ಕಾಳಿಮಾತೆಗೆ ಮಾಂಸದ ನೈವೇದ್ಯವನ್ನು ತೋರಿಸುತ್ತಾರೆಂದು ಹಿಂದೂಗಳು ಮಾಂಸಭಕ್ಷಣ ಮಾಡಲು ಅನುಮತಿ ನೀಡಲಾಗಿದೆ ಎಂದು ತಿಳಿಯುವುದು ಅಯೋಗ್ಯ !

ಅಯೋಗ್ಯ ವಿಚಾರ : ಕಾಳಿಮಾತೆಗೆ ಮಾಂಸದ ನೈವೇದ್ಯವನ್ನು ತೋರಿಸುತ್ತಾರೆ, ಆದುದರಿಂದ ಹಿಂದೂ ಧರ್ಮದಲ್ಲಿ ಮಾಂಸ ಸೇವನೆಗೆ ಅನುಮತಿ ಇದೆ.
ಖಂಡನೆ :
. ಹಿಂದೂ ಧರ್ಮಶಾಸ್ತ್ರದಲ್ಲಿ 
ಕರ್ಮಕಾಂಡಕ್ಕನುಸಾರ ಬಲಿ ಕೊಡುವ ಹಿಂದೆ ಶಾಸ್ತ್ರವಿದೆ
ಕಾಳಿಮಾತೆಯು ಅಸುರರ ರುಂಡಗಳನ್ನು ಕತ್ತರಿಸಿ ವಧಿಸಿದಳೆಂದು ಬಲಿ ಕೊಡುವ ಅಥವಾ ಮಾಂಸದ ನೈವೇದ್ಯವನ್ನು ತೋರಿಸುವ ರೂಢಿ ಆರಂಭವಾಯಿತು. ಮಾಂಸದ ನೈವೇದ್ಯದಲ್ಲಿ ಬಲಿಕೊಟ್ಟ ಪ್ರಾಣಿಯ ಮಾಂಸ ಇರುತ್ತದೆ.
ಬಲಿ ಕೊಡುವ ವಿಷಯದಲ್ಲಿಯೂ ಶಾಸ್ತ್ರವಿದೆ, ಅದಕ್ಕೆ ಕೆಲವು ನಿಯಮಗಳಿವೆ. ಉದಾಹರಣೆಗೆ ಬಲಿಕೊಡುವ ಪಶುವನ್ನು ಪೂರ್ವಾಭಿಮುಖವಾಗಿ ಇಡಬೇಕು, ಖಡ್ಗವನ್ನು ಎತ್ತಿ ಬಲಿಕೊಡುವ ಪುರುಷನು ಉತ್ತರಾಭಿಮುಖವಾಗಿ ಇರಬೇಕು. ತಾಂತ್ರಿಕ ಕರ್ಮ ದಲ್ಲಿ ಬಲಿ ಕೊಡುವ ಪಶುವಿನ ಉದಾ. ಆಡಿನ ಪೂಜೆ ಮಾಡಲಾಗುತ್ತದೆ. ಆ ಆಡಿಗೆ ಪ್ರಾರ್ಥನೆ ಮಾಡಿ ಅದರ ಕಿವಿಯಲ್ಲಿಯೂ ಮಂತ್ರ ಹೇಳುತ್ತಾರೆ. ಈ ಮಂತ್ರದಿಂದ ಬಲಿಯಾಗುವ ಪ್ರಾಣಿಗೂ ಗತಿ ಸಿಗುತ್ತದೆ ಮತ್ತು ಯಾವ ಕಾರಣದಿಂದಾಗಿ ಬಲಿ ಕೊಡಲಾಗುತ್ತದೆ, ಅದರ ಉದ್ದೇಶವೂ ಸಫಲವಾಗುತ್ತದೆ, ಎಂದು ಶಾಸ್ತ್ರ ಹೇಳುತ್ತದೆ. ಕಾಳಿಕಾ ಪುರಾಣದಲ್ಲಿ ದೇವಿಗೆ ಕೊಡಬೇಕಾದ ಬಲಿಯ ವಿಷಯದಲ್ಲಿ ವಿವರವಾಗಿ ವರ್ಣಿಸಲಾಗಿದೆ.
. ಕಾಳಿ ಮಾತೆಯು ಲಯಕ್ಕೆ ಸಂಬಂಧಿಸಿದ
 ದೇವತೆಯಾಗಿರುವುದರಿಂದ ಆ ದೇವತೆಗೆ ಮಾಂಸದ ನೈವೇದ್ಯ ತೋರಿಸುವುದು
ಸತ್ತ್ವ, ರಜ ಮತ್ತು ತಮ ಈ ೩ ಗುಣಗಳಿಗನುಸಾರ ಉಪಾಸನೆಯಲ್ಲಿ ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ ಹೀಗೆ ೩ ವಿಧಗಳಿರುತ್ತವೆ. ವಿಶಿಷ್ಟ ದೇವತೆಗಳು ವಿಶಿಷ್ಟ ಗುಣಗಳಿಗೆ ಸಂಬಂಧಪಟ್ಟಿರುತ್ತವೆ. ಆದುದರಿಂದ ಅವುಗಳಿಗೆ ಅವರವರ ಗುಣ ವೈಶಿಷ್ಯಗಳಿರುವ ನೈವೇದ್ಯವನ್ನು ತೋರಿಸಲಾಗುತ್ತದೆ.
ಕಾಳಿಮಾತೆಯು ವಿನಾಶಕ್ಕೆ ಸಂಬಂಧಪಟ್ಟ ದೇವತೆಯಾಗಿರುವುದರಿಂದ ಅವಳಿಗೆ ಮಾಂಸದ ನೈವೇದ್ಯವನ್ನು ತೋರಿಸಲಾಗುತ್ತದೆ. ವಿಠ್ಠಲ ಈ ದೇವತೆ ಸತ್ತ್ವಪ್ರಧಾನ ದೇವತೆಯಾಗಿರುವುದರಿಂದ ವಿಠ್ಠಲನಿಗೆ ಮಾಂಸದ ನೈವೇದ್ಯವನ್ನು ತೋರಿಸುವುದಿಲ್ಲ. ವಿಠ್ಠಲನ ಆರಾಧನೆಯು ಸ್ಥಿತಿಗೆ ಸಂಬಂಧಪಟ್ಟಿರುತ್ತದೆ ಮತ್ತು ಕಾಳಿಮಾತೆಯ ಆರಾಧನೆಯು ಲಯಕ್ಕೆ ಸಂಬಂಧಪಟ್ಟಿರುತ್ತದೆ.
. ದೇವತೆಗಳ ಮಾನವೀಕರಣಗೊಳಿಸುವುದು ಅಥವಾ
 ದೇವತೆಗಳನ್ನು ಮಾನವರೊಂದಿಗೆ ಹೋಲಿಸುವುದು ಅಯೋಗ್ಯವಾಗಿರುವುದು 
ಮುಖ್ಯವಾಗಿ ಮಾಂಸಭಕ್ಷಣೆ ಯಂತಹ ಮಾನವನಿಗೆ ಸಂಬಂಧಪಟ್ಟ ವಿಷಯದಲ್ಲಿ ದೇವತೆಯನ್ನು ತರು ವುದು ಅಯೋಗ್ಯವಿದೆ; ಏಕೆಂದರೆ ಇದು ದೇವತೆಗಳ ಮಾನವೀಕರಣ ಮಾಡಿದಂತಾಗುತ್ತದೆ. ಯಾರಿಗೆ ‘ದೇವತೆ ಎಂದರೇನು ?’ ಎಂಬುದೇ ಗೊತ್ತಿಲ್ಲವೋ, ಅಂತಹವರಿಗೆ ಇಂತಹ ಪ್ರಶ್ನೆಗಳು ಬರುತ್ತವೆ. ಇದರಿಂದಾಗಿ ಹಿಂದೂಗಳಿಗೆ ಧರ್ಮಶಿಕ್ಷಣದ ಆವಶ್ಯಕತೆ ಎಷ್ಟಿದೆ ಎಂಬುದು ಸ್ಪಷ್ಟವಾಗುತ್ತದೆ.
೩ ಅ. ತ್ರಿಗುಣಾತೀತ ದೇವತೆಗಳಿಗೆ ಅವರು ಮಾಡಿದ ತಮೋಗುಣ ಅಥವಾ ಸತ್ತ್ವಗುಣಗಳುಳ್ಳ ಕೃತಿಯಿಂದ ಪರಿಣಾಮವಾಗದಿರುವುದು : ದೇವತೆ ಗಳು ತ್ರಿಗುಣಾತೀತರಾಗಿರುತ್ತಾರೆ ಎಂದರೆ ಸತ್ತ್ವ, ರಜ ಮತ್ತು ತಮ ಗುಣಗಳ ಆಚೆಗೆ ಇರುತ್ತಾರೆ. ಅವರು ವ್ಯಕ್ತಪಡಿಸಿದ ಸತ್ತ್ವಗುಣಿ ಅಥವಾ ತಮೋಗುಣಿ ಕೃತಿಗಳಿಂದ ದೇವತೆಗಳ ಮೇಲೆ ಪರಿಣಾಮ ವಾಗುವುದಿಲ್ಲ. ಆದರೆ ಮಾನವನು ಅದನ್ನು ಅನುಸರಿಸಿದರೆ ಅದರಿಂದ ಮಾನವನ ಮೇಲೆ ಪರಿಣಾಮವಾಗುತ್ತದೆ. ಇದನ್ನು ತಿಳಿದುಕೊಳ್ಳಲು ಒಂದು ಉದಾಹರಣೆ ನೋಡೋಣ. ಸೀತೆಯನ್ನು ರಾವಣನು ಅಪಹರಿಸಿಕೊಂಡು ಹೋದನಂತರ ರಾಮ ನಿಗೆ ತುಂಬಾ ದುಃಖವಾಯಿತು. ರಾಮನು ಸೀತೆ, ಸೀತೆ ಹೇಳುತ್ತ ಗಿಡಮರ ಬಳ್ಳಿಗಳಿಗೆ ಪ್ರಶ್ನೆ ಮಾಡುತ್ತಿದ್ದನು. ಅವುಗಳನ್ನು ತಬ್ಬಿಕೊಳ್ಳುತ್ತಿದ್ದನು. ಆಗ ಕೈಲಾಸ ಪರ್ವತದಿಂದ ಅದನ್ನು ನೋಡುತ್ತಿದ್ದ ಪಾರ್ವತಿಯು ಸೀತೆಯ ರೂಪವನ್ನು ತಾಳಿ ಅವಳು ರಾಮನ ಎದುರಿಗೆ ಬಂದಳು. ಆಗ ರಾಮನು ಅವಳಿಗೆ ಮಾತೆ, ಎಂದು ಕರೆದು ನಮಸ್ಕಾರ ಮಾಡಿದನು. ಎಂದರೆ ರಾಮನು ಎಲ್ಲರಿಗೂ ಆದರ್ಶ ಪತಿ ಹೇಗಿರಬೇಕು, ಎನ್ನುವುದನ್ನು ತೋರಿಸಲು ದುಃಖಪಡುವಂತಹ ಕೃತಿ ಮಾಡಿದನು. ವಾಸ್ತವದಲ್ಲಿ ರಾಮನು ತ್ರಿಗುಣಾತೀತನಾಗಿದ್ದರಿಂದ ಅವನಿಗೆ ದುಃಖ ಅಥವಾ ಸುಖಗಳಾವುವೂ ಇರಲಿಲ್ಲ. ಹಾಗೆಯೇ ದೇವಿಯು ಮಾಂಸ ಭಕ್ಷಣೆ ಮಾಡಿದ್ದರಿಂದ ಅಥವಾ ರಕ್ತಸೇವನೆಯಿಂದ ಅವಳ ತ್ರಿಗುಣಾತೀತದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.
೩ ಆ. ದೇವತೆಗಳ ಕೃತಿಯು ಸೂಕಸ್ತರದ್ದಾಗಿರುವು ದರಿಂದ ಅವರ ಉದ್ದೇಶವು ಸಮಷ್ಟಿಯ ಸಲುವಾಗಿ ಕಲ್ಯಾಣಕಾರಿಯಾಗಿರುವುದು ಹಾಗೂ ಮಾನವನ ಉದ್ದೇಶವು ವೈಯಕ್ತಿಕವಾಗಿರುವುದು : ದೇವಿಯು ರಾಕ್ಷಸನನ್ನು ನಾಶಗೊಳಿಸುವುದು ಅಥವಾ ಅವನ ಮಾಂಸ ಭಕ್ಷಣೆ ಮಾಡುವುದು, ಇವೆಲ್ಲವೂ ಸೂಕ ವಿಷಯಗಳಾಗಿರುತ್ತವೆ, ಅದೇ ರೀತಿ ದೇವತೆಗಳ ಇಂತಹ ಕೃತಿಗಳ ಹಿಂದಿರುವ ಉದ್ದೇಶವು ಸಮಷ್ಟಿಯ ಸಲುವಾಗಿ ಕಲ್ಯಾಣಕಾರಿಯಾಗಿರುತ್ತದೆ. ಇದಕ್ಕಾಗಿ ರಕ್ತಬೀಜಾಸುರನ ಉದಾಹರಣೆಯನ್ನು ಗಮನ ದಲ್ಲಿಡಬೇಕು. ಅವನಿಗೆ ಶಿವನು ಅವನ ರಕ್ತದಿಂದ ಒಂದು ರಕ್ತಬೀಜವು ಸಿದ್ಧವಾಗುವುದು, ಎಂಬ ವರ ನೀಡಿದ್ದನು. ಆದುದರಿಂದ ಮಾತೆ ಭಗವತಿಯು ಅವನ ರಕ್ತವು ಭೂಮಿಯ ಮೇಲೆ ಚೆಲ್ಲದಂತೆ ಅದನ್ನು ಕುಡಿದು ಎಲ್ಲ ರಕ್ತಬೀಜಗಳನ್ನು ನಾಶಗೊಳಿಸಿದಳು, ಅಂದರೆ ದೇವಿಯು ರಕ್ತ ಕುಡಿಯುವುದು ಸಮಷ್ಟಿಯ ಕಲ್ಯಾಣಕ್ಕಾಗಿ ಅಸುರರನ್ನು ನಾಶಗೊಳಿಸುವ ಸಲುವಾಗಿ ಇತ್ತು. ಆದರೆ ಮಾನವನು ಮಾಂಸಭಕ್ಷಣೆ ಮಾಡುವ ಉದ್ದೇಶವು ನಾಲಿಗೆಯ ರುಚಿ ತೀರಿಸಿ ಹೊಟ್ಟೆ ತುಂಬಿಸಲು ಇರುತ್ತದೆ. ಆದುದರಿಂದ ದೇವಿಯ ಕೃತಿ ಮಾನವನಿಗೆ ಅನ್ವಯಿಸುವುದಿಲ್ಲ.
೩ ಇ. ದೇವಿಯ ಕೃತಿಯ ಭಾವಾರ್ಥವನ್ನು ತಿಳಿದುಕೊಳ್ಳುವುದು ಆವಶ್ಯಕವಿರುವುದು : ದೇವತೆಗಳ ಕೃತಿಗಳ ಶಬ್ದಾರ್ಥವನ್ನು ತೆಗೆದುಕೊಳ್ಳುವುದಕ್ಕಿಂತ ಭಾವಾರ್ಥವನ್ನು ತೆಗೆದುಕೊಳ್ಳಬೇಕು. ಸಾಧಕರು ತಮ್ಮೊಳಗಿನ ತಮೋಗುಣವನ್ನು ನಾಶಗೊಳಿಸಬೇಕು ಎಂಬುದೇ ದೇವಿಯ ಕೃತಿಯ ಭಾವಾರ್ಥವಾಗಿದೆ.
. ಮಾಂಸಾಹಾರದಿಂದಾಗುವ ದುಷ್ಪರಿಣಾಮಗಳು
ಮಾಂಸಾಹಾರದ ದುಷ್ಪರಿಣಾಮಗಳು ಮುಂದಿ ನಂತಿವೆ.
೪ ಅ. ಮಾಂಸಾಹಾರವು ಅಸ್ವಾಭಾವಿಕ ಆಹಾರ ವಾಗಿರುವುದರಿಂದ, ಇದರ ಸೇವನೆಯಿಂದ ಪಚನ ಶಕ್ತಿಯು ಕಡಿಮೆಯಾಗುತ್ತದೆ.
೪ ಆ. ರಕ್ತಾಭಿಸರಣೆ ಮತ್ತು ಉಸಿರಾಟಗಳಿಗೆ ತೊಂದರೆಯುಂಟಾಗುತ್ತದೆ. ಮಾಂಸಾಹಾರಿ ಜನರಿಗೆ ಹೃದ್ರೋಗ, ಎದೆ ಮತ್ತು ಹೊಟ್ಟೆಯ ಅರ್ಬುದರೋಗ ಅಥವಾ ಇನ್ನೂ ಬೇರೆ ರೋಗಗಳು ಸಂಭವಿಸುತ್ತವೆ.
೪ ಇ. ಮಾಂಸಾಹಾರದಲ್ಲಿನ ಪ್ರೊಟೀನ್‌ಗಳ ಅಧಿಕ ಪ್ರಮಾಣದಿಂದಾಗಿ ರೋಗಗಳಾಗುತ್ತವೆ.
೪ ಈ. ಮಾಂಸಾಹಾರದಿಂದ ತಮೋಗುಣದ ವೃದ್ಧಿಯಾಗುತ್ತದೆ. ಮನುಷ್ಯನು ತಾಮಸಿಕ ಮತ್ತು ರಾಕ್ಷಸಿ ವೃತ್ತಿಯವನಾಗುತ್ತಾನೆ. ಮಾಂಸಾಹಾರವು ಅಸುರರ ಆಹಾರವಾಗಿದೆ.
೪ ಉ. ಈ ಆಹಾರದಿಂದ ಮನುಷ್ಯನು ಈಶ್ವರ ನಿಂದ ದೂರ ಹೋಗುತ್ತಾನೆ. ವ್ಯಕ್ತಿಯು ಸಾಧನೆಯತ್ತ ಮನಸ್ಸು ಮಾಡುವುದಿಲ್ಲ, ಮನಸ್ಸು ಮಾಡಿದರೂ ಸಾಧನೆಯಲ್ಲಿ ಸ್ಥಿರತೆ ಉಳಿಯುವುದಿಲ್ಲ.
೪ ಊ. ಮಾಂಸಾಹಾರದಿಂದ ಕಾಮವಾಸನೆಯ ವಿಕಾರಗಳು ತೀವ್ರಗೊಳ್ಳುತ್ತವೆ.
೪ ಎ. ಅನಿಷ್ಟ ಶಕ್ತಿಗಳಿಗೆ, ನಕಾರಾತ್ಮಕ ಶಕ್ತಿಗಳಿಗೆ ಶರೀರದೊಳಗೆ ಪ್ರವೇಶಿಸಲು ಸುಲಭವಾಗುತ್ತದೆ.
(ಹೆಚ್ಚಿನ ಮಾಹಿತಿಗಾಗಿ ಸನಾತನದ ಗ್ರಂಥ ‘ಅಸಾತ್ತ್ವಿಕ ಆಹಾರದ ದುಷ್ಪರಿಣಾಮ’ ಈ ಗ್ರಂಥವನ್ನು ಓದಿರಿ.)
. ಮಾಂಸಾಹಾರವು ಸಮಾಜದ ಆರೋಗ್ಯಕ್ಕೆ ಹಾನಿಕರವಾಗಿರುವುದು
ಮಾಂಸಾಹಾರದಿಂದಾಗಿ ವ್ಯಕ್ತಿಯಲ್ಲಿ ತಮೋಗುಣ ಅರ್ಥಾತ್ ರಾಕ್ಷಸಿ ಪ್ರವೃತ್ತಿಯು ಹೆಚ್ಚಾಗುತ್ತದೆ. ಆದುದರಿಂದ ಸಮಾಜದಲ್ಲಿ ತಪ್ಪು ಪ್ರವೃತ್ತಿಗಳು ಹೆಚ್ಚು ತ್ತವೆ. ಅಂದರೆ ಮಾಂಸಾಹಾರವು ಸಮಾಜಕ್ಕಾಗಿಯೂ ಹಾನಿಕಾರಿಯಾಗಿರುತ್ತದೆ. ಆದುದರಿಂದ ಸಮಾಜದ ಆರೋಗ್ಯದ ದೃಷ್ಟಿಯಿಂದಲೂ ಅದನ್ನು ವರ್ಜಿಸು ವುದೇ ಹಿತಕರ.
. ಸಾಮಾನ್ಯ ಪ್ರತಿವಾದದ ಅಂಶಗಳು
ದೇವತೆಗೆ ನೈವೇದ್ಯ ತೋರಿಸಿದ ಎಲ್ಲವನ್ನು ಮನುಷ್ಯನು ತಿನ್ನುತ್ತಿರುವಾಗ, ಆ ದೇವತೆಯು ಅಸುರರ ರಕ್ತ ಕುಡಿಯುತ್ತಾರೆ, ಕೊರಳಲ್ಲಿ ಬುರಡೆಗಳ ಮಾಲೆ ಹಾಕುತ್ತಾರೆ. ಇವೆಲ್ಲವನ್ನು ಸಾಮಾನ್ಯ ವ್ಯಕ್ತಿಯು ಮಾಡಲು ಸಾಧ್ಯವಿದೆಯೇ ? ದೇವಿಯಂತೆ ಕೃತಿ ಮಾಡಲು ನಮ್ಮೊಳಗೆ ದೇವತೆಯ ತತ್ತ್ವವನ್ನು ತರಬೇಕಾಗುತ್ತದೆ. ಅದಕ್ಕಾಗಿ ವ್ಯಕ್ತಿಯು ಸಾಧನೆ ಮಾಡುವ ಆವಶ್ಯಕತೆ ಇದೆ. ಕೇವಲ ದೇವಿಯು ಮಾಂಸ ಸೇವನೆ ಮಾಡುತ್ತಾಳೆ, ಎಂದು ನಾವೂ ಸೇವನೆ ಮಾಡುವೆವು ಎನ್ನುವುದು ಯೋಗ್ಯವಲ್ಲ.
- (ಪೂ.) ಡಾ. ಚಾರೂದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕಾಳಿಮಾತೆಗೆ ಮಾಂಸದ ನೈವೇದ್ಯವನ್ನು ತೋರಿಸುತ್ತಾರೆಂದು ಹಿಂದೂಗಳು ಮಾಂಸಭಕ್ಷಣ ಮಾಡಲು ಅನುಮತಿ ನೀಡಲಾಗಿದೆ ಎಂದು ತಿಳಿಯುವುದು ಅಯೋಗ್ಯ !