ಕೇಂದ್ರ ಸರಕಾರದಿಂದ ಮುಸಲ್ಮಾನರಿಗಾಗಿ ಪ್ರಗತಿಶೀಲ ಪಂಚಾಯತ್ ಯೋಜನೆ !

ಕೇಂದ್ರ ಸರಕಾರವು ದೇಶದ ೬ ರಾಜ್ಯಗಳಲ್ಲಿ ಅಲ್ಪಸಂಖ್ಯಾತರಿರುವ ಹಿಂದೂಗಳ
ಪ್ರಗತಿಗಾಗಿಯೂ ಏನಾದರೂ ಯೋಜನೆ ಜಾರಿಗೆ ತರಬೇಕು ಎಂಬುದು ಹಿಂದೂಗಳ ಅಪೇಕ್ಷೆಯಾಗಿದೆ !
ದೇಶದಲ್ಲಿ ಇತರ ಸಂಪ್ರದಾಯಗಳ ಪ್ರಗತಿಯಾಗಿದೆ ಎಂದು ತಿಳಿದುಕೊಳ್ಳಬೇಕೇ ?
ನವ ದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಮುಸಲ್ಮಾನರ ಪ್ರಗತಿಗಾಗಿ ಮತ್ತು ಅವರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರಲು ಪ್ರಗತಿಶೀಲ ಪಂಚಾಯತಿ ಹೆಸರಿ ನಲ್ಲಿ ದೇಶಾದ್ಯಂತ ಪಂಚಾಯತಿಗಳನ್ನು ಆಯೋಜಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಪಂಚಾಯತಿಗಳ ಮೂಲಕ ಮುಸಲ್ಮಾನರ ಸಮಸ್ಯೆಗಳನ್ನು ಕಂಡು ಹಿಡಿದು ಅವರಿಗೆ ಪರಿಹಾರ ಹುಡುಕಲು ತಕ್ಷಣವೇ ಪ್ರಯತ್ನಿಸ ಲಾಗುವುದು.
ಪ್ರಗತಿಶೀಲ ಪಂಚಾಯತಿಗಳನ್ನು ಹರ್ಯಾಣಾದಲ್ಲಿ ಮುಸಲ್ಮಾನರು ಬಹುಸಂಖ್ಯೆಯಲ್ಲಿರುವ ಮೇವಾತ್ ಎಂಬ ಲ್ಲಿಂದ ಪ್ರಾರಂಭಿಸಲಾಗುವುದು. ಇದರಲ್ಲಿ ಅಲ್ಪಸಂಖ್ಯಾತ ಕಲ್ಯಾಣಸಚಿವ ಮುಖ್ತಾರ ಅಬ್ಬಾಸ್ ನಕ್ವೀ ಮತ್ತಿತರ ಕೇಂದ್ರ ಸಚಿವರು ಸಹಭಾಗಿಯಾಗುವರು. ಕೇಂದ್ರ ಸರಕಾರದ ಅಭಿಮತದಲ್ಲಿ, ಕೇಂದ್ರ ಸರಕಾರ ಮುಸಲ್ಮಾನರ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧವಿದೆ. ಅದಕ್ಕಾಗಿ ಈ ಪಂಚಾಯತಿ ಮೂಲಕ ದೇಶದಲ್ಲಿ ಮುಸಲ್ಮಾನರನ್ನು ಭೇಟಿ ಯಾಗಲು ಪ್ರಯತ್ನಿಸಲಾಗುವುದು. ಕಾಂಗ್ರೆಸ್ ಪಕ್ಷವು ಈ ಯೋಜನೆಯನ್ನು ಟೀಕಿಸುತ್ತಾ, ಈ ಯೋಜನೆಯು ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಭಾಜಪವು ಮಾಡುತ್ತಿರುವ ಪ್ರಯತ್ನವಾಗಿದೆ ಮತ್ತು ತಮ್ಮ ಪಕ್ಷವು ಎಂದಿಗೂ ಮುಸಲ್ಮಾನರ ಒಳಿತಿಗಾಗಿ ವಿಚಾರ ಮಾಡಿದೆ ಹಾಗೂ ಅದಕ್ಕಾಗಿ ಕಾರ್ಯವನ್ನೂ ಮಾಡಿದೆ ಎಂದು ಹೇಳಿದೆ. (ಕಾಂಗ್ರೆಸ್ ಪಕ್ಷವು ಕೇವಲ ಮುಸಲ್ಮಾನರ ಒಳಿತಿಗಾಗಿಯೇ ವಿಚಾರ ಮಾಡಿ ಅದಕ್ಕಾಗಿಯೇ ಕೆಲಸ ಮಾಡಿದೆ ಮತ್ತು ಹಿಂದೂಗಳನ್ನು ಗಾಳಿಗೆ ತೂರಿದೆ ! - ಸಂಪಾದಕರು) 

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕೇಂದ್ರ ಸರಕಾರದಿಂದ ಮುಸಲ್ಮಾನರಿಗಾಗಿ ಪ್ರಗತಿಶೀಲ ಪಂಚಾಯತ್ ಯೋಜನೆ !