ಪವಿತ್ರ ಗಂಗಾಜಲದಿಂದ ಕ್ಷಯರೋಗ ಮತ್ತು ವಿಷಮಜ್ವರಗಳಿಗೆ ಔಷಧಿ ನಿರ್ಮಿಸಲು ಸಾಧ್ಯ ! - ವಿಜ್ಞಾನಿಗಳು

ಹಿಂದೂ ಧರ್ಮವು ಪವಿತ್ರಗಂಗಾ ನದಿಯ ಮಹತ್ವವನ್ನು ಸಾವಿರಾರು
ವರ್ಷಗಳ ಹಿಂದೆಯೇ ಗುರುತಿಸಿತ್ತು. ಅದು ಈಗಿನ ವಿಜ್ಞಾನಿಗಳ ಗಮನಕ್ಕೆ ಬರುತ್ತಿದೆ !
ಚಂದೀಗಢ : ಇತ್ತೀಚೆಗಿನ ಒಂದು ಸಂಶೋಧನೆಯಲ್ಲಿ ಗಂಗಾ ನದಿಯ ನೀರು ಪವಿತ್ರ ಇರುವುದಾಗಿ ವಿಜ್ಞಾನಿಗಳು ಸ್ವೀಕರಿಸಿದ್ದಾರೆ. ಇಲ್ಲಿಯ ಸಿಎಸ್‌ಐಆರ್-ಇನ್ಸಿಟ್ಯೂಟ ಆಫ್ ಮೈಕ್ರೋಬಿಯಲ್ ಟೆಕ್ನಾಲಾಜಿ (ಐಎಮ್‌ಟೆಕ್)ಯ ವಿಜ್ಞಾನಿಗಳಿಗೆ ಅವರ ಸಂಶೋಧನೆಯಲ್ಲಿ ಗಂಗಾನದಿಯ ನೀರಿನಲ್ಲಿ ಬ್ಯಾಕ್ಟೇರಿಯೋಫೇಜ್ ವಿಷಾಣುಗಳಿರುವುದಾಗಿ ಕಂಡುಬಂದಿದೆ.
ಗಂಗಾನದಿಯ ಶುದ್ಧ ನೀರಿನಲ್ಲಿ ದೊರಕಿದ ಮೆಟಾಜಿನೋಮ್ - ವೈರೋಮ್ಸ್‌ನ ವಿಶ್ಲೇಷಣೆಯನ್ನು ಅವಲೋಕಿಸಿದಾಗ, ಇದರಲ್ಲಿ ನೀರಿನ ಪಾವಿತ್ರ್ಯವನ್ನು ಕಾಪಾಡುವ ಅದ್ಭುತ ಶಕ್ತಿ ಇದೆ, ಎಂಬುದಾಗಿ ಐಎಮ್ಟೆಕ್‌ನ ಹಿರಿಯ ಮತ್ತು ಪ್ರಮುಖ ವಿಜ್ಞಾನಿಯಾದ ಡಾ. ಷಣ್ಮುಗನ್ ಮಯಿಲರಾಜ್‌ರು ವ್ಯಕ್ತಪಡಿಸಿದರು.  ಇದೇ ಮೊದಲ ಬಾರಿ ವಿಜ್ಞಾನಿಗಳಿಗೆ ಹೊಸ ವಿಧದ ವಿಷಾಣು ಸಿಕ್ಕಿದೆ.
ಈ ವಿಷಾಣುಗಳು ಗಂಗಾ ನದಿಯ ದಡದಲ್ಲಿರುವ ಮನೆಯ ಸ್ವಚ್ಛ ನೀರಿನಲ್ಲಿಯೂ ಕಂಡುಬಂದಿವೆ. ಇದನ್ನು ಮಲ್ಟಿ ಡ್ರಗ್ ರೆಸಿಸ್ಟಂಟ್ ಎಂದರೆ ಎಮ್‌ಡಿಆರ್ ಇನ್ಫೆಕ್ಷನ್‌ನ ಚಿಕಿತ್ಸೆಯಲ್ಲಿ ಉಪಯೋಗಿಸಬಹುದು. ಡಾ. ಮೈಲರಾಜ್ ಮತ್ತು ಅವರ ತಂಡದ  ವಿಜ್ಞಾನಿಗಳು ಈ ರೀತಿಯ ೨೦ ರಿಂದ ೨೫ ವಿಷಾಣುಗಳನ್ನು ಕಂಡು ಹಿಡಿದಿದ್ದಾರೆ. ಇದನ್ನು ಕ್ಷಯರೋಗ, ವಿಷಮಜ್ವರ, ನ್ಯುಮೋನಿಯಾ, ಡಾಯರಿಯಾ, ಮೆನಿನ್ಜಾಯಿಟಿಸ್‌ಗಳಂತಹ ಅನೇಕ ರೋಗಗಳ ಚಿಕಿತ್ಸೆಗಾಗಿ ಬಳಸಬಹುದಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪವಿತ್ರ ಗಂಗಾಜಲದಿಂದ ಕ್ಷಯರೋಗ ಮತ್ತು ವಿಷಮಜ್ವರಗಳಿಗೆ ಔಷಧಿ ನಿರ್ಮಿಸಲು ಸಾಧ್ಯ ! - ವಿಜ್ಞಾನಿಗಳು