ಸನಾತನ ಆಶ್ರಮದ ಸಾಧಕರಿಗೆ ಚಿತ್ರಹಿಂಸೆ ಕೊಡುತ್ತೀರಿ; ಆದರೆ ಪಾಕಿಸ್ತಾನದ ಮೇಲೆ ಕ್ರಮಕೈಗೊಳ್ಳುವುದಿಲ್ಲ !

ದೈನಿಕ ಸಾಮ್ನಾದ ಸಂಪಾದಕೀಯದಿಂದ ಸರಕಾರದ ಮೇಲೆ ಕಟು ಟೀಕೆ
ಮುಂಬಯಿ : ನಮ್ಮ ದೇಶದಲ್ಲಿಕ್ರಮಕೈಗೊಳ್ಳುವುದು ಸಾಧ್ವಿ ಪ್ರಜ್ಞಾಸಿಂಗ್‌ರವರ ಮೇಲೆ, ಕಾಶ್ಮೀರದಲ್ಲಿ ಅತಿಕ್ರಮಣಕಾರರ ವಿರುದ್ಧ ಹೋರಾಡುವ ಕರ್ನಲ್ ಪುರೋಹಿತ್‌ರ ಮೇಲೆ ! ತನಿಖಾ ದಳವು ‘ಸನಾತನ’ ದಂತಹ ಆಶ್ರಮಕ್ಕೆ ಹೋಗಿ ವೃದ, ಅಂಗವಿಕಲ ಸಾಧಕರಿಗೆ ಚಿತ್ರಹಿಂಸೆ ನೀಡುತ್ತದೆ.  ಪ್ರಖರ ರಾಷ್ಟ್ರಭಕ್ತರ ಮೇಲೆ ಕ್ರಮಕೈಗೊಳ್ಳುವ ಒಂದೂ ಅವಕಾಶವನ್ನು ಈ ಮಂಡಳಿಯು ಬಿಡುವುದಿಲ್ಲ; ಆದರೆ ೧೮ ಸೈನಿಕರ ಬಲಿ ತೆಗೆದುಕೊಳ್ಳುವ ಪಾಕ್‌ನ ಮೇಲೆ ಹೇಳುವಷ್ಟು ಕಠಿಣ ಕ್ರಮಕೈಗೊಳ್ಳುವುದಿಲ್ಲ.
ಅದು ಈಗಲಾದರೂ ಆಗಬಹುದೆನ್ನುವ ಅಪೇಕ್ಷೆಯಿದೆ, ಎನ್ನುವ ಪ್ರಖರ ಪ್ರತಿಪಾದನೆಯನ್ನು ಶಿವಸೇನೆಯ ಪಕ್ಷ ಪ್ರಮುಖ ಶ್ರೀ. ಉದ್ಧವ ಠಾಕ್ರೆಯವರು ಸೆಪ್ಟೆಂಬರ್ ೨೧ ರಂದು ದೈನಿಕ ಸಾಮ್ನಾದ ಸಂಪಾದಕೀಯದಿಂದ ಮಾಡಿದ್ದಾರೆ. (ಸನಾತನದ ಮೇಲಿನ ಅನ್ಯಾಯವನ್ನು ಸತತ ಬಯಲಿಗೆಳೆಯುವ ದೈನಿಕ ಸಾಮ್ನಾಕ್ಕೆ ಆಭಾರಿಯಾಗಿದ್ದೇವೆ ! - ಸಂಪಾದಕರು)
 ಅವರು ಮಾತನಾಡುತ್ತಾ,  
೧. ಮಹಾಭಾರತದಲ್ಲಿ ಭೀಮನು ಕೀಚಕನ ತೊಡೆಮುರಿದು ಗಟಗಟ ರಕ್ತ ಕುಡಿದಂತೆ, ಸೇಡು ತೀರಿಸಿಕೊಳ್ಳಿ. ಕೀಚಕನು ತೊಡೆತಟ್ಟಿ ದ್ರೌಪದಿಗೆ ಅವಮಾನ ಮಾಡಿದ್ದನು. ಭೀಮನು ಅದರ ಸೇಡು ತೀರಿಸಿಕೊಂಡನು. ಹಿಂದೂಸ್ತಾನದ ಕೈಯಲ್ಲಿಭೀಮನ ಗಧೆಯಿದೆ, ಬಳೆಯಲ್ಲ, ಎಂಬುದನ್ನು ತೋರಿಸಿ.   ಸೇಡು ತೀರಿಸಿಕೊಳ್ಳಿ ! ನಿಜವಾಗಿಯೂ ಸೇಡು ತೀರಿಸಿಕೊಳ್ಳಿ ! ಪಾಕಿಸ್ತಾನ ಭಯೋತ್ಪಾದಕರ ದೇಶವಾಗಿದೆ. ಅದನ್ನು ಭಯೋತ್ಪಾದಕರ ದೇಶವೆಂದು ಘೋಷಿಸುವ ವ್ಯರ್ಥ ಪ್ರಯತ್ನ ಏಕೆ ? ಪಾಕಿಸ್ತಾನ ನಿರ್ಗತಿಕ ಮತ್ತು ಭಿಕಾರಿಯಾಗಿದೆ. ಅವರ ಮೇಲೆ ಆರ್ಥಿಕ ನಿರ್ಬಂಧದ ವ್ಯರ್ಥ ಪ್ರಯತ್ನದಿಂದ ಏನಾಗುವುದು? ನಿರ್ಲಜ್ಜ ಮತ್ತು ಅಂಜಿಕೆಯಿಲ್ಲದವನಿಗೆ ಮಾತಿನ ಪೆಟ್ಟಿನಿಂದ ಏನು ಕಲಿಯುವುದು ? ಸೇಡು ತೀರಿಸಿಕೊಳ್ಳಿ! ೧೮ ಸೈನಿಕರ ಕುಟುಂಬ, ೧೨೫ ಕೋಟಿ ಜನತೆಯ ಆಕ್ರೋಶ ಇದೇ ಆಗಿದೆ.
೨. ಹಿಂದೂಸ್ತಾನದ ಮೇಲೆ ಸಂಕಟದ ಪರ್ವತವೇ ಕುಸಿದಿದೆ. ಇಂತಹ ಸಮಯದಲ್ಲಿ ರಾಜಕೀಯ ಮತಭೇದಗಳನ್ನು ಬದಿಗೆ ಸರಿಸಿ ಸರಕಾರದ ಬೆಂಬಲಕ್ಕೆ ದೃಢವಾಗಿ ನಿಲ್ಲುವ ಆವಶ್ಯಕತೆಯಿದೆ. ೧೮ ಸೈನಿಕರ ಬಲಿದಾನವು ದೇಶವನ್ನು ಸ್ತಬ್ಧಗೊಳಿಸಿದ್ದು ಇನ್ನೂ ಆ ಆಘಾತದಿಂದ ಹೊರ ಬಂದಿಲ್ಲ.
೩. ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವೆವು, ಉರಿಯ ಘಟನೆಯ ಸೇಡು ತೀರಿಸಿಕೊಳ್ಳುವೆವು, ಆಕ್ರಮಣಕಾರರನ್ನು ಸುಮ್ಮನೆ ಬಿಡುವುದಿಲ್ಲ, ಎಂದು ನಮ್ಮ ಪ್ರಧಾನಮಂತ್ರಿಗಳು ಹೇಳಿದ್ದಾರೆ. ಅದಕ್ಕಾಗಿ ನಾವು ಅವರನ್ನು ಅಭಿನಂದಿಸುತ್ತೇವೆ ಮತ್ತು ‘ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವ ಬಲ ಅವರಿಗೆ ಸಿಗಲಿ’, ಎಂದು ಮಾತೆ ಜಗದಂಬೆಯ ಚರಣಗಳಲ್ಲಿ ಪ್ರಾರ್ಥನೆ ಮಾಡುತ್ತೇವೆ; ಆದರೆ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವೆವು ಎಂದರೆ ನಿಜವಾಗಿಯೂ ಏನು ಮಾಡುತ್ತೀರಿ ? ಪಠಾಣಕೋಟ್ ಹಲ್ಲೆಯ ನಂತರ ಇದೇ ರೀತಿ ಹೇಳಿಕೆಗಳನ್ನು ನೀಡಲಾಯಿತು, ಅದರದ್ದೇನಾಯಿತು? ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವುದು ಬಿಡಿ ಅದರೊಂದಿಗೆ ಪ್ರೇಮಾಲಾಪನೆ ಆರಂಭವಾಯಿತು. ಪಠಾಣಕೋಟ್ ಬಲಿದಾನ ವ್ಯರ್ಥವಾದಂತಾಯಿತು. ‘ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಮುಖವಾಡವನ್ನು ಕಳಚುತ್ತೇವೆ ಮತ್ತು ಅದರ ಬಟಾಬಯಲು ಮಾಡುತ್ತೇವೆ’, ಎಂದು ಪಠಾಣಕೋಟ್‌ನ ಘಟನೆಯ ಸಮಯದಲ್ಲಿ ಹೇಳಿದರು.
೪. ಪಠಾಣಕೋಟ್‌ನ ಮೇಲಿನ ಆಕ್ರಮಣದ ನಂತರ ನಮ್ಮ ಸೇನಾಪ್ರಮುಖರು ಸಹ ಕಠೋರ ಶಬ್ದಗಳಲ್ಲಿ, ‘ಪಾಕಿಸ್ತಾನಕ್ಕೆ ಅವರ ಭಾಷೆಯಲ್ಲೇ ಉತ್ತರಿಸುವೆವು. ಸೇಡು ತೀರಿಕೊಳ್ಳುತ್ತೇವೆ, ಸಮಯ, ದಿನ ಮತ್ತು ಜಾಗವನ್ನು ನಾವು ನಿರ್ಧರಿಸುತ್ತೇವೆ !’ ಎಂದಿದ್ದರು. ಉರಿಯ ಭಯಾನಕ ಘಟನೆಯ ನಂತರವೂಲೆ. ಜನರಲ್ ರಣಬೀರ್ ಸಿಂಗ್‌ರವರು ಅದೇ ಪ್ರಖರ ಶಬ್ದವನ್ನು ಬಳಸಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನ ಆಶ್ರಮದ ಸಾಧಕರಿಗೆ ಚಿತ್ರಹಿಂಸೆ ಕೊಡುತ್ತೀರಿ; ಆದರೆ ಪಾಕಿಸ್ತಾನದ ಮೇಲೆ ಕ್ರಮಕೈಗೊಳ್ಳುವುದಿಲ್ಲ !