ಕೈ ಬೆರಳುಗಳಿಂದ ಹಾಗೂ ಕಣ್ಣುಗಳಿಂದ ಹೊರಸೂಸುವ ಪ್ರಕಾಶದಲ್ಲಿ ವಿವಿಧ ಬಣ್ಣಗಳು ಕಾಣಿಸುವುದು

ದೇವರು ನಿರ್ಮಿಸಿರುವ ಈ ಸೃಷ್ಟಿಯಲ್ಲಿ ಇಷ್ಟರ ವರೆಗೆ ವಿಜ್ಞಾನವೂ ಹುಡುಕದಂತಹ ಹಲವಾರು ನಿಗೂಢ ವಿಷಯಗಳಿವೆ. ಈ ಜಗತ್ತಿನಲ್ಲಿ ಕೆಲವು ವಿಷಯಗಳು ಕಣ್ಣಿಗೆ ಕಾಣಿಸುತ್ತವೆ ಹಾಗೂ ಕೆಲವು ವಿಷಯಗಳು ಕಣ್ಣಿಗೆ ಕಾಣಿಸುವುದಿಲ್ಲ. ನಮ್ಮ ಕಣ್ಣುಗಳಿಗೆ ಕಾಣಿಸದಿರುವುದನ್ನು ಅಸ್ತಿತ್ವದಲ್ಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಉದಾ. ಗಾಳಿ ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ, ಅಂದರೆ ಅದು ಇಲ್ಲವೆಂದು ಹೇಳಲು ಸಾಧ್ಯವಿಲ್ಲ. ನಮಗೆ ಅದರ ಅಸ್ತಿತ್ವ ತಿಳಿಯುತ್ತದೆ. ಅದೇ ರೀತಿ ಭೂಮಂಡಲದಲ್ಲಿ ಅಸ್ತಿತ್ವದಲ್ಲಿರುವ ಪ್ರತಿ ಯೊಂದು ಸಜೀವ ಹಾಗೂ ನಿರ್ಜೀವ ವಸ್ತುವಿನ ಸುತ್ತಲೂ ಒಂದು ಚೈನತ್ಯದ ವಲಯವಿರುತ್ತದೆ. ಅದು ಪ್ರತಿಯೊಂದರ ಕಾರ್ಯಕ್ಕನುಸಾರ ಹೆಚ್ಚು ಕಡಿಮೆ ಪ್ರಮಾಣದಲ್ಲಿರುತ್ತದೆ.

. ಕೈ ಬೆರಳುಗಳಿಂದ ಬಿಳಿ ಪ್ರಕಾಶವು ಹೊರಬೀಳುತ್ತಿರುವುದು ಕಾಣಿಸುವುದು, ಅಧ್ಯಯನ ಕೋಣೆಯಿಂದ ಹೊರಗೆ ಕತ್ತಲೆಯಲ್ಲಿ ಸ್ವಲ್ಪ ಹೊತ್ತು ಒಂದೇ ಸ್ಥಳದಲ್ಲಿ ದೃಷ್ಟಿ ಹಾಯಿಸಿದಾಗ ಕಾಮನಬಿಲ್ಲಿನಂತೆ ಬಣ್ಣಗಳು
ಕಾಣಿಸುವುದು ಹಾಗೂ ಅನಂತರ ಕೈಯಿಂದ ಹೊರಬೀಳುವ ಪ್ರಕಾಶದಲ್ಲಿಯೂ ಬಣ್ಣಗಳು ಕಾಣಿಸುವುದು
೨೦.೧೨.೨೦೧೫ ರಂದು ಕಪ್ಪು ಹಿನ್ನೆಲೆ (ಬ್ಯಾಕ್‌ಗ್ರೌಂಡ್) ಇರುವಲ್ಲಿ ಅಥವಾ ಕಡಿಮೆ ಪ್ರಕಾಶದ ಹಿನ್ನೆಲೆ (ಬ್ಯಾಕ್‌ಗ್ರೌಂಡ್) ಇರುವ ಗೋಡೆಯ ಮೇಲೆ ಪರಾತ್ಪರ ಗುರು ಡಾ. ಆಠವಲೆಯವರು ಕೈ ಹಿಡಿದಾಗ ಅವರ ಕೈಯ ಸುತ್ತಲೂ ಬಿಳಿ ವಲಯಗಳು ಕಾಣಿಸಿದವು ಹಾಗೂ ಕೈ ಬೆರಳುಗಳಿಂದ ಬಿಳಿ ಪ್ರಕಾಶವು ದೂರದ ತನಕ ಹೋಗುತ್ತಿರುವುದು ಕಾಣಿಸಿತು. ಬಲಗೈಯ ಐದೂ ಬೆರಳುಗಳನ್ನು ಜೋಡಿಸಿ ನೋಡಿದಾಗ ಅವರಿಗೆ ಪ್ರಕಾಶವು ಹೆಚ್ಚು ಪ್ರಮಾಣ ದಲ್ಲಿ ಹೊರಗೆ ಬರುತ್ತಿರುವುದು ಕಾಣಿಸಿತು. ಅದರ ತುಲನೆಯಲ್ಲಿ ಐದೂ ಬೆರಳುಗಳನ್ನು ಬೇರೆ ಬೇರೆಯಾಗಿಟ್ಟು ನೋಡಿದಾಗ ಪ್ರಕಾಶವು ಕಡಿಮೆ ಪ್ರಮಾಣದಲ್ಲಿ ಹೊರಗೆ ಬರುತ್ತಿರುವುದು ಅರಿವಾಯಿತು. ೨೫.೧೨.೨೦೧೫ ರಂದು ರಾತ್ರಿ ವಿಭಾಗದಿಂದ ಹೊರಗೆ ಕತ್ತಲೆಯ ದಿಕ್ಕಿನಲ್ಲಿ ಸ್ವಲ್ಪ ಹೊತ್ತು ಒಂದೇ ಸಮನೆ ನೋಡಿದಾಗ ಕತ್ತಲೆಯ ವಾತಾವರಣದಲ್ಲಿ ಕಾಮನಬಿಲ್ಲಿನಂತೆ ಬಣ್ಣಗಳು ಕಾಣಿಸಿದವು. ಬೇರೆ ಸಾಧಕರಿಗೂ ಹಾಗೆಯೇ ನೋಡಲು ಹೇಳಿದಾಗ ಅವರಿಗೂ ಅದೇ ರೀತಿ ಕಾಣಿಸಿತು. ಅನಂತರ ಪ.ಪೂ. ಡಾಕ್ಟರರ ಕೈಯಿಂದ ಹೊರಬೀಳುವ ಪ್ರಕಾಶದಿಂದ ಬಣ್ಣಗಳು ಕಾಣಿಸಿದವು. ಸಂತರ ಹಾಗೂ ದೇವತೆಗಳ ಚಿತ್ರಗಳ ಸುತ್ತಲೂ ವಲಯ ಅಥವಾ ಪ್ರಭಾವಳಿಯನ್ನು ತೋರಿಸಲಾಗುತ್ತದೆ. ಇದು ಕಲ್ಪನೆಯಲ್ಲ ಪ್ರತ್ಯಕ್ಷವಾಗಿಯೂ ಹಾಗೆ ಕಾಣಿಸುತ್ತದೆ ಎಂದು ತಿಳಿಯಿತು.
. ಮೇಲಿನ ಪ್ರಯೋಗದ ವಿಷಯದಲ್ಲಿ ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ವಿಶ್ಲೇಷಣೆ ಪ್ರಕಾಶವು ಬಿಳಿಯಾಗಿರುತ್ತದೆ, ಎಂಬುದು ಜನಸಾಮಾನ್ಯರ ನಂಬಿಕೆಯಾಗಿದೆ. ಬಿಳಿಯಾಗಿ ಕಾಣಿಸುವ ಪ್ರಕಾಶದಲ್ಲಿ ಏಳು ಬಣ್ಣಗಳು ಒಟ್ಟಾಗಿರು ತ್ತವೆ ಎಂಬುದು ಶಾಲೆಯ ಪ್ರಯೋಗಶಾಲೆಗಳಲ್ಲಿ ನ್ಯೂಟನ್‌ನ ಪ್ರಿಸ್ಮನಿಂದ ಗಮನಕ್ಕೆ ಬರುತ್ತದೆ. ಅದರಂತೆ ನಿಸರ್ಗದ ಪ್ರಯೋಗಶಾಲೆಯಲ್ಲಿ ಆಕಾಶದ ಹಿನ್ನೆಲೆ ಇರುವಾಗ ದೊಡ್ಡ ಪ್ರಮಾಣದಲ್ಲಿ ಅದು ಸಾಕಾರವಾಗುತ್ತದೆ. (ಆಧಾರ : ನಿಸರ್ಗಜ್ಞಾನಾನೆ, ಮಾಸಿಕ ಮನಶಕ್ತಿ, ಫೆಬ್ರವರಿ ೨೦೦೬)
ವಿಜ್ಞಾನಿಗಳ ಅಭಿಪ್ರಾಯದಂತೆ ಮುಖ್ಯವಾಗಿ ಮೂರು ಬಣ್ಣಗಳಿರು ತ್ತವೆ, ಕೆಂಪು, ಹಸಿರು ಹಾಗೂ ನೀಲಿ (RGB), ಉಳಿದಿರುವ ನೂರಾರು-ಸಾವಿರಾರು ಬಣ್ಣದ ಗೆರೆಗಳು ಸೃಷ್ಟಿಯಲ್ಲಿ ಕಾಣಿಸುತ್ತವೆ, ಆ ಬಣ್ಣಗಳೆಲ್ಲವೂ ಈ ಮೂಲ ಮೂರು ಬಣ್ಣಗಳ ಹೆಚ್ಚು ಅಥವಾ ಕಡಿಮೆ ಮಿಶ್ರಣದಿಂದ ತಯಾರಾಗುತ್ತವೆ. ನೀಲಿ, ಹಸಿರು ಹಾಗೂ ಕೆಂಪು ಬಣ್ಣಗಳ ಪೈಕಿ ಯಾವುದಾದರೂ ಎರಡು ಬಣ್ಣಗಳನ್ನು ಸೇರಿಸಿದಾಗ ಮೂರನೇ ಬಣ್ಣ ಸಿಗುತ್ತದೆ, ಉದಾ. ನೀಲಿ ಹಾಗೂ ಹಸಿರು ಬಣ್ಣ ಸೇರಿಸಿದಾಗ ನೇರಳೆ ಬಣ್ಣ; ಕೆಂಪು ಹಾಗೂ ನೀಲಿ ಬಣ್ಣ ಸೇರಿಸಿದಾಗ ಮೆಜೆಂಟಾ; ಹಾಗೂ ಕೆಂಪು ಹಾಗೂ ಹಸಿರು ಬಣ್ಣ ಸೇರಿಸಿದಾಗ ಹಳದಿ ಬಣ್ಣ ಸಿಗುತ್ತದೆ.
ಹಸಿರು ಹಾಗೂ ಕೆಂಪು ಬಣ್ಣವನ್ನು ಒಟ್ಟು ಸೇರಿಸಿದಾಗ ವಿಶಿಷ್ಟ ಪದ್ಧತಿ ಯಿಂದ ಅದರ ವಿಶ್ಲೇಷಣೆಯಾದಾಗ ನಮಗೆ ಹಳದಿ ಬಣ್ಣ ಕಾಣಿಸುತ್ತದೆ. ಇದು ಹೇಗೆ ಮತ್ತು ಏಕೆ ಆಗುತ್ತದೆ ?, ಎಂಬುದಕ್ಕೆ ಸರಿಯಾದ ಉತ್ತರ ಹೇಳಲು ಆಗುವುದಿಲ್ಲ. ಕೆಲವು ವಿಜ್ಞಾನಿಗಳ ಅಭಿಪ್ರಾಯದಂತೆ ಕೆಂಪು ಹಾಗೂ ಹಸಿರು ಪ್ರಕಾಶದ ತರಂಗಗಳು ಬೇರೆ ಬೇರೆಯಾಗಿರುತ್ತವೆ. ಅವು ಒಟ್ಟು ಸೇರಿ ಮನುಷ್ಯನ ಕಣ್ಣುಗಳಿಗೆ ಹಳದಿ ಬಣ್ಣ ಕಾಣಿಸುತ್ತದೆ. ಈ ಪ್ರಕ್ರಿಯೆ ಕೇವಲ ಕಣ್ಣು ಗಳಲ್ಲಿರುವ ವಿಶೇಷ ಜೀವಕೋಶಗಳಿಂದ ಆಗುತ್ತದೆ. ಸಾಮಾನ್ಯವಾಗಿ ನಾವು ಕೆಂಪು ಹಾಗೂ ಹಸಿರು ಬಣ್ಣವನ್ನು ಮಿಶ್ರಣ ಮಾಡಿದಾಗ ಅದರಿಂದ ಕಪ್ಪು ಬಣ್ಣ ತಯಾರಾಗುತ್ತದೆ, ಎಂದು ನಮಗೆ ತಿಳಿದಿದೆ; ಆದರೆ ಕಣ್ಣುಗಳಿಗೆ ಮಾತ್ರ ಹಳದಿ ಬಣ್ಣ ಕಾಣಿಸಲು ಕಣ್ಣುಗಳಲ್ಲಿರುವ ವಿಶಿಷ್ಟ ಕ್ಷಮತೆಯೇ ಕಾರಣವಾಗಿದೆ ! ಸಂಕ್ಷಿಪ್ತದಲ್ಲಿ ಹೇಳಬೇಕೆಂದರೆ, ವಸ್ತು ಹಾಗೂ ಆ ವಸ್ತುವಿನ ಜ್ಞಾನಪ್ರಾಪ್ತಿ ಮಾಡಿಕೊಳ್ಳುವ ಮನುಷ್ಯನಲ್ಲಿ ಅವನು ನೋಡುವ ದೃಷ್ಟಿ, ಅಂದರೆ ದೃಷ್ಟಿಕೋನಕ್ಕೆ ಮಹತ್ವವಿದೆ. (ಆಧಾರ : ನಿಸರ್ಗಜ್ಞಾನಾನೆ, ಮಾಸಿಕ ಮನಶಕ್ತಿ, ಡಿಸೆಂಬರ್ ೨೦೦೦) - ಕು. ಪ್ರಿಯಾಂಕಾ ಲೋಟಲೀಕರ, ಮಹರ್ಷಿ ಅಧ್ಯಾತ್ಮವಿಶ್ವವಿದ್ಯಾಲಯ. ಕತ್ತಲೆಯಲ್ಲಿ ನೋಡಿದಾಗ ವಿವಿಧ ಬಣ್ಣಗಳು ಕಾಣಿಸುವುದರ ಕಾರಣ ಬಿಳಿ ಪ್ರಕಾಶವನ್ನು ಗಾಜಿನ ಪ್ರಿಸಮ್ ಮೂಲಕ ಹಾಯಿಸಿದಾಗ ಅದು ಒಂದು ನಿರ್ದಿಷ್ಟ ಕೋನದಲ್ಲಿ ಹೊರಳುತ್ತದೆ. ಪ್ರಕಾಶದ ಈ ರೀತಿಯ ಹೊರಳುವಿಕೆಯನ್ನು ವಿವರ್ತನೆ (ರಿಫ್ರಾಕ್ಶನ್) ಎಂದು ಹೇಳುತ್ತಾರೆ. ಇದರಿಂದ ಪ್ರಕಾಶದ ಏಳು ಬಣ್ಣಗಳ ಪಟ್ಟೆ ಕಾಣಿಸುತ್ತದೆ. ದೃಷ್ಟಿಯ ವೈಶಿಷ್ಟ್ಯವೆಂದರೆ, ಅದು ವ್ಯಕ್ತಿನಿಷ್ಠವಾಗಿರುತ್ತದೆ. ಯಾವು ದಾದರೂ ಒಂದು ಬಣ್ಣವನ್ನು ತಿಳಿದುಕೊಳ್ಳಲು ಮುಖ್ಯವಾಗಿ ಪ್ರಕಾಶ, ವಸ್ತು, ಕಣ್ಣುಗಳ ಹಾಗೂ ಮನಸ್ಸಿನ ಕ್ಷಮತೆ ಎಂಬ ೪ ಘಟಕಗಳ ಅಗತ್ಯವಿರು ತ್ತದೆ. ಹೊರಗೆ ಕತ್ತಲೆಯನ್ನು ನೋಡಿದಾಗ, ಕಣ್ಣುಗಳಿಂದ ಪ್ರಕ್ಷೇಪಿತ ಗೊಳ್ಳುವ ಬಿಳಿ ಪ್ರಕಾಶದ ಸೂಕ್ಷ್ಮ ಕಿರಣಗಳು ಒಂದು ವಿಶಿಷ್ಟ ಕೋನದಲ್ಲಿ ವಾತಾವರಣದಲ್ಲಿ ಕಾರ್ಯನಿರತವಾಗಿರುವ ಕಣಗಳ ಮೇಲೆ ಅಪ್ಪಳಿಸುತ್ತವೆ ಹಾಗೂ ಅದರಿಂದ ಕಣ್ಣುಗಳಿಂದ ಪ್ರಕ್ಷೇಪಿಸಲ್ಪಡುವ ಕಿರಣಗಳಿಗೆ ಒಂದು ತಿರುವು ಸಿಗುತ್ತದೆ. ಅದರಿಂದ ವಿವಿಧ ಬಣ್ಣಗಳಾಗಿ ಅವು ಮಾರ್ಪಡುತ್ತವೆ. ಅದರಿಂದ ಏಳು ಬಣ್ಣಗಳು ಕಾಣಿಸುತ್ತವೆ. ಅದರಲ್ಲಿ ಸಹ ಕೆಂಪು, ನೀಲಿ ಹಾಗೂ ಹಸಿರು ಬಣ್ಣಗಳ ಮಿಶ್ರಣವು ಹೆಚ್ಚು ಪ್ರಮಾಣದಲ್ಲಿ ಕಾಣಿಸುತ್ತದೆ. - (ಪರಾತ್ಪರ ಗುರು) ಡಾ. ಆಠವಲೆ
ತಜ್ಞರು, ಅಧ್ಯಯನ ಮಾಡುವವರು ಹಾಗೂ ವಾಸ್ತುಶಾಸ್ತ್ರ ಕಲಿಯುತ್ತಿರುವ ವಿದ್ಯಾರ್ಥಿಗಳು ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆ ಮಾಡಬೇಕೆಂದು ವಿನಂತಿ !
. ದೇಹದ ಸುತ್ತಲೂ ಬಿಳಿ ಕಣ ಹಾಗೂ ವಲಯ ಕಾಣಿಸುವುದು, ಕೈ-ಕಾಲಿನ ಬೆರಳುಗಳಿಂದ ಹೊಗೆ ಹಾಗೂ ಪ್ರಕಾಶದ ಕಿರಣಗಳು ಹೊರ ಬರುವುದು ಕಾಣಿಸುವುದು, ಇದರ ಹಿಂದಿನ ವೈಜ್ಞಾನಿಕ ಕಾರಣವೇನು ?
. ಬಿಳಿ ಕಣ, ವಲಯ ಮತ್ತು ಕಿರಣಗಳು ಯಾವಾಗ ಕಾಣಿಸುತ್ತವೆ ?
ಅದರ ವೈಜ್ಞಾನಿಕ ಅಥವಾ ರಾಸಾಯನಿಕ ಪ್ರಕ್ರಿಯೆ ಏನಿರುತ್ತದೆ ?
. ಈ ಬಗ್ಗೆ ಯಾವ ವೈಜ್ಞಾನಿಕ ಉಪಕರಣಗಳ ಮೂಲಕ ಸಂಶೋಧನೆ ಮಾಡಬೇಕು ?
. ಅಲ್ಲದೇ ಈ ಬಗ್ಗೆ ಈ ಮೊದಲು ಯಾರಾದರೂ ವೈಜ್ಞಾನಿಕ ಸಂಶೋಧನೆ ಮಾಡಿದ್ದರೆ ನಮಗೆ ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆ ಮಾಡಲು ಸಹಾಯ ಲಭಿಸಿದರೆ ನಾವು ಕೃತಜ್ಞರಾಗಿರುವೆವು.’
- ವ್ಯವಸ್ಥಾಪಕರು, ಸನಾತನ ಆಶ್ರಮ, ರಾಮನಾಥಿ,
ಗೋವಾ. (ಸಂಪರ್ಕ : ಶ್ರೀ. ರೂಪೇಶ ರೇಡಕರ್, ವಿ-ಅಂಚೆ : savv.research@gmail.com)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕೈ ಬೆರಳುಗಳಿಂದ ಹಾಗೂ ಕಣ್ಣುಗಳಿಂದ ಹೊರಸೂಸುವ ಪ್ರಕಾಶದಲ್ಲಿ ವಿವಿಧ ಬಣ್ಣಗಳು ಕಾಣಿಸುವುದು