ಪಂಡಿತ್ ನಾಥೂರಾಮ ಗೋಡ್ಸೆಯವರು ಗಾಂಧಿಹತ್ಯೆ ಮಾಡಿದ ಬಗ್ಗೆ ನ್ಯಾಯಾಲಯದಲ್ಲಿ ಹೇಳಿದ (೧೫೦ ರಲ್ಲಿ) ಕೆಲವು ಪ್ರಮುಖ ಕಾರಣಗಳು !

೧. ೧೯೧೯ ರಲ್ಲಿ ಅಮೃತಸರದ ಜಲಿಯನವಾಲಾ ಬಾಗ್ ಹತ್ಯಾ ಕಾಂಡದಲ್ಲಿ ನಡೆದ ನರಸಂಹಾರಕ್ಕಾಗಿ ಜನರಲ್ ಡಾಯರ್‌ರನ್ನು ಹೊಣೆಗಾರನೆಂದು ನಿರ್ಧರಿಸಿ ಅವನ ವಿರುದ್ಧ ಖಟ್ಲೆ ನಡೆಸ ಬೇಕೆಂದು ಜನರು ಆಕ್ರೋಶದಿಂದ ಆಗ್ರಹಿಸುತ್ತಿದ್ದರು. ಆಗ ಮೋಹನದಾಸ ಗಾಂಧಿಯವರು ಈ ಬೇಡಿಕೆಯನ್ನು ಸಮರ್ಥಿಸಲು ತಿರಸ್ಕರಿಸಿದರು.
೨. ಭಗತ್‌ಸಿಂಗ್, ರಾಜಗುರು ಮತ್ತು ಸುಖದೇವ ಇವರಿಗೆ ಗಲ್ಲು ಶಿಕ್ಷೆ ವಿಧಿಸಿರುವುದರಿಂದ ಕಳವಳಗೊಂಡ ಜನರು ಗಾಂಧಿಯವರು ಇದರಲ್ಲಿ ಹಸ್ತಕ್ಷೇಪ ಮಾಡಿ ಈ ಯುವ ದೇಶಭಕ್ತರ ಪ್ರಾಣವನ್ನು ಉಳಿಸಬೇಕೆಂದು ಆಸೆಯಿಂದ ನೋಡುತ್ತಿದ್ದರು. ಆದರೆ ಗಾಂಧಿಯವರು ಭಗತ್‌ಸಿಂಗ್ ಕೃತಿಯನ್ನು ತಪ್ಪು ಹಾಗೂ ಹಿಂಸಾತ್ಮಕ ಕೃತ್ಯವೆಂದು ಹೇಳಿ ಹಸ್ತಕ್ಷೇಪ ಮಾಡಲು ಒಪ್ಪಲಿಲ್ಲ.
೩. ೬ ಮೇ ೧೯೪೬ ರಂದು ಸಮಾಜವಾದಿ ಕಾರ್ಯಕರ್ತರ ಸಮ್ಮೇಳನದಲ್ಲಿ ಭಾಷಣ ಮಾಡುವಾಗ ಗಾಂಧಿಯವರು ಮುಸ್ಲಿಂ ಲೀಗ್‌ನ ಹಿಂಸೆಯೆದುರು ಜನರು ಆಹುತಿ ನೀಡಬೇಕೆಂದು ಕರೆ ನೀಡಿದ್ದರು.
೪. ಮಹಮ್ಮದ ಅಲಿ ಜಿನ್ನಾ ಮತ್ತು ಇತರ ರಾಷ್ಟ್ರವಾದಿ ಮುಸಲ್ಮಾನರ ವಿರೋಧವನ್ನು ಲೆಕ್ಕಿಸದೆ ೧೯೨೧ ರಲ್ಲಿ ಗಾಂಧಿ ಖಿಲಾಫತ್ ಆಂದೋಲನಕ್ಕೆ ಬೆಂಬಲ ಸೂಚಿಸಿದ್ದರೂ ಕೇರಳದಲ್ಲಿ ಮುಸಲ್ಮಾನರು ಅಲ್ಲಿನ ಹಿಂದೂಗಳಿಗೆ ಹೊಡೆದರು ಹಾಗೂ ಸುಮಾರು ೧ ಸಾವಿರದ ೫೦೦ ಹಿಂದೂಗಳನ್ನು ಹತ್ಯೆಗೈದರು ಹಾಗೂ ೨ ಸಾವಿರಕ್ಕಿಂತಲೂ ಹೆಚ್ಚು ಹಿಂದೂಗಳನ್ನು ಮತಾಂತರಿಸಿದರು. ಈ ಕೃತ್ಯವನ್ನು ಗಾಂಧಿಯವರು ಖಂಡಿಸದೆ ಇದನ್ನು ‘ಖುದಾಕೆ ಬಹಾದ್ದೂರ ಬಂದೋ ಕೀ ಬಹಾದ್ದೂರಿ’ ಎಂದು ವರ್ಣಿಸಿದರು.
೫. ೧೯೨೬ ರಲ್ಲಿ ಆರ್ಯ ಸಮಾಜದ ಶುದ್ಧೀಕರಣ ಆಂದೋಲನದ ಸ್ವಾಮಿ ಶ್ರದ್ಧಾನಂದರನ್ನು ಅಬ್ದುಲ್ ರಶೀದ್ ಎಂಬ ಮುಸಲ್ಮಾನನು ಹತ್ಯೆಗೈದನು. ಇದರ ಬಗ್ಗೆ ಪ್ರತಿಕ್ರಿಯಿಸಿದ ಗಾಂಧಿ ಈ ರಶೀದನನ್ನು ಅವರ ಸಹೋದರನೆಂದು ಸಂಬೋಧಿಸಿದರು, ಅವನ ಕೃತ್ಯವು ಯೋಗ್ಯವಾಗಿದ್ದು ಆರ್ಯಸಮಾಜದ ಶುದ್ಧೀಕರಣ ಚಳು ವಳಿಯು ರಾಷ್ಟ್ರವಿರೋಧಿ ಹಾಗೂ ಹಿಂದೂ-ಮುಸಲ್ಮಾನರ ಐಕ್ಯತೆಗೆ ಘಾತಕವಾಗಿದೆ, ಎಂದು ಘೋಷಿಸಿದರು.
೬. ಗಾಂಧಿ ಅನೇಕ ಬಾರಿ ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ ಪ್ರತಾಪ, ಗುರುಗೋವಿಂದಸಿಂಗ್ ಇವರನ್ನು ದಾರಿತಪ್ಪಿದ ರಾಷ್ಟ್ರಭಕ್ತರು ಎಂದು ಹೇಳಿದ್ದರು.
೭. ಗಾಂಧಿಯವರು ಕಾಶ್ಮೀರದ ರಾಜ ಹರಿಸಿಂಗ್‌ರವರಿಗೆ ಕಾಶ್ಮೀರದಲ್ಲಿ ಮುಸಲ್ಮಾನರು ಬಹುಸಂಖ್ಯೆಯಲ್ಲಿದ್ದಾರೆ; ಆದ್ದ ರಿಂದ ಸರಕಾರವನ್ನು ತೊರೆದು ಕಾಶಿಗೆ ಹೋಗಿ ಪ್ರಾಯಶ್ಚಿತ್ತ ತೆಗೆದು ಕೊಳ್ಳಲು ಹೇಳಿದ್ದರು. ತದ್ವಿರುದ್ಧ ಭಾಗ್ಯನಗರ (ಹೈದ್ರಾಬಾದ್)ದಲ್ಲಿ ಹಿಂದೂಗಳು ಬಹುಸಂಖ್ಯಾತರಿದ್ದರೂ ಅಲ್ಲಿನ ನಿಝಾಮನನ್ನು ಬೆಂಬಲಿಸಿದರು.
೮. ಬ್ಯಾ. ಜಿನ್ನಾಗೆ ಗಾಂಧಿಯವರು ಕಾಯದೆ ಆಝಮ್ ಎಂಬ ಬಿರುದನ್ನು ನೀಡಿದ್ದರು.
೯. ಕಾಂಗ್ರೆಸ್ಸಿನ ಧ್ವಜ ನಿರ್ಧಾರ ಸಮಿತಿಯು ೧೯೩೧ ರಲ್ಲಿ ಚರಕದ ಚಿತ್ರವಿರುವ ಕೇಸರಿ ಬಣ್ಣದ ಧ್ವಜವನ್ನು ನಿರ್ಧರಿಸಿತ್ತು; ಆದರೆ ಗಾಂಧಿಯವರ ಹಠಮಾರಿತನದಿಂದ ಭಾರತದ ಧ್ವಜವನ್ನು ತ್ರಿವರ್ಣ ಮಾಡಬೇಕಾಯಿತು.
೧೦. ಕಾಂಗ್ರೆಸ್ಸಿನ ತ್ರಿಪುರಾ ಅಧಿವೇಶನದಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್‌ರವರನ್ನು ಬಹುಮತದಿಂದ ಕಾಂಗ್ರೆಸ್ಸಿನ ಅಧ್ಯಕ್ಷರೆಂದು ಆರಿಸ ಲಾಗಿತ್ತು; ಆದರೆ ಪಟ್ಟಾಭಿರಾಮಯ್ಯರವರಿಗೆ ಗಾಂಧಿಯವರ ಬೆಂಬಲವಿದ್ದ ಕಾರಣ ಹಾಗೂ ಸುಭಾಶ್ಚಂದ್ರ ಬೋಸ್‌ಗೆ ಯಾವಾಗಲೂ ಆಗುತ್ತಿದ್ದ ವಿರೋಧದಿಂದ ಮತ್ತು ಗಾಂಧಿಯವರ ಅಸಹಕಾರದಿಂದ ಸುಭಾಶ್ಚಂದ್ರ ಬೋಸ್ ರಾಜೀನಾಮೆ ನೀಡಿದರು.
೧೧. ಲಾಹೋರ್ ಕಾಂಗ್ರೆಸ್ಸಿನಲ್ಲಿ ಸರದಾರ ವಲ್ಲಭಭಾಯಿ ಪಟೇಲ್ ಇವರು ಕಾಂಗ್ರೆಸ್ಸಿನ ಅಧ್ಯಕ್ಷರೆಂದು ಬಹುಮತದಿಂದ ಆಯ್ಕೆಯಾಗಿದ್ದರೂ ಕೇವಲ ಗಾಂಧಿಯವರ ಹಟಮಾರಿತನದಿಂದ ಈ ಹುದ್ದೆಯನ್ನು ಜವಾಹರ ಲಾಲ ನೆಹರೂವಿಗೆ ನೀಡಲಾಗಿತ್ತು.
೧೨. ೧೯೪೭ ರ ಜೂನ್ ೧೪-೧೫ ರಂದು ದೆಹಲಿಯಲ್ಲಿ ನಡೆದಿದ್ದ ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯಲ್ಲಿ ಭಾರತದ ವಿಭಜನೆಯ ನಿರ್ಣಯ ಅಂಗೀಕಾರವಾಗುತ್ತಿರಲಿಲ್ಲ; ಆದರೆ ಕೊನೇ ಕ್ಷಣದಲ್ಲಿ ಗಾಂಧಿ ಯವರು ಅಲ್ಲಿಗೆ ತೆರಳಿ ವಿಭಜನೆಗೆ ಬೆಂಬಲ ಸೂಚಿಸಿದರು. ಇದಕ್ಕೂ ಮೊದಲು ವಿಭಜನೆಯು ನನ್ನ ಶವದ ಮೇಲಾಗುವುದು, ಎಂದಿದ್ದರು.
೧೩. ಜವಾಹರಲಾಲ ನೆಹರೂರವರ ಅಧ್ಯಕ್ಷತೆಯಲ್ಲಿ ಮಂತ್ರಿಮಂಡಲವು ಸೋಮನಾಥ ಮಂದಿರದ ಪುನರ್‌ನಿರ್ಮಾಣವನ್ನು ಸರಕಾರದ ಖರ್ಚಿನಲ್ಲಿ ಮಾಡಲಾಗುವುದೆಂಬ ಪ್ರಸ್ತಾಪವನ್ನು ಅನುಮೋದನೆ ಮಾಡಿತ್ತು; ಆದರೆ ಗಾಂಧಿಯವರು ಈ ಮಂತ್ರಿಮಂಡಲದ ಸದಸ್ಯ ರಲ್ಲದಿದ್ದರೂ ಅವರು ಈ ಪ್ರಸ್ತಾಪವನ್ನು ರದ್ದು ಪಡಿಸುವಂತೆ ಮಾಡಿದರು ಹಾಗೂ ಅದೇ ಸಮಯದಲ್ಲಿ ದೆಹಲಿಯಲ್ಲಿನ ಮಸೀದಿಯ ದುರುಸ್ತಿ ಕಾರ್ಯ ಸರಕಾರದ ಖರ್ಚಿನಿಂದ ಆಗಬೇಕೆಂದು ೧೩ ಜನವರಿ ೧೯೪೮ ರಂದು ಉಪವಾಸ ಮಾಡಿ ಸರಕಾರದ ಮೇಲೆ ಒತ್ತಡ ಹೇರಿದರು.
೧೪. ಪಾಕಿಸ್ತಾನದಿಂದ ಬಂದ ಹಿಂದೂ ನಿರಾಶ್ರಿತರು ಮಸೀದಿಯಲ್ಲಿ ತಾತ್ಕಾಲಿಕ ಆಶ್ರಯ ಪಡೆದಿರುವಾಗ ಗಾಂಧಿಯವರು ಸಣ್ಣ ಮಕ್ಕಳು, ಮಹಿಳೆಯರು, ವೃದ್ಧರು ಹೀಗೆ ಎಲ್ಲರನ್ನೂ ಹೊರಗೆ ದಬ್ಬಿ ಕೊರೆಯುವ ಚಳಿಯಲ್ಲಿ ರಸ್ತೆಯ ಮೇಲೆ ಮಲಗುವಂತೆ ಮಾಡಿದರು.
೧೫. ಅಕ್ಟೋಬರ್ ೧೯೪೭ ರಂದು ಪಾಕಿಸ್ತಾನವು ಅನಿರೀಕ್ಷಿತವಾಗಿ ಕಾಶ್ಮೀರದ ಮೇಲೆ ದಾಳಿ ನಡೆಸಿದಾಗ ಪಾಕಿಸ್ತಾನಕ್ಕೆ ೫೫ ಕೋಟಿ (ಈಗಿನ ೩೦ ಸಾವಿರ ಕೋಟಿ) ರೂಪಾಯಿಗಳನ್ನು ಕೊಡಬಾರದೆಂಬ ಮಂತ್ರಿಮಂಡಲದ ಪ್ರಸ್ತಾಪಕ್ಕೆ ನನ್ನ ವಿರೋಧವಿದೆ, ಎಂದು ತೋರಿಸಲು ಗಾಂಧಿಯವರು ಪುನಃ ಉಪವಾಸ ಮಾಡಿ ಈ ಮೊತ್ತವನ್ನು ಭಾರತದ ಹಿತದ ವಿರುದ್ಧ ಪಾಕಿಸ್ತಾನಕ್ಕೆ ಕೊಡುವ ಹಾಗೆ ಮಾಡಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಂಡಿತ್ ನಾಥೂರಾಮ ಗೋಡ್ಸೆಯವರು ಗಾಂಧಿಹತ್ಯೆ ಮಾಡಿದ ಬಗ್ಗೆ ನ್ಯಾಯಾಲಯದಲ್ಲಿ ಹೇಳಿದ (೧೫೦ ರಲ್ಲಿ) ಕೆಲವು ಪ್ರಮುಖ ಕಾರಣಗಳು !