ರಾಷ್ಟ್ರೀಯ ಶಿಕ್ಷಣದ ಪುನರ್‌ರಚನೆ ಆವಶ್ಯಕ !

ಪ್ರಾ. ರಾಮೇಶ್ವರ ಮಿಶ್ರ
೧೯ ನೇ ಶತಮಾನದ ಆರಂಭದಲ್ಲಿ ಭಾರತದಲ್ಲಿ ಶಿಕ್ಷಣದ ಸ್ಥಿತಿ ಹೇಗಿತ್ತು ? ಶಿಕ್ಷಣ ನೀಡುವ ಪ್ರಕ್ರಿಯೆ ಹೇಗಿತ್ತು ? ಹಾಗೂ ಶಿಕ್ಷಣದ ತಂತ್ರ ಯಾವುದಿತ್ತು ? ಇವುಗಳ ಬಗ್ಗೆ ಲಂಡನ್ನಿನ ಇಂಡಿಯಾ ಆಫೀಸ್ ಲೈಬ್ರರಿಯಲ್ಲಿ ಜೋಪಾನ ಮಾಡಿರುವ ಕಾಗದಪತ್ರಗಳ ಆಧಾರದಲ್ಲಿ ಆಂಗ್ಲರ ಸಾಕ್ಷಿಯಿಂದಲೇ  ಶ್ರೀ. ಧರ್ಮಪಾಲರು ಸವಿಸ್ತಾರವಾದ ಕಾಗದಪತ್ರಗಳನ್ನು ಮಂಡಿಸಿದ್ದಾರೆ. ಈ ಕಾಗದಪತ್ರಗಳನ್ನು ಶ್ರೀ. ಸೀತಾರಾಮ ಗೋಯಲ್ ಇವರು ೧೯೮೩ ರಲ್ಲಿ ಪುಸ್ತಕರೂಪದಲ್ಲಿ ಮೊಟ್ಟ ಮೊದಲು ಪ್ರಕಾಶನ ಮಾಡಿದ್ದರು; ಆದರೆ ಇಂದಿನ ಶಿಕ್ಷಣ ವ್ಯವಸ್ಥೆಯು ಆ ಪುಸ್ತಕದಲ್ಲಿನ ಸತ್ಯವನ್ನು ಅವಲೋಕಿಸಲಿಲ್ಲ ಹಾಗೂ ಬಳಕೆಯಲ್ಲಿದ್ದ ಬ್ರಿಟೀಷ್ ಕಾಲದ ಸತ್ಯವನ್ನು ಅಡಗಿಸಿಟ್ಟು ಕಾಂಗ್ರೆಸ್-ಸಾಮ್ಯ ವಾದಿ ಶಿಕ್ಷಣತಜ್ಞರು ಮೊದಲಿಗಿಂತಲೂ ಅನೇಕ ಪಟ್ಟು ಅಪಪ್ರಚಾರ ಮಾಡಲಾರಂಭಿಸಿದರು, ಅದರಿಂದ ಪಾರಂಪರಿಕ ಭಾರತೀಯ ಶಿಕ್ಷಣಪದ್ಧತಿಯು ಕೇವಲ ದ್ವಿಜರಿಗಾಗಿ ಮಾತ್ರ (ದ್ವಿಜ ಅಂದರೆ ಉಪನಯನದ ಅಧಿಕಾರವಿರುವ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ) ಸೀಮಿತವಾಯಿತು.                 (ಮುಂದುವರಿದ ಭಾಗ)

೧೭. ಶಿಕ್ಷಣಕ್ಷೇತ್ರದಲ್ಲಿನ ಪ್ರಮುಖ ನಿಯಂತ್ರಕರು ಭಾರತೀಯ ವಿದ್ಯೆಯ ಜ್ಞಾನದ ಬಗ್ಗೆ ಅಪರಿಚಿತರು !
೧೯೪೭ ರ ನಂತರದ ಭಾರತದ ಸ್ಥಿತಿ ಇದರ ವಿರುದ್ಧವಾಗಿದೆ. ಅದಕ್ಕೂ ಮೊದಲು ಭಾರತದಲ್ಲಿನ ಎಲ್ಲ ರಾಜ-ಮಹಾರಾಜರು ಮತ್ತು ರಾಣಿಗಳು ಅನಿವಾರ್ಯವಾಗಿ ಹಿಂದೂ ಧರ್ಮದ ಅಧ್ಯಯನ ಮಾಡುತ್ತಿದ್ದರು; ಆದರೆ ೧೯೪೭ ರ ನಂತರ ಭಾರತದ ಒಬ್ಬ ರಾಷ್ಟ್ರಪತಿಯೂ ಪಾರಂಪರಿಕ ಹಿಂದೂ ಧರ್ಮದ ಅಧ್ಯಯನ ಮಾಡಿಲ್ಲ. ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರವರ ಆರಂಭದ ಶಿಕ್ಷಣ ಅವರ ೫ ನೇ  ವಯಸ್ಸಿನಿಂದ ಒಬ್ಬ ಮೌಲ್ವಿಯ ಮಾರ್ಗದರ್ಶನದಲ್ಲಿ ಫಾರ್ಸಿ ಭಾಷೆಯಲ್ಲಾಯಿತು. ನಂತರ ಅವರು ಆಂಗ್ಲ ಮಾಧ್ಯಮದ ಕಿಮ್ಸ್ ಶಾಲೆಯಲ್ಲಿ ಶಿಕ್ಷಣ ಪಡೆದರು ಹಾಗೂ ಅನಂತರ ಕೋಲಕಾತಾ ವಿದ್ಯಾಪೀಠದ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆ ಕಾಲದಲ್ಲಿ ವಿದ್ಯಾಪೀಠಗಳು ಈಗಿನ ಮಹಾವಿದ್ಯಾಲಯಗಳ ಹಾಗಿದ್ದವು. ನಂತರ ಅವರು ಕೋಲಕಾತಾದಲ್ಲಿ ಪ್ರೆಸಿಡೆನ್ಸಿ ಮಹಾವಿದ್ಯಾಲಯದಿಂದ ಪ್ರಥಮ ಸ್ಥಾನ ದಲ್ಲಿ ಅರ್ಥಶಾಸ್ತ್ರದಲ್ಲಿ ಎಮ್.ಎ. ಮಾಡಿದರು. ಅನಂತರ ಅವರು ಮುಜಫ್ಫರಪುರದಲ್ಲಿನ ಒಂದು ಮಹಾವಿದ್ಯಾಲಯದಲ್ಲಿ ಆಂಗ್ಲ ಭಾಷೆಯ ಪ್ರಾಧ್ಯಾಪಕರಾದರು ಹಾಗೂ ನಂತರ ಅವರು ಪ್ರಾಂಶುಪಾಲ ರಾದರು. ಅನಂತರ ಅವರು ಆಂಗ್ಲ ಕಾನೂನಿನಲ್ಲಿ ಪ್ರಾವೀಣ್ಯ ಗಳಿಸಿ ಆಂಗ್ಲ ನ್ಯಾಯಾಲಯದಲ್ಲಿ ನ್ಯಾಯವಾದಿಗಳಾದರು. - ಪ್ರಾ. ರಾಮೇಶ್ವರ ಮಿಶ್ರ, ಸಂಚಾಲಕ, ಗಾಂಧಿ ವಿದ್ಯಾ ಸಂಸ್ಥಾನ, ವಾರಣಾಸಿ. ೨ ನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ  ರಾಧಾಕೃಷ್ಣನ್ ರವರು ತಿರುಪತಿಯಲ್ಲಿನ ಲ್ಯುಥೇರಿಯನ್ ಕ್ರೈಸ್ತ ಶಾಲೆಯಲ್ಲಿ ಶಿಕ್ಷಣ ಪಡೆದು ನಂತರ ಮದ್ರಾಸ್ ಕ್ರಿಶ್ಚನ್ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು. ಅವರ ನೌಕರಿಯೂ ಕ್ರೈಸ್ತ ಪಾದ್ರಿಯ ಮೂಲಕ ನಡೆಸಲ್ಪಡುವ ಕೋಲಕಾತಾ ಮಹಾವಿದ್ಯಾಲಯದ ಕಿಂಗ್ ಜಾರ್ಜ್ ಪಂಚಮ ಪೀಠದಿಂದ ಆರಂಭ ವಾಯಿತು. ಈ ಸಂಸ್ಥೆಯನ್ನು ಕ್ರೈಸ್ತ ಪಂಥಕ್ಕನುಸಾರ ಮಾನಸಿಕ ಹಾಗೂ ನೈತಿಕ ಶಿಕ್ಷಣ ನೀಡುವ ಉದ್ದೇಶ ದಿಂದ ಆರಂಭಿಸಲಾಗಿತ್ತು. ೩ ನೇ ರಾಷ್ಟ್ರಪತಿ ಡಾ. ಝಾಕೀರ್ ಹುಸೇನ್‌ರವರು ಇಸ್ಲಾಂನ ವಿದ್ವಾಂಸರಾಗಿದ್ದರು. ೪ ನೇ ರಾಷ್ಟ್ರಪತಿ ವರಾಹ ವೆಂಕಟಗಿರಿಯವರು ಸಹ ಕ್ರೈಸ್ತ ಮಿಶನರಿ ಸಂಸ್ಥೆಯಲ್ಲೇ ಶಿಕ್ಷಣ ಪಡೆದರು ಹಾಗೂ ನಂತರ ಐರ್ಲ್ಯಾಂಡ್‌ಗೆ ಹೋಗಿ ಅವರು ಕ್ರೈಸ್ತಪಂಥಕ್ಕನುಸಾರವೇ ಕಾನೂನಿನ ಶಿಕ್ಷಣ ಪಡೆದರು.  ೫ ನೇ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮ್ಮದ್ ಇವರು ಸಹ ಇಸ್ಲಾಮ್‌ನ ಜ್ಞಾನಿಯಾಗಿದ್ದರು. ೬ ನೇ ರಾಷ್ಟ್ರಪತಿ ಡಾ. ನೀಲಮ್ ಸಂಜೀವ ರೆಡ್ಡಿಯವರು ಮಾತ್ರ ಥಿಯೋಸಾಫಿಕಲ್ ಹೈಸ್ಕೂಲ್‌ನಲ್ಲಿ ಶಿಕ್ಷಣ ಪಡೆದರು. ೭ ನೇ ರಾಷ್ಟ್ರಪತಿ ಗ್ಯಾನಿ ಝೈಲ್‌ಸಿಂಗ್ ಸಿಕ್ಖ್ ಮಿಶನರಿ ಶಾಲೆಯಲ್ಲಿ ಶಿಕ್ಷಣ ಪಡೆದರು, ೮ ನೇ ರಾಷ್ಟ್ರಪತಿ ಡಾ. ರಾಮಸ್ವಾಮಿ ವೆಂಕಟರಾಮನ್‌ರವರು ಸಹ ಸರಕಾರಿ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಣ ಪಡೆದರು. ೯ ನೇ ರಾಷ್ಟ್ರಪತಿ ಡಾ. ಶಂಕರ ದಯಾಳ ಶರ್ಮಾರವರು ಸೈಂಟ್ ಜಾನ್ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪಡೆದರು. ೧೦ ನೇ ರಾಷ್ಟ್ರಪತಿ ಕೆ. ಆರ್. ನಾರಾಯಣನ್‌ರವರು ಸಹ ಕ್ರೈಸ್ತ ಶಾಲೆಯಲ್ಲಿ ಶಿಕ್ಷಣ ಪಡೆದರು. ೧೨ ನೇ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮತ್ತು ಇಂದಿನ ರಾಷ್ಟ್ರಪತಿ ಪ್ರಣವ ಮುಖರ್ಜಿಯವರು ಕ್ರೈಸ್ತವಲ್ಲದ ಶಾಲೆಗಳಲ್ಲಿಯೇ ಶಿಕ್ಷಣ ಪಡೆದಿದ್ದಾರೆ; ಆದರೆ ಮುಖ್ಯ ವಿಷಯವೆಂದರೆ, ಈ ೧೩ ರಾಷ್ಟ್ರಪತಿಗಳಲ್ಲಿ ಒಬ್ಬರೂ ಪಾರಂಪರಿಕ ವಿದ್ಯಾಕೇಂದ್ರದಲ್ಲಿ ಒಂದು ದಿನದ ಶಿಕ್ಷಣವನ್ನೂ ಪಡೆದವರಿಲ್ಲ; ಇವರಿಗೆ ಭಾರತೀಯ ವಿದ್ಯಾಪರಂಪರೆಯೊಂದಿಗೆ ಯಾವ ಸಂಬಂಧವಿರ ಬಹುದು ಅಥವಾ ಇವರು ಹಿಂದೂ ಧರ್ಮ ಶಾಸ್ತ್ರದ ಅಧಿಕಾರಿ, ವಿದ್ವಾಂಸರಾಗಿರಲು ಹೇಗೆ ಸಾಧ್ಯ ?
೧೮. ಸಂಪೂರ್ಣ ಶೈಕ್ಷಣಿಕ ವ್ಯವಸ್ಥೆಯು ಭಾರತೀಯ
ಜ್ಞಾನಪರಂಪರೆಯಯಾವುದೇ ಜ್ಞಾನವಿಲ್ಲದ ನೌಕರಶಾಹಿಯ ಅಧೀನದಲ್ಲಿರುವುದು !
ಈ ರೀತಿಯಲ್ಲಿ ೧೯೪೭ ರ ನಂತರ ಭಾರತದಲ್ಲಿನ ಉನ್ನತ ಶಿಕ್ಷಣದ ನಿಯಂತ್ರಣವು ಅಧಿಕೃತವಾಗಿ ಭಾರತೀಯ ಜ್ಞಾನಪರಂಪರೆಯ ಕಿಂಚಿತ್ತೂ ಪರಿಚಯ ವಿಲ್ಲದವರ ಆಧೀನವಿದೆ. ಅವರಿಗೆ ಭಾರತೀಯ ಜ್ಞಾನಪರಂಪರೆಯ ಬಗ್ಗೆ ಗಾಢವಾದ ಪರಿಚಯವಿಲ್ಲ. ಗೌರವವಿರುವುದು ಒಂದು ಬೇರೆಯೇ ವಿಷಯವಾಗಿದೆ ಹಾಗೂ ಅದರ ಆಳವಾದ ಪರಿಚಯವಿರುವುದು, ಇದು ಬೇರೆ ವಿಷಯವಾಗಿದೆ. ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ಭಾರತವು ಜಗತ್ತಿನಲ್ಲಿ ಒಂದು ಅಪವಾದ ವಾಗಿದೆಯೆಂಬುದು ಸ್ಪಷ್ಟವಾಗುತ್ತದೆ. ಸಂಪೂರ್ಣ ಜಗತ್ತಿನಲ್ಲಿ ಶಿಕ್ಷಣವನ್ನು ಸಂಬಂಧಪಟ್ಟ ದೇಶ ಮತ್ತು ಸಮಾಜದ ಜ್ಞಾನಪರಂಪರೆಗಳ ಶಿಕ್ಷಣವಿರುವ ತಜ್ಞರ  ಮಾರ್ಗದರ್ಶನದಲ್ಲಿ ನೀಡಲಾಗುತ್ತದೆ. ಭಾರತದಲ್ಲಿ ಈ ಸ್ಥಿತಿ ಮಾತ್ರ ಇದರ ವಿರುದ್ಧವಾಗಿದೆ. ಇದರೊಂದಿಗೆ ಸಂಪೂರ್ಣ ಶೈಕ್ಷಣಿಕ ವ್ಯವಸ್ಥೆಯು ನೌಕರಶಾಹಿಯ ಅಧೀನವಿದೆ ಹಾಗೂ ಈ ನೌಕರಶಾಹಿಗೂ ಭಾರತೀಯ ಜ್ಞಾನಪರಂಪರೆಯ ಬಗ್ಗೆ ಯಾವುದೇ ಜ್ಞಾನವಿಲ್ಲ. ಅವರ ಶಿಕ್ಷಣವೂ ಕ್ರೈಸ್ತ ಜ್ಞಾನಪರಂಪರೆಯ ಹೀನ-ದೀನ ಅನುಕರಣೆ ಮಾಡುವುದಾಗಿದೆ. ಇಂತಹ ಸ್ಥಿತಿಯಲ್ಲಿ ಶಿಕ್ಷಣ ನೀಡುವ ಅಥವಾ ಶಿಕ್ಷಣದ ಸ್ವರೂಪವನ್ನು ನಿರ್ಧರಿಸುವವರಿಗೆ ಇಂತಹ ಶಿಕ್ಷಣ ಪಡೆಯಲು ಇಚ್ಛೆಯಿರುವ ಭಾರತೀಯ ಕುಟುಂಬ ದೊಂದಿಗೆ ಆತ್ಮೀಯತೆಯ ಸಂಬಂಧವಿರಲು ಸಾಧ್ಯ ವಿಲ್ಲ. ಅದು ಕೇವಲ ಪ್ರಭುತ್ವ ಮತ್ತು ತಮ್ಮ ಭೀತಿ ತೋರಿಸುವುದಾಗಿರುತ್ತದೆ.
೧೯. ವಿದೇಶಿ ಬುದ್ಧಿಯಿಂದ ಸಂಚಾಲಿತ ಅಧಿಕಾರಿಯೇ ನಿರ್ಣಾಯಕ !
ಮೇಲೆ ಉಲ್ಲೇಖಿಸಿದಂತೆ ರಾಷ್ಟ್ರಪತಿಗಳು ವಿಸಿಟರ್ ಆಗಿರುವುದು ಮತ್ತು ರಾಜ್ಯಪಾಲರು ರಾಜ್ಯಗಳಲ್ಲಿನ ವಿದ್ಯಾಪೀಠಗಳ ಕುಲಪತಿಗಳಾಗಿ ರುವುದಕ್ಕೆ ವ್ಯವಹಾರದ ಪ್ರಭುತ್ವದ ಹೊರತು ಏನೂ ಅರ್ಥ ಇರುವುದಿಲ್ಲ; ಏಕೆಂದರೆ ಈ ಮಹಾಶಯರು ಭಾರತೀಯ ಜ್ಞಾನಪರಂಪರೆಗಳ ವಿದ್ವಾಂಸರಾಗಿರು ವುದಿಲ್ಲ. ಈ ರೀತಿಯಲ್ಲಿ ಸಾಮಾನ್ಯವಾಗಿ ವರಿಷ್ಠ ಸರಕಾರಿ ಅಧಿಕಾರಿಗಳಿಗೆ ಕೇವಲ ಆಡಳಿತದವರೇ ಜ್ಞಾನ ನೀಡಿರುತ್ತಾರೆ. ಅದು ಸಹ ಕೇವಲ ಆಂಗ್ಲ ಭಾಷೆಯ ಯುರೋ-ಭಾರತೀಯ ಜ್ಞಾನ ! ಐ.ಎ.ಎಸ್. ಮತ್ತು ಐ.ಪಿ.ಎಸ್ ಅಧಿಕಾರಿಗಳಿಗೆ ಭಾರತೀಯ ಜ್ಞಾನ ಪರಂಪರೆಯ ಬಗ್ಗೆ ಸ್ವಲ್ಪವೂ ಜ್ಞಾನವಿರುವುದಿಲ್ಲ. ಹೀಗಿರುವಾಗ ಈ ಅಧಿಕಾರಿಗಳಿಂದ ವಿದ್ಯಾಪೀಠಗಳ ಮೇಲೆ ಯಾವ ಜ್ಞಾನದ ವಿಸ್ತಾರಕ್ಕಾಗಿ ಒತ್ತಡ ಹಾಕು ತ್ತಾರೆ ಅಥವಾ ಪ್ರೇರಣೆ ನೀಡುತ್ತಾರೆ, ಆ ಜ್ಞಾನವು ಸಂಪೂರ್ಣ ಯುರೋ-ಭಾರತೀಯ ಜ್ಞಾನವೇ ಆಗಿರು ತ್ತದೆ. ಈ ರೀತಿ ವ್ಯವಹಾರದಲ್ಲಿ ಸಮಸ್ತ ಭಾರತೀಯ ಉನ್ನತ ಶಿಕ್ಷಣವು ಭಾರತನಿರಪೇಕ್ಷವಾಗಿದೆ. ಆ ಭಾರತೀಯ ವಿದ್ಯೆಯು ಸಂಪೂರ್ಣ ಭಾರತೀಯ ಪರಂಪರಾಹೀನವಾಗಿದೆ.
೨೦. ಭಾರತದಲ್ಲಿಯೇ ಭಾರತೀಯ ದರ್ಶನಗಳು,
ರಾಜನೀತಿಶಾಸ್ತ್ರ, ಧರ್ಮಶಾಸ್ತ್ರ  ಮತ್ತು ಸಮಾಜಶಾಸ್ತ್ರವನ್ನು ಕಲಿಸದಿರುವುದು
ದೇಶದಲ್ಲಿನ ಮುಂಚೂಣಿಯಲ್ಲಿರುವ ತತ್ತ್ವಜ್ಞಾನಿ ಗಳು ಉನ್ನತ ಶಿಕ್ಷಣದ ವ್ಯಾಸಪೀಠಗಳು, ಕೇಂದ್ರಗಳು ಮತ್ತು ಪತ್ರಗಳ ಮೂಲಕ ಬಹಿರಂಗವಾಗಿ ಭಾರತೀಯ ವಿದ್ಯಾಪೀಠಗಳಿಂದ ಏನೆಲ್ಲ ಕಲಿಸಲಾಗುತ್ತದೆಯೋ, ಅದು ಯಾವುದೇ ಪ್ರಕಾರದ ಭಾರತೀಯ ತತ್ತ್ವಜ್ಞಾನ ವಲ್ಲ, ಎಂದು ಹೇಳಲಾಗುತ್ತದೆ. ಅದು ಯುರೋಪ್‌ನ ತತ್ತ್ವಪರಂಪರೆಯ ಕೇವಲ ಒಂದು ಶಾಖೆಯಾಗಿದೆ. ಸಮಾಜವಿಜ್ಞಾನ, ರಾಜನೀತಿಶಾಸ್ತ್ರ ಮತ್ತು ಅರ್ಥಶಾಸ್ತ್ರ ಈ ಕ್ಷೇತ್ರಗಳಲ್ಲಿಯೂ ಇದೇ ಸತ್ಯವಾಗಿದೆ. ಇಷ್ಟು ಮಾತ್ರವಲ್ಲ, ೧೯೪೭ ರ ನಂತರ ವಿಶೇಷವಾಗಿ ವಿರಾಟ ಭಾರತೀಯ ಸಾಕ್ಷಿಗಳನ್ನು ಸಂಪೂರ್ಣವಾಗಿ ಉಪೇಕ್ಷಿಸಿ ಭಾರತದ ವಿರುದ್ಧ ಹೋಗುವಂತಹ ಪರಕೀಯ ವಾರ್ತೆಗಳು, ಹರಟೆ ಮತ್ತು ನಿರುದ್ಯೋಗಿಗಳ ಹೇಳಿಕೆಗಳ ಆಧಾರದಲ್ಲಿ ಭಾರತವಿರೋಧಿ ಸುಳ್ಳು ಕಥೆಗಳನ್ನು ಹಬ್ಬಿಸುವ ಕುತಂತ್ರವನ್ನು ರಚಿಸಲಾಗಿದೆ. ಅದಕ್ಕೆ ಯಾವುದೇ ರೀತಿಯಲ್ಲಿ ಭಾರತದ ಇತಿಹಾಸ ವೆಂದು ಹೇಳಲು ಸಾಧ್ಯವಿಲ್ಲ.
೨೧. ನಮ್ರತೆಯ ಉಪಾಯದಿಂದ ಶುಭಾರಂಭಗೊಳಿಸಿರಿ !
ಇದಕ್ಕಾಗಿ ರಾಷ್ಟ್ರೀಯ ಶಿಕ್ಷಣದ ಪುನರ್‌ರಚನೆ ಗಾಗಿ ತಕ್ಷಣ ಕೆಲವು ಹೆಜ್ಜೆಗಳನ್ನಿಡುವ ಅವಶ್ಯಕತೆ ಯಿದೆ. ಹೆಚ್ಚು ಕಡಿಮೆ ಕಳೆದ ೭೦ ವರ್ಷಗಳಲ್ಲಿ ಭಾರತೀಯ ವಿದ್ಯಾಪೀಠಗಳಲ್ಲಿ ಮಾನವೀಯ ವಿದ್ಯೆಯ ಕ್ಷೇತ್ರದಲ್ಲಿ ಯಾರೆಲ್ಲರು ಬಲಪೂರ್ವಕವಾಗಿ ಅಭಾರತೀಯ ಜ್ಞಾನಪರಂಪರೆಯನ್ನು ಪ್ರತಿಷ್ಠಾಪನೆ ಮಾಡಿದ್ದಾರೋ, ಅವರು ಖಚಿತವಾಗಿ ರಾಜಕೀಯ ಶಕ್ತಿಗಳಿಂದ ರಕ್ಷಣೆ ಪಡೆಯುವವರು ಹಾಗೂ ಪ್ರಭಾವೀ ಜನರಾಗಿದ್ದಾರೆ. ಆದ್ದರಿಂದ ಅವರನ್ನು ಶಿಕ್ಷಣ ಕ್ಷೇತ್ರದಿಂದ ಹೊರಗೆ ತೆಗೆಯುವುದು ಅಸಾಧ್ಯ ವಾಗಿದೆ; ಆದರೆ ಪ್ರಜಾಪ್ರಭುತ್ವವಿರುವ ಒಂದು ರಾಷ್ಟ್ರದಲ್ಲಿ ಕಳೆದ ೬೭ ವರ್ಷಗಳಿಂದ ನಾಸ್ತಿಕ ಭೌತಿಕವಾದಿ ಪಂಥದ ಜ್ಞಾನವನ್ನು ಬಲವಂತವಾಗಿ ಹಬ್ಬಿಸಲು ಎಷ್ಟು ಪ್ರಯತ್ನವಾಯಿತೋ, ಕನಿಷ್ಟ ಅಷ್ಟಾದರೂ ಮಾನವೀ ವಿದ್ಯೆಯ ಕ್ಷೇತ್ರದಲ್ಲಿ ಭಾರತೀಯ ವಿದ್ಯಾಪರಂಪರೆಗಾಗಿ ಮಾಡಬೇಕು; ಏಕೆಂದರೆ ಈ ನಾಸ್ತಿಕ ಭೌತಿಕವಾದಿ ಪಂಥಗಳ ಹೊರಗೆ ಸಹ ಕೋಟಿಗಟ್ಟಲೆ ಭಾರತೀಯರಿದ್ದಾರೆ, ಅವರಿಗೆ ಭಾರತೀಯ ವಿದ್ಯಾಪರಂಪರೆಯ ಮೇಲೆ ಸಂಪೂರ್ಣ ನಿಷ್ಠೆ ಇದೆ, ಎಂದು ನಮ್ರತೆಯಿಂದ ಆಗ್ರಹಿಸಬಹುದು. ಉದಾಹರಣೆಯೆಂದು ದರ್ಶನಶಾಸ್ತ್ರವನ್ನು ಕಲಿಸಲು ೨ ಬೇರೆ ಬೇರೆ ವರ್ಗಗಳನ್ನು ಇಡಬೇಕು. ಅವುಗಳಲ್ಲಿ ಒಂದು ಭಾರತೀಯ ದರ್ಶನಜ್ಞಾನದ್ದು ಮತ್ತು ಇನ್ನೊಂದು ಯುರೋಪ್ ದರ್ಶನಜ್ಞಾನದ್ದು ! ಇದರಲ್ಲಿ ನೀಡಲ್ಪಡುವ ಶಿಕ್ಷಣವು ಸಂಬಂಧಪಟ್ಟ ಜ್ಞಾನಕ್ಷೇತ್ರದ ತಜ್ಞರು ಬರೆದಿರುವ ಗ್ರಂಥಗಳ ಆಧಾರದಲ್ಲಿಯೇ ಇರುವುದು. ಇದನ್ನು ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಯುರೋಪ್‌ನಲ್ಲಿ ಎಷ್ಟು ಪ್ರಮುಖ ದಾರ್ಶನಿಕರು ಆಗಿ ಹೋದರೋ, ಅವರೆಲ್ಲರೂ ಪಾದ್ರಿಗಳಾಗಿದ್ದರು. ಅವರಲ್ಲಿ ಕೆಲವರು ಚರ್ಚ್‌ನೊಂದಿಗಿರುವ ನಿಷ್ಠೆಯನ್ನು ತ್ಯಾಗ ಮಾಡಿದರು ಹಾಗೂ ಕೆಲವರು ಸಂಪೂರ್ಣ ಕ್ರೈಸ್ತ ವಿರೋಧಿ ಗಳಾದರು; ಆದರೆ ಶೇ. ೯೦ ರಷ್ಟು ಯುರೋಪಿಯನ್ ತತ್ತ್ವಜ್ಞಾನಿಗಳು ಪಾದ್ರಿಗಳೇ ಆಗಿದ್ದರು. ಆದ್ದರಿಂದ ಭಾರತದಲ್ಲಿಯೂ ಭಾರತೀಯ ದರ್ಶನವನ್ನು ಕಲಿಸುವ ಅಧಿಕಾರವನ್ನು ಮಠ ಮತ್ತು ಆಶ್ರಮಗಳಲ್ಲಿ ಕಲಿತಿರುವ ವಿದ್ವಾಂಸರಿಗೇ ಕೊಡಬೇಕು. ಆಂಗ್ಲಪದ್ಧತಿಯ ಶಿಕ್ಷಣ ನೀಡುವ  ವ್ಯಕ್ತಿ ಎಷ್ಟರ ವರೆಗೆ ಯಾವುದೇ ಆಶ್ರಮ ಅಥವಾ ಮಠದ ನಿವಾಸಿ ಆಗಿರುವುದಿಲ್ಲವೋ, ಅಷ್ಟರ ವರೆಗೆ ಭಾರತೀಯ ತತ್ತ್ವಜ್ಞಾನವನ್ನು ಕಲಿಸುವ ಅಧಿಕಾರಿ ಆಗಲು ಸಾಧ್ಯವಿಲ್ಲ. ಇದರಲ್ಲಿಯೂ ಹೊಸತಾಗಿ ತಯಾರಾದ ಯುರೋ-ಭಾರತೀಯ ಪದ್ಧತಿಯ ಮಠ ಮತ್ತು ಆಶ್ರಮಗಳಲ್ಲಿ ಇದ್ದವರನ್ನು ಅಧಿಕಾರಿಯೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪರಂಪರಾಗತ ಆಶ್ರಮ ಮತ್ತು ಮಠದಲ್ಲಿರುವವರೇ ಭಾರತೀಯ ತತ್ತ್ವಜ್ಞಾನವನ್ನು ಕಲಿಸುವ ಅಧಿಕಾರಿ ಗಳಾಗುತ್ತಾರೆ. ಈ ವಿಷಯದಲ್ಲಿ ನಮ್ಮ ದೊಡ್ಡ ಧರ್ಮಾಚಾರ್ಯರಿಗೆ ಪ್ರಾರ್ಥನೆ ಮಾಡಿ ಕನಿಷ್ಠ ಮೂರು ತಿಂಗಳ ತರಬೇತಿ ಅಭ್ಯಾಸಕ್ರಮವನ್ನು ನಡೆಸಿ ಅದರ ಮೂಲಕ ಸಂಬಂಧಪಟ್ಟ ಅಧ್ಯಾಪಕರು ಮತ್ತು ವಿದ್ವಾಂಸರಿಗೆ ಶಿಕ್ಷಣ ನೀಡಬೇಕು ಹಾಗೂ ಸಂಬಂಧಪಟ್ಟ ಧರ್ಮಾಚಾರ್ಯರಿಂದ ಅವರಿಗೆ ಅಧಿಕಾರಿ ಯಾಗುವ ಪ್ರಮಾಣಪತ್ರವನ್ನು ಸಲ್ಲಿಸುವುದು ಅನಿವಾರ್ಯಗೊಳಿಸ ಬೇಕು. ಇದೇ ರೀತಿ ರಾಜನೀತಿಶಾಸ್ತ್ರದಲ್ಲಿಯೂ ಯಾವ ವ್ಯಕ್ತಿಯ ಮೂಲ ಸ್ರೋತರೂಪದಲ್ಲಿ ವಾಲ್ಮಿಕಿ ರಾಮಾಯಣ, ಮಹಾಭಾರತ, ಚಾಣಕ್ಯನ ಅರ್ಥಶಾಸ್ತ್ರ ಮತ್ತು ಇತರ ರಾಜನೀತಿ, ಶಾಸ್ತ್ರೀಯ ಗ್ರಂಥ ಮತ್ತು ಭಾರತೀಯ ಧರ್ಮಶಾಸ್ತ್ರದ ಅಭ್ಯಾಸ ಆಗಿರುವುದೋ ಹಾಗೂ ಯಾರು ಸಂಸ್ಕೃತ ಜ್ಞಾನ ಸಂಪನ್ನರಾಗಿರುವರೋ, ಅವರೇ  ರಾಜನೀತಿ ಶಾಸ್ತ್ರವನ್ನು ಕಲಿಸುವ ಅಧಿಕಾರಿಗಳಾಗುತ್ತಾರೆ.
೨೩. ಭಾರತದಲ್ಲಿನ ಉನ್ನತ ಶಿಕ್ಷಣವು ಜಗತ್ತಿನ ಆತ್ಮಗೌರವಸಂಪನ್ನವಾಗಿರುವ ಎಲ್ಲ ರಾಷ್ಟ್ರಗಳಲ್ಲಿರುವ ಹಾಗೆಯೇ ಇರಬೇಕು !
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಯುರೋ-ಅಮೇರಿಕಾ ಜ್ಞಾನಪ್ರವಾಹದ ವಿನಮ್ರ ಪ್ರಶಿಕ್ಷಣಾರ್ಥಿಗಳ ವಿಶಾಲವಾದ  ಉತ್ಪಾದನೆಯನ್ನು ಭಾರತೀಯ ಜ್ಞಾನವಿಸ್ತಾರದ ರೂಪದಲ್ಲಿ ಮಂಡಿಸುವುದು ಎರಡೂ ಜ್ಞಾನಪ್ರವಾಹಗಳ ಮೇಲೆ ಆಗುವ ಅನ್ಯಾಯವಾಗಿದೆ ಹಾಗೂ ಇಂದು ಸಹ ಅದು ಯುರೋ-ಅಮೇರಿಕಾದ ಪ್ರವಾಹದ ಸೇವೆಯೇ ಆಗಿದೆ. ಭಾರತದಲ್ಲಿ ಮೊದಲ ಹಂತದಲ್ಲಿ ಭಾರತೀಯತೆ, ಹಿಂದುತ್ವ, ಹಿಂದೂ ಧರ್ಮ, ಹಿಂದೂ ಜ್ಞಾನ ಪರಂಪರೆ, ಹಿಂದೂ ಶಾಸ್ತ್ರಪರಂಪರೆ ಇತ್ಯಾದಿಗಳಿಗೂ ಅಷ್ಟೇ ಸ್ಥಾನಮಾನ ಸಿಗಬೇಕು, ಎಷ್ಟು ೧೯೪೭ ರಿಂದ ಇಂದಿನವರೆಗೆ  ಭಾರತೀಯ ಶಿಕ್ಷಣ ಕ್ಷೇತ್ರದಲ್ಲಿ ಕ್ರೈಸ್ತ, ಇಸ್ಲಾಂ ಮತ್ತು  ಯುರೋಪಿಯನ್ ಜ್ಞಾನ ಪರಂಪರೆಗಳಿಗೆ ಸಿಕ್ಕಿದೆ. ಅನಂತರವೇ ಇನ್ನೊಂದು ಹಂತ ಬರುವುದು; ಆದರೆ ಇಷ್ಟು ನ್ಯಾಯವಾದರೂ ತಕ್ಷಣ ಸಿಗಬೇಕು. ಭಾರತದಲ್ಲಿನ ಉನ್ನತ ಶಿಕ್ಷಣವು ಜಗತ್ತಿನ ಎಲ್ಲ ಆತ್ಮ ಗೌರವಸಂಪನ್ನ ರಾಷ್ಟ್ರಗಳಲ್ಲಿರುವ ಹಾಗೆಯೇ ಇರಬೇಕು. - ಪ್ರಾ. ರಾಮೇಶ್ವರ ಮಿಶ್ರ, ಸಂಚಾಲಕರು, ಗಾಂಧಿ ವಿದ್ಯಾಸಂಸ್ಥಾನ, ವಾರಣಾಸಿ        (ಮುಕ್ತಾಯ)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ರಾಷ್ಟ್ರೀಯ ಶಿಕ್ಷಣದ ಪುನರ್‌ರಚನೆ ಆವಶ್ಯಕ !