ಹಸ್ತರೇಖೆ, ಜನ್ಮಕುಂಡಲಿ ಮತ್ತು ನಾಡಿಭವಿಷ್ಯ

ಪ್ರಶ್ನೆ : ಬಹಳಷ್ಟು ನಾಡಿಶಾಸ್ತ್ರವನ್ನು ಅರಿತಿರುವವರು ಹಸ್ತರೇಖೆಗಳ ಮೂಲಕ ಭವಿಷ್ಯವನ್ನು ಹೇಳುತ್ತಾರೆ. ಈ ಸಂದರ್ಭದಲ್ಲಿ ಮುಂದಿನ ವಿಷಯವನ್ನು ಓದಿ ತಮಗೆ ತಿಳಿದಿರುವ ಮಾಹಿತಿಯನ್ನು ತಿಳಿಸಬೇಕು. ಹಸ್ತರೇಖೆ ಮತ್ತು ಪಾದರೇಖೆ ಹಾಗೂ ಜಾತಕ ಇವರೆಡರ ವ್ಯತ್ಯಾಸವೇನೆಂದರೆ, ಜನನದ ಸಮಯ ತಪ್ಪಾಗಿದ್ದರೆ ಭವಿಷ್ಯವು ತಪ್ಪಾಗುತ್ತದೆ. ಆದರೆ ಹಸ್ತಗಳ ರೇಖೆಗಳು ಪ್ರತ್ಯಕ್ಷ ಕಾಣಿಸುತ್ತವೆ. ಇದರಿಂದ ಹಸ್ತರೇಖೆಯನ್ನು ನೋಡಿ ಹೇಳಿದ ಭವಿಷ್ಯವು ತಪ್ಪಾಗುವ ಸಾಧ್ಯತೆ ಕಡಿಮೆ ಇರುತ್ತದೆಯೇ ? ಆದರೆ ರೇಖೆಗಳು ಬದಲಾಗುತ್ತಿರುವುದರಿಂದ ಮುಂದಿನ ಭವಿಷ್ಯ ಹೇಳಲು ಸಾಧ್ಯವೇ ?
ಉತ್ತರ :
೧. ಹಸ್ತರೇಖೆಗಿಂತ ಜಾತಕ ಅಧಿಕ ಮಹತ್ವದ್ದು !
ರೇಖೆಗಳಂತೆ ಜಾತಕದಲ್ಲಿಯೂ ಬದಲಾವಣೆಗಳಾಗುತ್ತವೆ. ಜನನದ ಸಮಯದ ಮೂಲ ಜಾತಕದಲ್ಲಿ (ಜನ್ಮಲಗ್ನಕುಂಡಲಿಯಲ್ಲಿ) ಬದಲಾವಣೆಯಾಗುವುದಿಲ್ಲ. ಹಸ್ತ ಮತ್ತು ಪಾದಗಳ ರೇಖೆಗಳು ಕೆಲವು ವರ್ಷಗಳ ನಂತರ ಬದಲಾವಣೆಗೊಳ್ಳುವಂತೆಯೇ ಗೋಚರ ಜಾತಕದಲ್ಲಿ (ತಾತ್ಕಾಲಿಕ ಜಾತಕದಲ್ಲಿ) ಬದಲಾವಣೆಗಳಾಗುತ್ತವೆ. ಹಸ್ತ-ಪಾದಗಳ ರೇಖೆಗಳಿಂದ ಪ್ರತ್ಯಕ್ಷ ಘಟನೆ ಘಟಿಸಿದ ಸಮಯವನ್ನು ಹೇಳಲು, ಅದನ್ನು ಹೇಳುವ ವ್ಯಕ್ತಿಯ ಸಾಧನೆ ಮತ್ತು ಹಸ್ತಶಾಸ್ತ್ರದಲ್ಲಿ ಆಳವಾಗಿ ಅಧ್ಯಯನ ಮಾಡಿರ ಬೇಕು. ಹೀಗಿದ್ದರೂ ಘಟಿಸುವ ಘಟನೆಯ ನಿಖರವಾದ ಸಮಯವನ್ನು ಹೇಳುವುದು ಕಷ್ಟವಿರುತ್ತದೆ. ಕೇವಲ ಹಸ್ತಗಳ ರೇಖೆಯನ್ನು ನೋಡಿ ಘಟನೆಯ ಸಮಯ, ದಿನವಲ್ಲ, ಘಟನೆಯ ತಿಂಗಳೂ ಸರಿಯಾಗಿ ಹೇಳಲು ಸಾಧ್ಯವಿಲ್ಲ. ಯಾವ ರೀತಿ ಜಾತಕವು ಘಟನೆಯ ಕಾಲದೊಂದಿಗೆ ನಿರ್ದಿಷ್ಟ ಮಾರ್ಗದರ್ಶನವನ್ನು ನೀಡಬಲ್ಲದೋ, ಅದರಂತೆ ಹಸ್ತ-ಪಾದಗಳ ರೇಖೆಗಳನ್ನು ನೋಡಿ ಮಾರ್ಗದರ್ಶನ ಮಾಡಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯ ಆಯುಷ್ಯವು ೭೫ ವರ್ಷಗಳನ್ನು ತೋರಿಸುವ ಆಯುಷ್ಯ ರೇಖೆಯ ಮೇಲೆ ಒಂದು ಬಿಂದು ಎಷ್ಟೋ ವರ್ಷಗಳ ಘಟನೆಯನ್ನು ಕೊರೆದಿಡುತ್ತದೆ. ಇಂತಹ ಸಮಯದಲ್ಲಿ ಆಯುಷ್ಯದಲ್ಲಿ ಘಟಿಸಲಿರುವ ಯಾವುದಾದರೂ ಘಟನೆಯ ಕಾಲಾವಧಿಯನ್ನು ಹೇಳುವುದು ಕಠಿಣವಾಗಿರುತ್ತದೆ. ಸೂಕ್ಷ ಕಾಲನಿರ್ಣಯಕ್ಕಾಗಿ ಹಸ್ತಸಾಮುದ್ರಿಕ ಶಾಸ್ತ್ರವು ಅಪೂರ್ಣವಾಗುತ್ತದೆ. ಗೋಚರ ಜಾತಕದಿಂದ ಗ್ರಹಗಳ ಸ್ಥಿತಿ-ಗತಿ, ಗ್ರಹಗಳ ವಿವಿಧ ಯೋಗಗಳು, ಗ್ರಹಗಳ ಮಹಾದಶೆ, ಅವುಗಳ ಅಂತರ್ದೆಶೆ, ಅಂತರ್ದೆಶೆಯಲ್ಲಿನ ವಿದಶೆ ಹೀಗೆ ಆಳವಾಗಿ ಗಣಿತದ ಅಭ್ಯಾಸವನ್ನು ಮಾಡುವುದು ಹಸ್ತರೇಖೆಗಳ ತುಲನೆಯಲ್ಲಿ ಸುಲಭವಾಗುತ್ತದೆ. ಇದಕ್ಕೂ ಸಾಧನೆ ಇರಬೇಕು. ಇಲ್ಲದಿದ್ದಲ್ಲಿ ಗಣಿತ ತಪ್ಪಾಗಬಹುದು, ಉದಾ: ಒಬ್ಬ ರೋಗಿಗೆ ಮುಖ್ಯ ರೋಗದೊಂದಿಗೆ ಇತರ ಯಾವ ರೋಗಗಳಾಗುವ ಸಾಧ್ಯತೆ ಯಿದೆ ? ರೋಗಿಯು ವ್ಯಾಧಿಯಿಂದ ಗುಣಮುಖನಾಗುತ್ತಾನೆಯೇ ? ಯಾವಾಗ ಗುಣಮುಖನಾಗುತ್ತಾನೆ ? ಯಾವ ಗ್ರಹಗಳ ತೊಂದರೆಗಳಿಂದ ಅನಾರೋಗ್ಯವಿದೆ ? ಈ ವಿವರಗಳು ವ್ಯಕ್ತಿಯ ಜಾತಕ ಮತ್ತು ಗೋಚರ ಜಾತಕಗಳಿಂದ ತಿಳಿಯುತ್ತದೆ. ಹಸ್ತರೇಖೆಯಿಂದ ಇಂತಹ ಎಲ್ಲ ಪ್ರಶ್ನೆಗಳಿಗೆ ಉತ್ತರಗಳು ದೊರೆಯುವುದು ಕಷ್ಟವೆನ್ನಬಹುದು. ಇದಕ್ಕಾಗಿ ರೇಖೆಗಳಿಗಿಂತ ಜಾತಕ ಮಹತ್ವದ್ದೆನಿಸುತ್ತದೆ. ಮತ್ತೊಂದು ಸುಲಭವಾದ ಉದಾಹರಣೆಯೆಂದರೆ ಮರುದಿನ ಒಂದು ಮಹತ್ವದ ಸಂದರ್ಶನವಿದ್ದು. ಇದರಲ್ಲಿ ನಾನು ಆಯ್ಕೆಯಾಗುವೆನೇ ? ನಾಳೆ ಜರುಗುವ ಮಹತ್ವದ ಕಾರ್ಯ ಸಫಲವಾಗಲಿದೆಯೇ ? ಇಂತಹ ಎಲ್ಲ ಪ್ರಶ್ನೆಗಳಿಗೆ ಹಸ್ತರೇಖೆಗಳಿಂದ ಉತ್ತರ ಕಂಡುಹಿಡಿಯುವುದು ಅಸಾಧ್ಯವೆನ್ನಬಹುದು. ಇದರಿಂದ ಹಸ್ತರೇಖೆಗಳಿಗಿಂತ ಜಾತಕ ಅಧಿಕ ಮಹತ್ವದ್ದಾಗಿದೆ, ಎಂಬುದು ತಿಳಿಯುತ್ತದೆ. - ಸೌ. ಪ್ರಾಜಕ್ತಾ ಜೋಶಿ, ಜ್ಯೋತಿಷ್ಯ ಫಲಿತ ವಿಶಾರದರು, ಸನಾತನ ಆಶ್ರಮ, ರಾಮನಾಥಿ, ಗೋವಾ (೨೩.೫.೨೦೧೬)
೨. ಹಸ್ತಗಳ ಹೆಬ್ಬೆರಳಿನ ರೇಖೆಗಳು ಸಾಮಾನ್ಯವಾಗಿ ಬದಲಾವಣೆಯಾಗದಿರುವುದರಿಂದ
ಮಹರ್ಷಿಗಳು ನಾಡಿಭವಿಷ್ಯವನ್ನು ಬರೆದಿರುತ್ತಾರೆ, ನಾಡಿಭವಿಷ್ಯದಲ್ಲಿ ವ್ಯಕ್ತಿಯ ಸ್ಥಳ, ಕಾಲ,
ಜಾತಕ ಇತ್ಯಾದಿ ವರ್ತಮಾನದ ಮಾಹಿತಿ ಹೊಂದಾಣಿಕೆಯಾಗಿ, ಅವನ ಮುಂದಿನ ಭವಿಷ್ಯವನ್ನು
ಹೇಳುತ್ತಾರೆ, ಆದರೆ ಅದನ್ನು ಹೇಳಲುಸಹ ನಾಡಿವಾಚಕರು ಅಷ್ಟೇ ಸಾಧನೆಯನ್ನು ಮಾಡಿರಬೇಕಾಗಿರುತ್ತದೆ
೨ ಅ. ಹಸ್ತದ ಹೆಬ್ಬೆರಳಿನ ರೇಖೆಗಳು ಸಾಮಾನ್ಯವಾಗಿ ಬದಲಾಗು ವುದಿಲ್ಲ; ಆದ್ದರಿಂದ ಬಹಳಷ್ಟು ನಾಡಿಶಾಸ್ತ್ರಕಾರರು ಭವಿಷ್ಯವನ್ನು ಹೇಳಲು ಸಂಪೂರ್ಣ ಹಸ್ತರೇಖೆಗಳಿಗಿಂತ ಹೆಬ್ಬೆರಳಿನ ರೇಖೆಗಳಿಗೆ ಅಧಿಕ ಮಹತ್ವ ನೀಡುವುದು : ಬಹಳಷ್ಟು ನಾಡಿಶಾಸ್ತ್ರಜ್ಞರು ಭವಿಷ್ಯ ಹೇಳಲು ಸಂಪೂರ್ಣ ಹಸ್ತದ ರೇಖೆಗಳಿಗಿಂತ ಹೆಬ್ಬೆರಳಿನ ರೇಖೆಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಏಕೆಂದರೆ ೧೬ ನೇ ವಯಸ್ಸಿನ ಬಳಿಕ ಹಸ್ತರೇಖೆಗಳು ಬದಲಾವಣೆಯಾಗುತ್ತದೆ, ಆದರೆ, ಹೆಬ್ಬೆರಳಿನ ರೇಖೆಗಳು ಬದಲಾವಣೆಯಾಗುವುದಿಲ್ಲ; ಆದ್ದರಿಂದ ಪೊಲೀಸ್ ಇಲಾಖೆಯಲ್ಲಿ ಅಥವಾ ಇನ್ನಿತರ ಕಚೇರಿಗಳಲ್ಲಿ ಹೆಬ್ಬೆರಳಿನ ಮುದ್ರೆಯನ್ನು ಪಡೆಯುವ ರೂಢಿಯಿದೆ.
೨ ಆ. ಕಣ್ಣುಗಳ ಆಕಾರದಲ್ಲಿಯೂ ಒಂದೊಂದು ವರ್ಷದಲ್ಲಿ ಬದಲಾವಣೆಯಾಗುತ್ತಿರುವುದು: ಕಣ್ಣುಗಳ ಆಕಾರವೂ ಒಂದೊಂದು ವರ್ಷಕ್ಕೆ ಬದಲಾಗುತ್ತಿರುತ್ತದೆ. ೨೧ ವರ್ಷ ವಯಸ್ಸಾದ ಬಳಿಕ ಕಣ್ಣುಗಳ ನಂಬರ್ ಸ್ಥಿರವಾಗುತ್ತದೆ. ಆದ್ದರಿಂದಲೇ ಕಣ್ಣುಗಳಲ್ಲಿ ಲೆನ್ಸ್ ಜೋಡಣೆ ಮಾಡುವಾಗ ವೈದ್ಯರು ೨೧ ನೇ ವಯಸ್ಸಿನ ಬಳಿಕ ಈ ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ.
೨ ಇ. ನಾಡಿಶಾಸ್ತ್ರದಲ್ಲಿ ಹೆಬ್ಬೆರಳಿನ ರೇಖೆಗಳ ಪ್ರಕಾರಗಳಲ್ಲಿ ಮುಖ್ಯ ವಾಗಿ ೧೨ ಭಾಗಗಳಿರುವುದು ಮತ್ತು ಅದರಲ್ಲಿಯೂ ಒಟ್ಟು ೧೦೮ ಉಪ ಭಾಗಗಳನ್ನು ಮಾಡಿರುವುದು : ನಾಡಿಶಾಸ್ತ್ರದಲ್ಲಿ ಹೆಬ್ಬೆರಳಿನ ರೇಖೆಗಳನ್ನು ಒಟ್ಟು ೧೨ ಮುಖ್ಯ ಭಾಗಗಳನ್ನು ಮಾಡಿದ್ದಾರೆ. ಅದರಲ್ಲಿ ಒಟ್ಟು ೧೦೮ ಉಪಭಾಗಗಳಿವೆ. ಅದರಲ್ಲಿಯ ಒಂದು ಪ್ರಕಾರವೆಂದರೆ ಕಮಲರೇಖೆ. ಇದರಲ್ಲಿ ಹೆಬ್ಬೆರಳಿನ ವಿಧವನ್ನು ತೋರಿಸುವಾಗ ತಮಿಳು ಶಬ್ದದ ಉಪಯೋಗವನ್ನು ಮಾಡಲಾಗಿದೆ.
೨ ಈ. ದೈವೀ ವ್ಯಕ್ತಿಯ ಹಸ್ತದಲ್ಲಿ ಕಮಲರೇಖೆಯಿರುವುದು : ಕಮಲ ರೇಖೆಯು ಸಾಮಾನ್ಯ ವ್ಯಕ್ತಿಯಲ್ಲಿ ಇರುವುದಿಲ್ಲ. ಯಾವ ವ್ಯಕ್ತಿಯಿಂದ ಇತರರ ಕಲ್ಯಾಣವಾಗಲಿದೆಯೋ, ಅಂತಹ ವ್ಯಕ್ತಿಯ ಹಸ್ತದ ಹೆಬ್ಬೆರಳಿನಲ್ಲಿ ಕಮಲರೇಖೆಯಿರುತ್ತದೆ. ದೇವರು ಸ್ವತಃ ಬರದೇ ಇಂತಹ ವ್ಯಕ್ತಿಗಳನ್ನು ಭೂಮಿಗೆ ಕಳುಹಿಸುತ್ತಾನೆ. ಅವರ ಹಸ್ತಗಳಲ್ಲಿ ಇಂತಹ ರೇಖೆಗಳಿರುತ್ತವೆ.
೨ ಉ. ನಾಡಿಶಾಸ್ತ್ರದ ಮಹತ್ವ
೨ ಉ ೧. ನಾಡಿಶಾಸ್ತ್ರದಲ್ಲಿ ನೀವು ಯಾವ ಸಮಯದಲ್ಲಿ ನಾಡಿವಾಚಕರಲ್ಲಿ ಹೋಗಿರುವಿರೋ, ಆ ದಿನ, ಆ ಸ್ಥಳ ಮತ್ತು ಸಮಯವನ್ನು ಹೇಳಿ, ಅಂದರೆ ವರ್ತಮಾನದ ಸ್ಥಳ ಮತ್ತು ಕಾಲವನ್ನು ಸಂಯೋಜಿಸಿ, ಅಲ್ಲದೇ ಜಾತಕವನ್ನು ಹೇಳಿ ಭವಿಷ್ಯವನ್ನು ಹೇಳಲಾಗುವುದು : ನಾಡಿಶಾಸ್ತ್ರದಲ್ಲಿ ಕೇವಲ ಹಸ್ತರೇಖೆಯಷ್ಟೇ ಅಲ್ಲ, ನಿಮ್ಮ ಜಾತಕವನ್ನೂ ಅದರೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಹಾಗೆಯೇ ನಿಮ್ಮ ಇತರ ಎಲ್ಲ ಕೌಟುಂಬಿಕ ಮಾಹಿತಿಯನ್ನು ಸಹ ಇದರೊಂದಿಗೆ ಹೋಲಿಕೆ ಮಾಡಿ ನೀವೇ ಅವರಾಗಿದ್ದೀರಿ ಎಂದು ದೃಢಪಡಿಸಲಾಗುತ್ತದೆ. ಅಷ್ಟೇ ಅಲ್ಲ, ನಿಮ್ಮ ಹಸ್ತರೇಖೆ ಹಾಗೂ ನೀವು ನಾಡಿವಾಚಕರಲ್ಲಿ ಬಂದಂತಹ ಸಮಯ ಇವುಗಳನ್ನು ಸಹ ಯೋಗ್ಯ ಲೆಕ್ಕಾಚಾರ ಹಾಕುತ್ತಾರೆ. ನಾಡಿಶಾಸ್ತ್ರದಲ್ಲಿ ಸಿದ್ಧ ಮಹರ್ಷಿಗಳು ಸ್ಥಳದೊಂದಿಗೆ ಕಾಲಕ್ಕೂ ಅಷ್ಟೇ ಮಹತ್ವವನ್ನು ನೀಡಿದ್ದಾರೆ. ಕೆಲವು ತಿಂಗಳುಗಳ ಬಳಿಕ ಮರಳಿ ನಾಡಿವಾಚಕರಲ್ಲಿ ಬಂದರೆ ನಿಮ್ಮ ವರ್ತಮಾನದ ಭವಿಷ್ಯವನ್ನೂ ಮಹರ್ಷಿಗಳೂ ಅದರಲ್ಲಿ ಬರೆದಿಟ್ಟಿರುತ್ತಾರೆ. ಅಂದರೆ ನಿಮ್ಮ ಹೆಬ್ಬೆರಳಿನ ರೇಖೆಗಳಲ್ಲಿ ಏನಾದರೂ ಸೂಕ್ಷ ಬದಲಾವಣೆಗಳಾಗಿದ್ದಲ್ಲಿ, ಮಹರ್ಷಿಗಳು ಆ ಬದಲಾವಣೆಗನುಗುಣವಾಗಿ ನಿಮ್ಮ ಭವಿಷ್ಯದಲ್ಲಿಯೂ ಕಾಲಗತಿಯನ್ನು ಅರಿತುಕೊಂಡು ನಿಮಗೆ ಮಾರ್ಗದರ್ಶನವನ್ನು ಮಾಡುತ್ತಾರೆ. ನಾಡಿಶಾಸ್ತ್ರದಲ್ಲಿ ಜಾತಕ, ಹಸ್ತರೇಖೆ, ಸ್ಥಳ, ಕಾಲ, ರಾಶಿ, ನಕ್ಷತ್ರ ಇವುಗಳ ಮಾಹಿತಿಗಳೊಂದಿಗೆ ನೀವು ನಾಡಿಶಾಸ್ತ್ರವನ್ನು ಹೇಳುವವರ ಕಡೆಗೆ ಯಾವಾಗ ಬರುತ್ತೀರಿ ? ನಿಮ್ಮೊಂದಿಗೆ ಎಷ್ಟು ಜನರಿರುತ್ತಾರೆ ? ಇವುಗಳ ಉಲ್ಲೆೀಖವೂ ಇರುತ್ತದೆ.
೨ ಉ ೨. ಕೆಲವೊಮ್ಮೆ ಮಹರ್ಷಿಗಳು ನಿಮ್ಮ ಜನನದ ಸಮಯ ತಪ್ಪಿದ್ದಲ್ಲಿ ಸರಿಯಾದ ಸಮಯವನ್ನು ಸಹ ತಿಳಿಸುತ್ತಾರೆ :  ಕೆಲವೊಮ್ಮೆ ಮಹರ್ಷಿಗಳು ನಿಮ್ಮ ಜನನದ ಸಮಯ ತಪ್ಪಾಗಿದ್ದರೆ, ನಿಮ್ಮ ಯೋಗ್ಯ ಜನನ ಸಮಯ ಯಾವುದು ?, ಎಂಬುದನ್ನು ತಿಳಿಸಿ, ಅದಕ್ಕನುಸಾರ ಭವಿಷ್ಯವನ್ನು ತಿಳಿಸುತ್ತಾರೆ. ಆದರೆ ಇದೆಲ್ಲವನ್ನು ಅರಿಯಲು ಮಹರ್ಷಿಗಳಷ್ಟೇ ಸಿದ್ಧರಾಗಿರಬೇಕಾಗಿರುತ್ತದೆ. ಇಲ್ಲದಿದ್ದಲ್ಲಿ ಭವಿಷ್ಯ ಹೇಳುವವರ ಭವಿಷ್ಯ ತಪ್ಪಾಗಬಹುದು.
ಊ. ತಾತ್ಪರ್ಯ : ನಾಡಿಶಾಸ್ತ್ರದಲ್ಲಿ ಹೇಳಿದ ಸಾಂಕೇತಿಕ ಶಬ್ದ ಅಥವಾ ಮಹರ್ಷಿಗಳು ಯಾವುದಾದರೂ ವಾಕ್ಯದಿಂದ ಆ ವ್ಯಕ್ತಿಗೆ ಏನು ಹೇಳಲು ಇಚ್ಛಿಸುತ್ತಾರೆ ಎನ್ನುವುದನ್ನು ಅರಿಯಲು ನಾಡಿವಾಚಕರ ಸಾಧನೆಯೂ ಅಷ್ಟೇ ಇರಬೇಕು ! :
ನಾಡಿಶಾಸ್ತ್ರದಲ್ಲಿ ಹೇಳಿದ ಸಾಂಕೇತಿಕ ಶಬ್ದಗಳು ಅಥವಾ ಮಹರ್ಷಿಗಳು ಯಾವುದಾದರೂ ವಾಕ್ಯದಿಂದ ಆ ವ್ಯಕ್ತಿಗೆ ಏನು ಹೇಳಲು ಇಚ್ಛಿಸುತ್ತಾರೆ ಎನ್ನುವುದನ್ನು ಅರಿಯಲು ನಾಡಿವಾಚಕನ ಸಾಧನೆಯೂ ಅಷ್ಟೇ ಆಳವಾಗಿರಬೇಕಾಗುತ್ತದೆ. ಕೇವಲ ಹಣಕ್ಕಾಗಿ ಭವಿಷ್ಯ ಹೇಳುವವರು ವ್ಯಕ್ತಿಯ ಭವಿಷ್ಯವನ್ನು ಸರಿಯಾಗಿ ಗುರುತಿಸಲು ಆಗುವುದಿಲ್ಲ. ನಾಡಿವಾಚನ ಮಾಡುವುದು ಒಂದು ಸಾಧನೆಯಾಗಿದೆ. ಮಹರ್ಷಿಗಳು  ನಿರ್ದಿಷ್ಟ ಉಪಾಸನೆಯ ಬಳಿಕ ನಿಮಗೆ ನಾಡಿವಾಚನ ಮಾಡಲು ಅನುಮತಿ ನೀಡುತ್ತಾರೆ. ಅದನ್ನು ಪಾಲಿಸುವುದು ಆವಶ್ಯಕವಿದೆ. ಇಲ್ಲದಿದ್ದಲ್ಲಿ ಯೋಗ್ಯ ರೀತಿಯಲ್ಲಿ ನಾಡಿವಾಚನವಾಗುವುದಿಲ್ಲ. ನಿರ್ದಿಷ್ಟ ಸಂಖ್ಯೆಯ ಜಪ ಮಾಡುವುದು, ಮನೆಯ ಕುಲಾಚರಣೆಯನ್ನು ಪಾಲಿಸುವುದು, ನಿತ್ಯವೂ ದೇವದರ್ಶನಕ್ಕೆ ಹೋಗುವುದು, ಹೀಗೆ ಕೆಲವು ನಿಯಮಗಳನ್ನು ಪರಂಪರೆಯಿಂದ ನಾಡಿವಾಚನ ಮಾಡುವ ಮನೆತನದಲ್ಲಿ ನಡೆದುಕೊಂಡು ಬಂದ ಪದ್ಧತಿಯಾಗಿರುತ್ತದೆ. ಅದನ್ನು ಪಾಲಿಸುವುದೂ ಆವಶ್ಯಕವಿರುತ್ತದೆ. ಇಲ್ಲದಿದ್ದಲ್ಲಿ ವ್ಯಕ್ತಿಗೆ ಯೋಗ್ಯ ಮಾರ್ಗದರ್ಶನ ಮಾಡಲು ನಾಡಿವಾಚಕರಿಗೆ ಕಠಿಣವಾಗುತ್ತದೆ.
- (ಸದ್ಗುರು) ಸೌ. ಅಂಜಲಿ ಗಾಡಗೀಳ, ತಂಜಾವೂರು, ತಮಿಳುನಾಡು (೨೪.೬.೨೦೧೬, ಬೆಳಗ್ಗೆ ೮.೪೫)


No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಸ್ತರೇಖೆ, ಜನ್ಮಕುಂಡಲಿ ಮತ್ತು ನಾಡಿಭವಿಷ್ಯ