯಿ, ಜಪಮಾಲೆ, ಗಂಗಾಜಲ ತೆಗೆದುಕೊಳ್ಳುತ್ತಾನೆ ಹಾಗೂ ಆನಂದ ಮತ್ತು ಉತ್ಸಾಹದಿಂದ ಹಿಂತಿರುಗುತ್ತಾನೆ. ಪ್ರಾಚೀನಕಾಲದಲ್ಲಿ ಜನರು ಚಾರ್‌ಧಾಮ ಯಾತ್ರೆ ಮಾಡುತ್ತಿದ್ದರು. ಅದರಿಂದಲೇ ಭಾರತೀಯ ಸಂಸ್ಕೃತಿ ಮತ್ತು ಐಕ್ಯತೆ ಶಾಶ್ವತವಾಗಿ ಉಳಿದಿತ್ತು. ಪೋಸ್ಟ್‌ನಿಂದ ಗಂಗಾಜಲವನ್ನು ಕಳುಹಿಸುವ ಯೋಜನೆಯಲ್ಲಿ ಇಂತಹ ಲಾಭ ಹೇಗಾಗಬಹುದು ?
೪. ಭಕ್ತರೇ, ಸರಕಾರದ ಪೋಸ್ಟ್‌ನಿಂದ ಗಂಗಾಜಲವನ್ನು ಕಳುಹಿಸುವ ವಂಚನೆಯನ್ನು ಅರಿತುಕೊಳ್ಳಿ !
ಅಂತೂ ಗಂಗಾಜಲವು ಶ್ರದ್ಧೆಯ ಮೇಲೆಯೇ ನಿಂತಿದೆ. ನನ್ನ ಅಜ್ಜಿಯು ಗಂಗೆ, ಹರ, ಹರ, ಹರ ಅಥವಾ ಹರಗಂಗೆ ಭಾಗೀರಥಿ ಎಂದು ಹೇಳಿ ಮೇಲಿನಿಂದ ಜಿಗಿಯುವ ಒಸರಿನ ನೀರನ್ನು ತಂಬಿಗೆಯಲ್ಲಿ ತೆಗೆದು ಕೊಂಡು ಮೈಮೇಲೆ ಹೊಯ್ದು ಕಾರ್ತಿಕಸ್ನಾನ ಮಾಡುತ್ತಿದ್ದಳು. ನಿಜವಾದ ಶ್ರದ್ಧೆಯಿದ್ದರೆ, ನಳ್ಳಿಯ ನೀರು ಸಹ ಗಂಗೆಯೇ ಆಗುತ್ತದೆ. ಮನ್ ಚಂಗಾ ತೋ ಕಠೌತಿಮೆ ಗಂಗಾ (ಅಂದರೆ ಮನಸ್ಸು ಶುದ್ಧ ಹಾಗೂ ನಿರ್ಮಲವಿದ್ದರೆ ಚರ್ಮವನ್ನು ತೊಳೆಯುವ ಪಾತ್ರೆಯಲ್ಲಿಯೂ ಗಂಗಾಜಲ ಬರಬಹುದು), ಹಾಗಿದ್ದರೆ ಅದಕ್ಕಾಗಿ ಭಕ್ತರಿಗೆ ಪೋಸ್ಟ್‌ನಿಂದ ಬರುವ ಗಂಗಾಜಲವನ್ನು ಖರೀದಿಸುವ ಆವಶ್ಯಕತೆಯೇನಿದೆ ? ಯಾತ್ರೆ ಮಾಡಿ ಅವರು ಗಂಗಾಸ್ನಾನ, ಗಂಗಾದರ್ಶನ ಮಾಡಿಯೇ ಗಂಗಾಜಲವನ್ನು ತರಬೇಕು; ಆದರೆ ಪೋಸ್ಟ್‌ನಿಂದ ಕಳುಹಿಸುವ ಈ ಯೋಜನೆ ಬೇಡ.
೫. ಗಂಗಾಜಲವನ್ನು ಮಾರಾಟ ಮಾಡುವುದು ಮಹಾಪಾಪ !
ಗಂಗಾಜಲವನ್ನು ಮಾರಾಟ ಮಾಡುವ ಜನ್ಮಹಿಂದೂಗಳೇ, ಗಂಗಾನದಿ ಹಿಂದೂಗಳ ಕೇವಲ ದೇವತೆ ಮಾತ್ರವಲ್ಲ, ಅವಳು ಗಂಗಾಮಾತೆ ಆಗಿದ್ದಾಳೆ. ಗಂಗಾಲಹರಿ ಕಾವ್ಯವನ್ನು ಬರೆದು ಪಂಡಿತರಾಜ ಜಗನ್ನಾಥರು ಪಾಪಮುಕ್ತರಾದಂತಹ ಸ್ಥಳದಲ್ಲಿ ಗಂಗಾಜಲವನ್ನು ಮಾರಾಟ ಮಾಡುವ ಮಾತೃದೋಹ ಮತ್ತು ಹಿಂದೂಗಳ ಶ್ರದ್ಧಾಸ್ಥಾನವನ್ನು ಹತ್ಯೆಗೈಯ್ಯುವ ಮಹಾಪಾಪ ಮಾಡಿ ನರಕಕ್ಕೆ ಹೋಗಬೇಡಿ !
ನಿಜವಾದ ಭಕ್ತರು ಶ್ರದ್ಧೆಯನ್ನು ಮಾರಾಟ ಮಾಡಿ ಹಣಗಳಿಸುವ ಎಲ್ಲ ಅಶ್ರದ್ಧಾಳುಗಳ ಅಂಗಡಿಗಳನ್ನು ಮುಚ್ಚಿಸಬೇಕು ಹಾಗೂ ಶ್ರದ್ಧೆಯ ವಿಡಂಬನೆಯನ್ನು ನಿಲ್ಲಿಸಬೇಕು, ಇಲ್ಲದಿದ್ದರೆ, ಈ ಅಶ್ರದ್ಧರು ನಮ್ಮನ್ನು ಎಲ್ಲೆಲ್ಲಿ ಹೇಗೆ ಲೂಟಿ ಮಾಡುವರು, ಎಂದು ಹೇಳಲು ಸಾಧ್ಯವಿಲ್ಲ. ಇದೆಲ್ಲವನ್ನೂ ನಿಲ್ಲಿಸಲು ನಮಗೆ ಹಿಂದೂ ರಾಷ್ಟ್ರ (ಸನಾತನ ಧರ್ಮರಾಜ್ಯ) ವನ್ನು ತರಲಿಕ್ಕಿದೆ. ಹೇ ಗಂಗಾಮಾತೇ, ನಿನ್ನ ಪವಿತ್ರ ಜಲವನ್ನು ಮಾರಾಟ ಮಾಡುವವರಿಗೆ ಈಗ ನೀನೇ ಸದ್ಭುದ್ಧಿ ನೀಡು. ಮಾತೇ ನೀನು ಬರೆಯಿಸಿಕೊಂಡಂತೆಯೇ ಬರೆದಿದ್ದೇನೆ. ಅದನ್ನು ನಿನ್ನ ಚರಣಗಳಲ್ಲಿ ಅರ್ಪಿಸುತ್ತೇನೆ.
- ಗುರುಚರಣಗಳಲ್ಲಿ ಶರಣಾಗತಿ, ಸೌ. ಶಾಲಿನಿ ಮರಾಠೆ, ಸನಾತನ ಆಶ್ರಮ,  ರಾಮನಾಥಿ, ಗೋವಾ. (೧೪.೬.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದೂಗಳೇ, ಜಾಗೃತರಾಗಿ ! ಪವಿತ್ರ ಗಂಗಾಜಲ ಮಾರುತ್ತಿದ್ದಾರೆ !