ಕಾಲಹರಣ ಮಾಡುವುದನ್ನು ಸಹಿಸುವುದಿಲ್ಲ !

ಸನಾತನ ಸತ್ಯ ಮಾರ್ಗದಲ್ಲಿ ನಡೆಯುತ್ತದೆ,
ಪುರೋ(ಅಧೋ)ಗಾಮಿಗಳಂತೆ ಸುಳ್ಳು ಆರೋಪ ಮಾಡುವುದಿಲ್ಲ ಎಂಬುದು ಇದರಿಂದ ಸಿದ್ಧವಾಗುತ್ತದೆ !
ಕಾ. ಪಾನ್ಸರೆ ಮತ್ತು ಡಾ. ದಾಭೋಳಕರ್ ಹತ್ಯೆಪ್ರಕರಣ !
ಮುಂಬಯಿ ಉಚ್ಚ ನ್ಯಾಯಾಲಯದಿಂದ ಕೇಂದ್ರೀಯ ತನಿಖಾ ದಳಕ್ಕೆ ಚಾಟಿ !
ಸ್ಕಾಟ್‌ಲ್ಯಾಂಡ್ ಯಾರ್ಡ್‌ನಿಂದ ವರದಿ ಪಡೆಯಲು ಸಿಬಿಐಗೆ ಕೊನೆಯ ೬ ವಾರಗಳ ಅವಕಾಶ !
ಮುಂಬಯಿ : ‘ಕಾ. ಗೋವಿಂದ ಪಾನ್ಸರೆ ಮತ್ತು ಡಾ. ನರೇಂದ್ರ ದಾಭೋಳಕರ್‌ರವರ ಹತ್ಯೆಯ ತನಿಖೆ ಸಾಧ್ಯವಾಗದಿದ್ದರೆ, ಆಗುವುದಿಲ್ಲ ಎಂದು ಹೇಳಿ; ಆದರೆ ಬ್ಯಾಲೆಸ್ಟಿಕ್ ವರದಿಯ ಕಾರಣ ನೀಡಿ ಕಾಲಹರಣ ಮಾಡಬೇಡಿ. ನಿಮ್ಮ ಈ ಕಾಲಹರಣವನ್ನು ಸಹಿಸಿಕೊಳ್ಳುವುದಿಲ್ಲ’, ಎಂದು ಉಚ್ಚ ನ್ಯಾಯಾಲಯವು ಸೆಪ್ಟೆಂಬರ್ ೨೯ ರಂದು ಕೇಂದ್ರೀಯ ತನಿಖಾ ದಳವನ್ನು ತರಾಟೆಗೆ ತೆಗೆದುಕೊಂಡಿದೆ. ಡಾ. ದಾಭೋಳಕರ್ ಮತ್ತು ಕಾ. ಪಾನ್ಸರೆ ಕೊಲೆ ಪ್ರಕರಣದ ತನಿಖೆಯ ವೇಗ ಹೆಚ್ಚಿಸಿರಿ ಹಾಗೂ ಇವೆರಡೂ ಪ್ರಕರಣಗಳ ಸೂತ್ರಧಾರರನ್ನು ತಕ್ಷಣವೇ ವಶಪಡಿಸಿಕೊಳ್ಳಿ, ಇಲ್ಲದಿದ್ದರೆ, ನಿಮ್ಮ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ನಿರ್ಮಾಣವಾಗುವುದು, ಎಂದು ನ್ಯಾಯಾಲಯವು ತನಿಖಾ ದಳದ ತನಿಖೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಸಿ. ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಬಿ.ಪಿ. ಕುಲಾಬಾವಾಲಾ ಇವರ ವಿಭಾಗೀಯ ಪೀಠವು ಕೇಂದ್ರೀಯ ತನಿಖಾ ದಳವು (ಸಿಬಿಐ) ಮಂಡಿಸಿದ ಸೀಲ್ ಮಾಡಿದ ವರದಿ ನೋಡಿದ ನಂತರ ಈ ಮೇಲಿನಂತೆ ತನಿಖಾ ದಳದ ತನಿಖೆಯ ಬಗ್ಗೆ ಛೀಮಾರಿ ಹಾಕಿತು. ಡಾ. ದಾಭೋಲಕರ್, ಕಾ. ಪಾನ್ಸರೆ ಮತ್ತು ಕಲ್ಬುರ್ಗಿ ಈ ಮೂವರ ಹತ್ಯೆ ಒಂದೇ ಪಿಸ್ತೂಲಿನಿಂದ ಆಗಿದೆಯೇ, ಎಂದು ತಪಾಸಣೆ ಮಾಡಲು ಸಿಬಿಐ ಘಟನಾಸ್ಥಳದಿಂದ ವಶಪಡಿಸಿ ಕೊಂಡ ಖಾಲಿ ಗುಂಡುಗಳನ್ನು ಸ್ಕಾಟ್‌ಲ್ಯಾಂಡ್ ಯಾರ್ಡ್‌ನ ಫಾರೆನ್ಸಿಕ್ ಲ್ಯಾಬ್‌ಗೆ ಮೇ ತಿಂಗಳಲ್ಲಿ ಕಳುಹಿಸಲಾಗಿದೆ. ಇದುವರೆಗೆ ಅಲ್ಲಿಂದ ವರದಿ ಬಂದಿಲ್ಲ; ಆದರೆ ಶೀಘ್ರದಲ್ಲಿಯೇ ಈ ಮೂವರ ಹತ್ಯೆಯ ಮದ್ದುಗುಂಡುಗಳನ್ನು ಸ್ಕಾಂಟ್‌ಲ್ಯಾಂಡ್‌ಗೆ ಕಳುಹಿಸಲಾಗುವುದು, ಎಂದು ಸೆಪ್ಟೆಂಬರ್ ೨೯ ರಂದು ಸಿಬಿಐ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. (ಮದ್ದುಗುಂಡುಗಳನ್ನು ಫಾರೆನ್ಸಿಕ್ ಲ್ಯಾಬ್‌ಗೆ ಕಳುಹಿಸುವುದು ಮಹತ್ವದ್ದಾಗಿ ದ್ದರೆ, ಅದನ್ನು ಕಳೆದ ೫ ತಿಂಗಳಲ್ಲಿ ಏಕೆ ಕಳುಹಿಸಲಿಲ್ಲ ? - ಸಂಪಾದಕರು)

ಕಾ. ಪಾನ್ಸರೆ ಹತ್ಯೆಪ್ರಕರಣದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ
ಸುಹೇಲ್ ಶರ್ಮಾರವರನ್ನು ತರಾಟೆಗೆ ತೆಗೆದುಕೊಂಡ ಉಚ್ಚ ನ್ಯಾಯಾಲಯ !
ದಿನಪತ್ರಿಕೆಗಳಿಗೆ ವಾರ್ತೆಗಳನ್ನು ನೀಡುವಂತಹ ತಪ್ಪು ಮಾಡಿದರೆನೀವು ನಿಮ್ಮ ನೌಕರಿಯನ್ನು ಕಳೆದುಕೊಳ್ಳಬೇಕಾಗುವುದು !
ಶ್ರೀ. ಸುಹೇಲ್ ಶರ್ಮಾ
ಮುಂಬಯಿ : ಇನ್ನು ಮುಂದೆ ನಿಮ್ಮಿಂದ ಯಾವುದೇ ದಿನಪತ್ರಿಕೆಗಳಿಗೆ ವಾರ್ತೆಗಳನ್ನು ನೀಡುವಂತಹ ತಪ್ಪಾದರೆ ನೀವು ನೌಕರಿ ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಬೇಕಾಗಬಹುದು, ಎಂದು ಮುಂಬಯಿ ಉಚ್ಚ ನ್ಯಾಯಾಲಯವು ವಿಶೇಷ ತನಿಖಾ ದಳ (ಎಸ್ ಐಟಿ)ದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಹೇಲ್ ಶರ್ಮಾರ
ವರಿಗೆ ಸೆಪ್ಟೆಂಬರ್ ೨೯ ರಂದು ಆಲಿಕೆಯ ಸಮಯದಲ್ಲಿ ಗದರಿಸಿತು.
ಈ ಸಮಯದಲ್ಲಿ ನ್ಯಾಯಾಧೀಶ ಧರ್ಮಾಧಿಕಾರಿಯವರು ಮಾತನಾಡುತ್ತಾ, ಯಾರ ತನಿಖೆ ನಡೆಸಲಾಗುತ್ತಿದೆ, ಆ ಸಾಕ್ಷಿದಾರರ ಹೆಸರು ಮತ್ತು ಆರೋಪಿಯ ಮಾಹಿತಿ ವರ್ತಮಾನಪತ್ರಿಕೆಯಲ್ಲಿ ಹೇಗೆ ಮುದ್ರಣವಾಗುತ್ತದೆ ? ನಾನು ವರ್ತಮಾನ ಪತ್ರಿಕೆಯಲ್ಲಿ ಈ ವಾರ್ತೆಯನ್ನು ಓದಿದ್ದೇನೆ. ಅದನ್ನು ಪೊಲೀಸ್ ಅಧಿಕಾರಿಯ ಹೆಸರು ಸಹಿತ ನೀಡಲಾಗಿದೆ. ಸಾಕ್ಷಿದಾರರ ತನಿಖೆ ಯಾರು ಮಾಡಿದರು ಹಾಗೂ ಆರೋಪಿ ಯಾವ ಮಾಹಿತಿ ನೀಡುತ್ತಾನೆ, ಎಂದು ನಿಮ್ಮ ಹೆಸರನ್ನು ನೀಡಿ ಮುದ್ರಿಸಲಾಗುತ್ತದೆ, ಅದು ಹೇಗೆ ? ಸಾಕ್ಷಿದಾರರ ಹೆಸರು ನಿಮಗೆ ಮಾತ್ರ ತಿಳಿದಿರುವುದರಿಂದ ನೀವು ಕೊಡದೆ ಅದು ಹೇಗೆ ಹೊರಗೆ ಬರುತ್ತದೆ ? ಎಂದು ಪ್ರಶ್ನಿಸಿದರು. ಆಗ ಸರಕಾರಿ ವಕೀಲರು (ಪಬ್ಲಿಕ್ ಪ್ರಾಸಿಕ್ಯೂಟರ್), ‘ಮ್ಯಾಜಿಸ್ಟ್ರೇಟ್ (ಕನಿಷ್ಠ ನ್ಯಾಯಾಲಯದ ನ್ಯಾಯಾಧೀಶರು) ಆಲಿಕೆಯ ಸಮಯದಲ್ಲಿ ಪ್ರಶ್ನೆ ಕೇಳುತ್ತಾರೆ, ಆಗ ಅಲ್ಲಿ ಪತ್ರಕರ್ತರಿರುತ್ತಾರೆ’ ಎಂದರು. ಅದಕ್ಕೆ ನ್ಯಾಯಾಧೀಶ ಧರ್ಮಾಧಿಕಾರಿಯವರು, ‘ನೀವು ಇಲ್ಲಿ ಇಲ್ಲದಿ ರುವ ಮ್ಯಾಜಿಸ್ಟ್ರೇಟ್ ಮೇಲೆ ದೋಷಾರೋಪ ಮಾಡುತ್ತಿದ್ದೀರಿ. ಆದರೆ ಬೇರೆ ಬೇರೆ ದಿನಪತ್ರಿಕೆಗಳಲ್ಲಿ ನಿಮ್ಮ ಅಧಿಕಾರಿಗಳ ಬೇರೆ ಬೇರೆ ವಾರ್ತೆ ಬರುತ್ತವೆ, ಅವು ನ್ಯಾಯಾಲಯದಲ್ಲಿ ಹೇಳಿದ ವಿಷಯವಾಗಿರುವುದಿಲ್ಲ.  ನೇರ ನಿಮ್ಮ ಅಧಿಕಾರಿಯೇ ಹೇಳಿರುತ್ತಾರೆ’ ಎಂದರು. ಇದಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಹೇಲ್ ಶರ್ಮಾರವರಲ್ಲಿ ಉತ್ತರವಿಲ್ಲದ ಕಾರಣ ಅವರು ಸುಮ್ಮನಿದ್ದರು. ಆಗ ಸರಕಾರಿ ವಕೀಲರು, ‘ಇದು ನ್ಯಾಯಾಲಯಕ್ಕೆ ಇಷ್ಟವಾಗುವುದಿಲ್ಲ. ನ್ಯಾಯಾಲಯ ನಿಮ್ಮ ಮೇಲೆ ಆ್ಯಕ್ಷನ್ ತೆಗೆದುಕೊಳ್ಳುವುದು ಎಂದು ಅವರಿಗೆ ನಾನು ಹೇಳುತ್ತೇನೆ’ ಎಂದರು. ಆಗ ನ್ಯಾಯಾಧೀಶ ಧರ್ಮಾಧಿಕಾರಿಯವರು, ಆ್ಯಕ್ಷನ್ ಇತ್ಯಾದಿ ಏನೂ ಬೇಡ, ಇನ್ನು ಮುಂದೆ ನೀವು ನೌಕರಿ ತೊರೆದು ಮನೆಯಲ್ಲಿ ಕುಳಿತುಕೊಳ್ಳಬೇಕಾಗುವುದು, ಎಂದು ಗದರಿಸಿ ಇನ್ನು ಹೀಗಾಗಬಾರದು, ಎಂದು ಹೇಳಿದರು.
ನೀವು ಪರಾರಿಯಾದ ಆರೋಪಿಗಳ ಹೆಸರನ್ನು ಮುಂದೆ ಮಾಡಿ ತನಿಖೆಯನ್ನು ಕೆಡಿಸುತ್ತಿದ್ದೀರಿ ! - ನ್ಯಾಯಾಲಯ
ಈ ಸಮಯದಲ್ಲಿ ಪೊಲೀಸರು, ‘ಆರೋಪಿ ಬಾಂಗ್ಲಾದೇಶ ಅಥವಾ ನೇಪಾಳಕ್ಕೆ ಪರಾರಿಯಾಗಿರಬಹುದೆಂದು ನಮಗೆ ಸಂದೇಹವಿದೆ’ ಎಂದರು. ಅದಕ್ಕೆ ನ್ಯಾಯಾಧೀಶರು, ನಿಮ್ಮಲ್ಲಿ  ಅಂತಹ ಕ್ಲೂ (ಸುಳಿವು) ಇದೆಯೇ ? ಇದ್ದರೆ ಅದನ್ನು ನಿಮ್ಮ ವರದಿಯಲ್ಲಿ ಏಕೆ ತೋರಿಸಲಿಲ್ಲ? ಅವರು ಎಲ್ಲಿಗೆ ಹೋಗಿದ್ದಾರೆಂದು ನಿಮಗೆ ಯಾರು ಹೇಳಿದರು ? ನೀವು ಆ ದೇಶದೊಂದಿಗೆ ಸಂಪರ್ಕ ಮಾಡಿದ್ದೀರಾ ? ನೀವು ಕೇವಲ ಪರಾರಿಯಾದ ಆರೋಪಿಗಳ ಹೆಸರನ್ನು ಹೇಳುತ್ತಿದ್ದೀರಿ ಹಾಗೂ ಸಂಪೂರ್ಣ ತನಿಖೆಯನ್ನು ಕೆಡಿಸುತ್ತಿದ್ದೀರಿ. ಸುಮ್ಮನೆ ಅವರ ಹೆಸರನ್ನು ತೆಗೆದುಕೊಳ್ಳುತ್ತಿದ್ದೀರಿ, ಎಂದರು.
ಪ್ರಸಿದ್ಧಿಮಾಧ್ಯಮಗಳಿಗೆ ಮಾಹಿತಿ ಕೊಡುವುದನ್ನು ನಿಲ್ಲಿಸಿರಿ ಇಲ್ಲದಿದ್ದರೆ,
ತನಿಖೆಯನ್ನು ಹಿಂತೆಗೆದುಕೊಳ್ಳುವೆವು ! - ನ್ಯಾಯಾಲಯದ ಘರ್ಜನೆ
ವಿಶೇಷ ತನಿಖಾ ದಳ (ಎಸ್‌ಐಟಿ) ಪ್ರಸಿದ್ಧಿಮಾಧ್ಯಮಗಳಿಗೆ ಮಾಹಿತಿ ನೀಡುವುದನ್ನು ನಿಲ್ಲಿಸದಿದ್ದರೆ, ಅವರಿಂದ ಈ ಪ್ರಕರಣದ ತನಿಖೆಯನ್ನು ಹಿಂತೆಗೆದುಕೊಳ್ಳುವೆವು, ಎಂದು ನ್ಯಾಯಾಲಯ ಈ ವೇಳೆ ಗದರಿಸಿತು. (ತನಿಖಾ ದಳದವರು ಸನಾತನದ ಆಶ್ರಮಕ್ಕೆ ದಾಳಿ ಮಾಡಿ ಅನೇಕ ಕಟ್ಟುಕಥೆಗಳನ್ನು ರಚಿಸಿದ್ದರು, ಹಾಗಾಗಿ ವರ್ತಮಾನಪತ್ರಿಕೆಗಳಲ್ಲಿ ಡಾ. ವೀರೇಂದ್ರಸಿಂಹ ತಾವಡೆಯವರೇ ಈ ಒಳಸಂಚಿನ  ಸೂತ್ರಧಾರರಾಗಿದ್ದಾರೆ, ಸನಾತನ ಸಂಸ್ಥೆಯೇ ಈ ಒಳಸಂಚನ್ನು ರಚಿಸಿದೆ, ಎಂಬ ತಥಾಕಥಿತ ಮಾಹಿತಿಯನ್ನು ಮುಂದೆ ಬಂದು ಸನಾತನದ ಅವಮಾನವಾಗಿದೆ ಹಾಗೂ ವಿಶೇಷ ತನಿಖಾ ದಳವು ಆಶ್ರಮದಲ್ಲಿ ನಾರ್ಕೋಟಿಕ್ ಡ್ರಗ್ ಸಿಕ್ಕಿದೆ, ಎಂದು ಅಪ್ಪಟ ಸುಳ್ಳು ಮಾಹಿತಿಯನ್ನು ಪ್ರಸಿದ್ಧಿಮಾಧ್ಯಮಗಳಿಗೆ ಒದಗಿಸಿತ್ತು ! - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕಾಲಹರಣ ಮಾಡುವುದನ್ನು ಸಹಿಸುವುದಿಲ್ಲ !