ವರಾಹ ಜಯಂತಿ

ಭಾದ್ರಪದ ಶುಕ್ಲ ಪಕ್ಷ ತೃತೀಯ (..೨೦೧೬)

ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು

ಶ್ರೀ ಸ್ವರ್ಣಗೌರಿ ವ್ರತ

ಭಾದ್ರಪದ ಶುಕ್ಲ ಪಕ್ಷ ತೃತೀಯ (..೨೦೧೬)
ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು

ಶ್ರೀಪಾದ ಶ್ರೀವಲ್ಲಭ ಜಯಂತಿ

ಭಾದ್ರಪದ ಶುಕ್ಲ ಪಕ್ಷ ಚತುರ್ಥಿ (..೨೦೧೬)
ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು

ಬಲರಾಮ ಜಯಂತಿ

ಭಾದ್ರಪದ ಶುಕ್ಲ ಪಕ್ಷ ಷಷ್ಠಿ (..೨೦೧೬)
ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು

ಪ.ಪೂ. ಕಲಾವತಿಆಯಿ ಜಯಂತಿ

ಭಾದ್ರಪದ ಶುಕ್ಲ ಪಕ್ಷ ಪಂಚಮಿ (..೨೦೧೬)
ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು

ಮಚ್ಛಿಂದ್ರನಾಥ ಜಯಂತಿ

ಭಾದ್ರಪದ ಶುಕ್ಲ ಪಕ್ಷ ಪಂಚಮಿ (..೨೦೧೬)
ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು

ಅಮಲು ಪದಾರ್ಥಗಳ ಕಳ್ಳಸಾಗಾಣಿಕೆ ಮಾಡುವವರನ್ನು ಬಿಟ್ಟು ಗೋರಕ್ಷಕರ ಮೇಲೆ ಕಾರ್ಯಾಚರಣೆ ಮಾಡುವ ಅಕಾಲಿದಳ - ಭಾಜಪ ಸರಕಾರದ ಭ್ರಷ್ಟ ಮತ್ತು ಹಿಂದೂದ್ವೇಷಿ ಪಂಜಾಬ್ ಪೊಲೀಸರು !

ಪಂಜಾಬ್ ಗೋರಕ್ಷಕ ದಳದ ಮುಖ್ಯಸ್ಥ ಸತೀಶ ಕುಮಾರ ಪ್ರಧಾನ್ ಬಂಧನ !
ಕಸಾಯಿ ಮತ್ತು ಗೋಕಳ್ಳರನ್ನು ಬಿಟ್ಟು, ಗೋರಕ್ಷಕರನ್ನು ಸೆರೆಮನೆಗೆ ಹಾಕಲಾಗುತ್ತದೆ, ಇದು ಪೊಲೀಸರ ಮೊಗಲಾಡಳಿತವಲ್ಲವೇ ?
ರಾಜಕಾರಣಿಗಳಿಂದ ಹಿಂದೂಗಳ ಮೇಲೆ ದೌರ್ಜನ್ಯ ನಡೆಯತ್ತಲೇ ಇದೆ. ಹಾಗಾಗಿ ಹಿಂದೂಗಳಿಗೆ ೬೯ ವರ್ಷಗಳ ನಂತರವೂ ಯೋಗ್ಯ ರಾಜ್ಯಕರ್ತರ ಆಯ್ಕೆ ಮಾಡಲು ಆಗಲಿಲ್ಲ, ಎಂದು ಹೇಳಬಹುದು ! ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರ ಸ್ಥಾಪನೆಗೆ ಪರ್ಯಾಯವಿಲ್ಲ !
ಪಟಿಯಾಲಾ (ಪಂಜಾಬ್) : ಪಂಜಾಬ್ ಗೋರಕ್ಷಕ ದಳದ ಮುಖ್ಯಸ್ಥ ಶ್ರೀ. ಸತೀಶ ಕುಮಾರ ಪ್ರಧಾನರನ್ನು ಆಗಸ್ಟ್ ೨೧ ರಂದು ಪಟಿಯಾಲಾ ಪೊಲೀಸರು ಬಂಧಿಸಿದರು.

ಪರಾತ್ಪರ ಗುರು ಡಾ. ಆಠವಲೆಯವರ ತೇಜಸ್ವಿ ವಿಚಾರಗಳು


ಆದಿ ಶಂಕರಾಚಾರ್ಯರು ವಿರೋಧಿ ಪಂಡಿತರೊಂದಿಗೆ ವಾದವಿವಾದ ಮಾಡಿ ಅವರನ್ನು ಸೋಲಿಸಿದರು. ಆದರೆ ಇಂದಿನ ಬುದ್ಧಿಪ್ರಾಮಾಣ್ಯ ವಾದಿಗಳನ್ನು ಮತ್ತು ಧರ್ಮದ್ರೋಹಿಗಳನ್ನು ವಾದವಿವಾದ ಮಾಡಿ ಸೋಲಿಸಲು ಆಗುವುದಿಲ್ಲ; ಏಕೆಂದರೆ ಅವರಲ್ಲಿ ಧರ್ಮದ ಬಗ್ಗೆ ಎಳ್ಳಷ್ಟೂ ಅಧ್ಯಯನ ಇಲ್ಲದಿರುವುದರಿಂದ ವಾದವಿವಾದ ಮಾಡಲು ಅವರು ಮುಂದೆ ಬರುವುದಿಲ್ಲ !’
- (ಪರಾತ್ಪರ ಗುರು) ಡಾ. ಆಠವಲೆ

ಈ ಕೃತಘ್ನತೆಗೆ ಏನೆನ್ನಬೇಕು ?

ಕಾಶ್ಮೀರದಲ್ಲಿ ಉಗ್ರ ಬುರ್ಹಾನ ವಾನಿಯ ಹತ್ಯೆಯಾಯಿತು, ಅಂದಿ ನಿಂದ ಅಂದರೆ ಕಳೆದ ಒಂದುವರೆ ತಿಂಗಳಿಂದ ಆ ರಾಜ್ಯದಲ್ಲಿ ಹಿಂಸಾಚಾರ ನಡೆಯುತ್ತಿದೆ. ಈ ಹಿಂಸಾಚಾರವನ್ನು ತಡೆಯಲು ಭದ್ರತಾ ದಳದ ಸೈನಿಕರು ಮತ್ತು ಪೊಲೀಸರು ತಮ್ಮ ಸೇವೆಯಲ್ಲಿ ಮಗ್ನರಾಗಿದ್ದಾರೆ. ಹಿಂಸಾಚಾರದಲ್ಲಿ ೬೦ ಕ್ಕಿಂತಲೂ ಹೆಚ್ಚು ಆಂದೋಲನಕಾರರು ಸಾವನ್ನಪ್ಪಿದರು ಹಾಗೂ ನಾಲ್ಕು ಸಾವಿರಕ್ಕಿಂತಲೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಈ ಆಂದೋಲನಕಾರರು ಬುರ್ಹಾನ ವಾನಿಯ ಬೆಂಬಲಿಗರಾಗಿದ್ದಾರೆಂದು ಪ್ರತ್ಯೇಕವಾಗಿ ಹೇಳುವ ಆವಶ್ಯಕತೆಯಿಲ್ಲ.

ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟವರು ಗಾಂಧಿ ಅಲ್ಲ, ಸುಭಾಶ್ಚಂದ್ರ ಬೋಸ್ ! - ಬಿ.ಬಿ.ಸಿ.

ಇದಕ್ಕೆ ನಿವೃತ್ತ ಮೇಜರ್ ಜನರಲ್ ಜಿ.ಡಿ.ಬಕ್ಷಿ ಇವರ ಪುಸ್ತಕದಿಂದಲೂ ಪುಷ್ಟಿ !
ನವ ದೆಹಲಿ : ಬಿಬಿಸಿ (ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಶನ್) ಈ ಇಂಗ್ಲೆಂಡಿನ ವಾರ್ತವಾಹಿನಿಯ ಅಭಿಪ್ರಾಯದಂತೆ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟವರು ಗಾಂಧಿಯಲ್ಲ, ನೇತಾಜಿ ಸುಭಾಶ್ಚಂದ್ರ ಬೋಸ್ ಆಗಿದ್ದಾರೆ. ಬಿಬಿಸಿಯ ಈ ವಿಶ್ಲೇಷಣೆಯು ಭಾರತ ಸ್ವಾತಂತ್ರ್ಯ ಗಳಿಸಿ ೭೦ ವರ್ಷಗಳಿಗೆ ಪಾದಾರ್ಪಣೆ ಮಾಡಿದಾಗ ಹಾಗೂ ನೇತಾಜಿ ಸುಭಾಶ್ಚಂದ್ರ ಬೋಸ್ ಇವರ ಮೃತ್ಯುವಿಗೆ ಸಂಬಂಧಿಸಿದ ೨೦೦ ಕಡತಗಳನ್ನು ಕೇಂದ್ರ ಸರಕಾರವು ಸಾರ್ವಜನಿಕ ಮಾಡಿದಾಗ ಬಂದಿದೆ. (ಕಾಂಗ್ರೆಸ್ ಜನರಲ್ಲಿ ಗಾಂಧಿಯಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ, ಎಂದು ಸುಳ್ಳು ಹಾಗೂ ಸ್ವಾರ್ಥಿ ಪ್ರಚಾರ ಮಾಡಿ ಕ್ರಾಂತಿಕಾರರ ಮತ್ತು ನೇತಾಜಿ ಯವರ ಬಲಿದಾನದ ಮೌಲ್ಯವನ್ನು ಶೂನ್ಯಗೊಳಿಸಿತು. ಇಂತಹ ರಾಷ್ಟ್ರದ್ರೋಹಿ ಕಾಂಗ್ರೆಸ್‌ನ ರಾಜಕೀಯ ಅಸ್ತಿತ್ವ ಅಳಿಸಿ ಹಾಕಲು ಈಗ ಜನರು ಮತಪೆಟ್ಟಿಗೆ ಮೂಲಕ ಪಾಠಕಲಿಸಬೇಕು ! - ಸಂಪಾದಕರು)

ಕಾಶ್ಮೀರದ ಹಿಂಸಾಚಾರದಲ್ಲಿ ಮೃತಪಟ್ಟವರು ನಮ್ಮವರೇ ಆಗಿದ್ದರು ! - ಪ್ರಧಾನಿ ಮೋದಿ

ನವ ದೆಹಲಿ : ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಇವರು ವಿಪಕ್ಷಗಳ ಮುಖಂಡರ ಒಂದು ನಿಯೋಗದ ಜೊತೆಗೆ ಪ್ರಧಾನಿ ಮೋದಿಯವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಮೋದಿಯವರು ಕಾಶ್ಮೀರದ ಹಿಂಸಾಚಾರದಲ್ಲಿ ಮೃತರಾದವರ ಬಗ್ಗೆ ದುಃಖವನ್ನು ವ್ಯಕ್ತಪಡಿಸುತ್ತಾ, ಇದರಲ್ಲಿ ಮೃತಪಟ್ಟವರು ನಮ್ಮವರೇ ಆಗಿದ್ದಾರೆ, ಎಂದು ಹೇಳಿದರು.

ಉತ್ತರಪ್ರದೇಶದಲ್ಲಿ ಭಾಜಪದ ಭಿತ್ತಿಪತ್ರದಲ್ಲಿ ನೆಹರೂಗೆ ಸ್ಥಾನ ಆದರೆ, ಡಾ. ಶ್ಯಾಮಪ್ರಸಾದ ಮುಖರ್ಜಿ ವರ್ಜ್ಯ !

ಗಾಂಧಿಯಷ್ಟೇ ನೆಹರೂ ಸಹ ತಪ್ಪು ಮಾಡಿ
ದೇಶವನ್ನು ವಿನಾಶದ ಕೂಪಕ್ಕೆ ತಳ್ಳಿರುವಾಗ ಅವರ ವೈಭವೀಕರಣವೇಕೆ ?
ಬಾರಾಂಬಕಿ (ಉತ್ತರಪ್ರದೇಶ) : ಇತ್ತೀಚೆಗೆ ನೆರವೇರಿದ ಸ್ವಾತಂತ್ರ್ಯದಿನ ನಿಮಿತ್ತ ಭಾಜಪ ಇಲ್ಲಿ ಆಯೋಜಿಸಿದ ತಿರಂಗಾ ಯಾತ್ರೆಯ ಭಿತ್ತಿಪತ್ರಗಳಲ್ಲಿ ಜವಾಹರಲಾಲ್ ನೆಹರೂಗೆ ಮುಖ್ಯ ಸ್ಥಾನ ನೀಡಿತ್ತು. ಆದ್ದರಿಂದ ಅನೇಕರ ಹುಬ್ಬು ಮೇಲೇ ರಿತ್ತು. ಆದ್ದರಿಂದ ಈಗ ಭಾಜಪಕ್ಕೆ ಮೋಹನದಾಸ ಗಾಂಧಿ ನಂತರ ನೆಹರೂ ಆದರ್ಶ ನಾಯಕರಾಗಿ ದ್ದಾರೆಯೇ ? ಎಂಬ ಪ್ರಶ್ನೆ ವಿಚಾರಿಸಲಾಗುತ್ತಿದೆ.

ಬೌದ್ಧರ ದೌರ್ಜನ್ಯದಿಂದ ಭೂತಾನ್‌ನ ೫೩ ಸಾವಿರ ಹಿಂದೂಗಳು ಪಡೆದರು ಅಮೇರಿಕಾದಲ್ಲಿ ಆಶ್ರಯ !

ಭೂತಾನಿನ ಪೀಡಿತ ಹಿಂದೂಗಳು ಭಾರತಕ್ಕೆ ಬರದೆ ಅಮೇರಿಕಾದಲ್ಲಿ ಆಶ್ರಯ ಪಡೆದರು,
ಇದರ ಅರ್ಥ ಭಾರತದಲ್ಲಿ ಹಿಂದೂಗಳಿಗಾಗಿ ಅನುಕೂಲ ವಾತಾವರಣವಿಲ್ಲ ಎಂದಾಗುತ್ತದೆಯೇ ?
ಈ ಪೀಡಿತ ಹಿಂದೂಗಳಿಗೆ ಭಾರತ ಸರಕಾರ ಏನು ಸಹಾಯ ಮಾಡಲಿದೆ ?
ವಾಶಿಂಗ್ಟನ್ : ೧೯೯೦ ರಲ್ಲಿ ಭೂತಾನ್‌ನಲ್ಲಿ ‘ವನ್ ನೇಶನ್’, ‘ವನ್ ಪೀಪಲ್’ ಆಂದೋಲನವನ್ನು ಹಮ್ಮಿಕೊಳ್ಳಲಾಯಿತು. ಈ ಆಂದೋಲನದಲ್ಲಿ ಬೌದ್ಧರು ನಡೆಸಿದ ದೌರ್ಜನ್ಯದಿಂದ ಇಲ್ಲಿನ ೫೦ ಸಾವಿರಕ್ಕಿಂತಲೂ ಹೆಚ್ಚು ಹಿಂದೂಗಳು ಭೂತಾನ್ ತ್ಯಜಿಸಿ ಅಮೇರಿಕಾದಲ್ಲಿ ಆಶ್ರಯ ಪಡೆದಿದ್ದರು. ಒಂದು ಸಮೀಕ್ಷೆಗನುಸಾರ ಈಗಲೂ ೫೩ ಸಾವಿರ ಕ್ಕಿಂತಲೂ ಹೆಚ್ಚು ಹಿಂದೂ ಶರಣಾರ್ಥಿಗಳು ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ.

ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !

ಸೂಚನೆ : ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.
ಫಲಕ ಪ್ರಸಿದ್ಧಿಗಾಗಿ
. ಈಗ ಹಿಂದೂಗಳ ದೇವಸ್ಥಾನದವರೆಗೂ ತಲುಪಿದ ‘ಲವ್ ಜಿಹಾದ್’ !
ಕೇರಳದ ಎರ್ನಾಕುಲಮ್‌ನಲ್ಲಿರುವ ಒಂದು ದೇವಸ್ಥಾನದ ಮಹಾ ಪ್ರಸಾದದ ಸಮಯದಲ್ಲಿ ಕೆಲವು ಮತಾಂಧ ಯುವಕರು ಅಲ್ಲಿಗೆ ಬರುತ್ತಿದ್ದು ಹಿಂದೂ ಹೆಣ್ಣುಮಕ್ಕಳ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಲವ್ ಜಿಹಾದ್‌ನ ಭಯ ನಿರ್ಮಾಣವಾಗಿದ್ದು , ಈ ಸಂದರ್ಭದ ಒಂದು ಪ್ರಕರಣವೂ ಬಹಿರಂಗವಾಗಿದೆ.

ಶ್ರೀ ಗಣೇಶ ಚತುರ್ಥಿ (೫ ಸೆಪ್ಟೆಂಬರ್ ೨೦೧೬)

. ಮಹತ್ವ
ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುರ್ಣಿಮೆ ಯವರೆಗಿನ ೧೨೦ ದಿನಗಳ ಕಾಲದಲ್ಲಿ ವಿನಾಶಕಾರಿ, ತಮಪ್ರಧಾನ ಯಮಲಹರಿಗಳು ಹೆಚ್ಚು ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರುತ್ತವೆ. ಈ ಕಾಲದಲ್ಲಿ ಅವುಗಳ ತೀವ್ರತೆಯೂ ಹೆಚ್ಚಿಗೆ ಇರುತ್ತದೆ. ಈ ತೀವ್ರತೆಯ ಕಾಲದಲ್ಲಿ, ಅಂದರೆ ಭಾದ್ರಪದ ಶುಕ್ಲ ಚತುರ್ಥಿಯಿಂದ ಅನಂತ ಚತುರ್ದಶಿಯ ವರೆಗೆ ಗಣೇಶ ಲಹರಿಗಳು ಪೃಥ್ವಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಬರುವುದ ರಿಂದ ಯಮಲಹರಿಗಳ ತೀವ್ರತೆ ಕಡಿಮೆಯಾಗಲು ಸಹಾಯವಾಗುತ್ತದೆ. (ಈ ಲಹರಿಗಳ ಬಗ್ಗೆ ಹೆಚ್ಚಿನ ಜ್ಞಾನವನ್ನು ಸನಾತನದ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’ ಈ ಗ್ರಂಥದಲ್ಲಿ ಕೊಡಲಾಗಿದೆ.)

ದೂರ್ವೆ

ಗಣೇಶನ ಪೂಜೆಯಲ್ಲಿ ದೂರ್ವೆಗೆ (ಗರಿಕೆ) ವಿಶೇಷ ಮಹತ್ವವಿದೆ.
ವ್ಯುತ್ಪತ್ತಿ ಮತ್ತು ಅರ್ಥ
ದೂಃ+ಅವಮ್, ಹೀಗೆ ದೂರ್ವೆ ಈ ಶಬ್ದವು ನಿರ್ಮಾಣವಾಗಿದೆ. ‘ದೂಃ’ ಅಂದರೆ ದೂರದಲ್ಲಿ ಇರುವುದು ಮತ್ತು ‘ಅವಮ್’ ಅಂದರೆ ಯಾವುದು ಹತ್ತಿರ ತರುತ್ತದೆಯೋ ಅದು. ದೂರದಲ್ಲಿರುವ ಶ್ರೀ ಗಣೇಶನ ಪವಿತ್ರಕಗಳನ್ನು ಯಾವುದು ಹತ್ತಿರ ತರುತ್ತದೆಯೋ, ಅದುವೇ ದೂರ್ವೆ ಆಗಿದೆ.
ದೂರ್ವೆ ಹೇಗಿರಬೇಕು?
ಗಣಪತಿಗೆ ಎಳೆಯ ದೂರ್ವೆಗಳನ್ನು ಅರ್ಪಿಸಬೇಕು. ಎಳೆಯ ದೂರ್ವೆಗೆ ‘ಬಾಲತೃಣಮ್’ ಎನ್ನುತ್ತಾರೆ. ಬಲಿತಿರುವ ದೂರ್ವೆಯು ಒಂದು ರೀತಿಯ ಹುಲ್ಲಿ ನಂತೆಯೇ ಇರುತ್ತದೆ. ದೂರ್ವೆಗಳಿಗೆ ೩, , ೭ ಹೀಗೆ ಬೆಸ ಸಂಖ್ಯೆಯ ಗರಿಗಳಿರಬೇಕು.

ಹಿಂದೂಗಳು ಸಂಘಟಿತರಾಗಲೆಂದು : ಗಣೇಶೋತ್ಸವ

ಭಾದ್ರಪದ ಮಾಸವು ಆರಂಭವಾಗು ತ್ತಿದ್ದಂತೆಯೇ, ಎಲ್ಲರ ಮನಸೆಳೆಯುವುದು ಶ್ರೀಗಣೇಶನ ಆಗಮನದೆಡೆಗೆ !
ಧಾರ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯ ಪ್ರತಿನಿಧಿತ್ವ ಮಾಡುವ ಉತ್ಸವವನ್ನು ಪ್ರತಿಯೊಬ್ಬ ಹಿಂದೂಗಳು ಆತುರದಿಂದ ದಾರಿ ಕಾಯುತ್ತಿರುತ್ತಾರೆ. ಆದರೆ ಹಿಂದೂಗಳೇ, ಸ್ವಲ್ಪ ನಮ್ಮ ಅಕ್ಕಪಕ್ಕದ ಮತ್ತು ದೇಶದ ವಿಚಾರ ಮಾಡಿನೋಡಿ ! ಸದ್ಯ ಹಿಂದೂ ಸಮಾಜದ ಮತ್ತು ನಮ್ಮ ರಾಷ್ಟ್ರದ ಸ್ಥಿತಿಯನ್ನು ನೋಡಿದರೆ, ರಾಷ್ಟ್ರದ ನಾಗರಿಕರು ಉತ್ಸವದಲ್ಲಿ ಮಗ್ನರಾಗಬೇಕೇ ? ದುರ್ದೈವದಿಂದ ಇದರ ಉತ್ತರ ಇಲ್ಲ ಎಂದಾಗಿದೆ.

ಸಾರ್ವಜನಿಕ ಉತ್ಸವಗಳನ್ನು ಆದರ್ಶ ರೀತಿಯಲ್ಲಿ ಆಚರಿಸಲು ಮಾಡಬೇಕಾದ ಪ್ರಯತ್ನ !

ಶ್ರೀ. ಸುನಿಲ್ ಘನವಟ್
ಸಾರ್ವಜನಿಕ ಉತ್ಸವ ಮತ್ತು ಹಬ್ಬ ಇವುಗಳು ಹಿಂದೂ ಧರ್ಮದ ಅವಿಭಾಜ್ಯ ಅಂಗಗಳಾಗಿವೆ. ಉತ್ಸವವೆಂದರೆ ಆನಂದವನ್ನು ನೀಡುವ ಸಾರ್ವಜನಿಕ ಸಮಾರಂಭ ! ದೈನಂದಿನ ಜೀವನವನ್ನು ಆನಂದದಾಯಕಗೊಳಿಸುವುದೇ ಧಾರ್ಮಿಕ ಉತ್ಸವಗಳ ಉದ್ದೇಶವಾಗಿರುತ್ತದೆ. ಆದರೆ ಇಂದು ನಾವು ಆಚರಿಸುವ ಧಾರ್ಮಿಕ ಉತ್ಸವಗಳಿಂದ ಆನಂದ ಸಿಗುತ್ತದೆಯೆ ? ಇಲ್ಲವಲ್ಲ ! ಇದರ ಏಕೈಕ ಕಾರಣವೆಂದರೆ, ಹಿಂದೂಗಳ ಉತ್ಸವಗಳಲ್ಲಿ ನುಸುಳಿದ ಅಯೋಗ್ಯ ಕೃತಿಗಳು ! ರಾಮರಾಜ್ಯದ ಅನುಭೂತಿಯನ್ನು ನೀಡುವ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದೇ ನಮ್ಮೆಲ್ಲರ ಧ್ಯೇಯವಾಗಿದೆ.

ದೂರ್ವೆ ಮತ್ತು ಕೆಂಪು ಹೂವನ್ನು ಹೇಗೆ ಅರ್ಪಿಸಬೇಕು ?


ದೂರ್ವೆಗಳನ್ನು ವಿಷಮ ಸಂಖ್ಯೆಯಲ್ಲಿ (ಕಡಿಮೆ ಪಕ್ಷ ಮೂರು, ಐದು, ಏಳು ಅಥವಾ ಇಪ್ಪತ್ತೊಂದು ಇತ್ಯಾದಿ) ಅರ್ಪಿಸಬೇಕು.
ದೂರ್ವೆಯ ಗರಿಗಳು ಸಹ ವಿಷಮ ಸಂಖ್ಯೆಯಲ್ಲಿರಬೇಕು.
ಎಳೆಯ ದೂರ್ವೆಯ ಗೊಂಚಲುಗಳನ್ನು ನೀರಿನಲ್ಲಿ ಮುಳುಗಿಸಿ.

ಗಣೇಶಮೂರ್ತಿಯ ಮೆರವಣಿಗೆ ಮತ್ತು ವಿಸರ್ಜನೆ ಹೇಗಿರಬೇಕು ?

. ಅಖಂಡ ಭಜನೆ, ಜಯಘೋಷ ಮತ್ತು ನಾಮಜಪ ಮಾಡಿ !
. ಮೂರ್ತಿಯನ್ನು ನೀರಿನಲ್ಲಿ ಎಸೆಯದೇ ನಿಧಾನವಾಗಿ ವಿಸರ್ಜಿಸಿ !
. ಮದ್ಯಪಾನ, ಅಶ್ಲೀಲ ಕುಣಿತ, ಅಸಭ್ಯ ವರ್ತನೆಗಳನ್ನು ತಡೆಗಟ್ಟಿ !
. ನಿರ್ಮಾಲ್ಯವನ್ನು ನೀರಿನಲ್ಲಿ ಮುಳುಗಿಸಿದ ನಂತರವೇ ಅದನ್ನು ಗೊಬ್ಬರಕ್ಕಾಗಿ ಉಪಯೋಗಿಸಿ!
. ಮೆರವಣಿಗೆಯನ್ನು ಸಮಯಕ್ಕೆ ಸರಿಯಾಗಿ ಆರಂಭಿಸಿ ರಾತ್ರಿ ೧೦ ಗಂಟೆಯೊಳಗೆ ಮುಗಿಸಿ !

ವಿದ್ಯುತ್ ದೀಪಾಲಂಕಾರ ಬೇಡ, ಎಣ್ಣೆ-ತುಪ್ಪದ ದೀಪಗಳನ್ನು ಹಚ್ಚಿರಿ !

ಇತ್ತೀಚಿಗೆ ಹಬ್ಬಹರಿದಿನಗಳಲ್ಲಿ ಮಂಗಲದ ಪ್ರತೀಕವೆಂದು ವಿದ್ಯುತ್ ದೀಪಗಳ ಅಲಂಕಾರವನ್ನು ಮಾಡಲಾಗುತ್ತದೆ. ಹಿಂದಿನ ಕಾಲದಲ್ಲಿ ಎಣ್ಣೆ-ತುಪ್ಪದ ದೀಪಗಳಿಂದ ಅಲಂಕಾರವನ್ನು ಮಾಡಲಾಗುತ್ತಿತ್ತು. ವಿದ್ಯುತ್ ಅಲಂಕಾರ ಆಕರ್ಷಕವಾಗಿದೆ; ಆದರೆ ಸಾತ್ತ್ವಿಕತೆಯ ದೃಷ್ಟಿಯಿಂದ ಎಣ್ಣೆ-ತುಪ್ಪದ ದೀಪಗಳಿಂದ ಮಾಡಿದ ಅಲಂಕಾರವೇ ಹೆಚ್ಚು ಲಾಭದಾಯಕ ಮತ್ತು ಕಣ್ಣುಗಳಿಗೆ ಆನಂದದಾಯಕವಾಗಿದೆ. ಏಕೆಂದರೆ ವಿದ್ಯುತ್ ದೀಪಗಳಲ್ಲಿ ಎಣ್ಣೆ-ತುಪ್ಪದ ದೀಪಗಳಿಗಿಂತ ರಜ-ತಮ ಹೆಚ್ಚಿರುತ್ತದೆ ಮತ್ತು ಅದು ವಾತಾವರಣದಲ್ಲಿ ಪಸರಿಸುತ್ತದೆ. ಆದ್ದರಿಂದ ಧಾರ್ಮಿಕ ವಿಧಿಗಳ ಸ್ಥಳಗಳಲ್ಲಿ ವಾತಾವರಣ ದಲ್ಲಿ ಸಾತ್ತ್ವಿಕತೆ ಉಳಿಯಬೇಕೆಂದು ಎಣ್ಣೆ-ತುಪ್ಪದ ದೀಪಗಳನ್ನು ಹಚ್ಚಬೇಕು.

ದೂರ್ವೆ ಮತ್ತು ಕೆಂಪು ಹೂವನ್ನು ಹೇಗೆ ಅರ್ಪಿಸಬೇಕು ?


ದೂರ್ವೆಗಳನ್ನು ವಿಷಮ ಸಂಖ್ಯೆಯಲ್ಲಿ (ಕಡಿಮೆ ಪಕ್ಷ ಮೂರು, ಐದು, ಏಳು ಅಥವಾ ಇಪ್ಪತ್ತೊಂದು ಇತ್ಯಾದಿ) ಅರ್ಪಿಸಬೇಕು.
ದೂರ್ವೆಯ ಗರಿಗಳು ಸಹ ವಿಷಮ ಸಂಖ್ಯೆಯಲ್ಲಿರಬೇಕು.
ಎಳೆಯ ದೂರ್ವೆಯ ಗೊಂಚಲುಗಳನ್ನು ನೀರಿನಲ್ಲಿ ಮುಳುಗಿಸಿ.

ಗಣೇಶತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಗಳು


ಸಗುಣ ತತ್ತ್ವದ ಸ್ಪಂದನ ಅರಿವಾಗುವ ರಂಗೋಲಿ
ಆನಂದದ ಸ್ಪಂದನ ಅರಿವಾಗುವ ರಂಗೋಲಿ
ಮುಂದೆ ನೀಡಿದ ರಂಗೋಲಿಯಿಂದ ಶ್ರೀ ಗಣೇಶತತ್ತ್ವವನ್ನು ಆಕರ್ಷಿತ ಮತ್ತು ಪ್ರಕ್ಷೇಪಿಸುವುದರಿಂದ ಅಲ್ಲಿನ ವಾತಾವರಣ ದಲ್ಲಿ ಗಣೇಶತತ್ತ್ವವು ತುಂಬಿ ಅದರಿಂದ ಎಲ್ಲರಿಗೂ ಲಾಭವಾಗುತ್ತದೆ.

ಗಣೇಶಭಕ್ತರೇ, ಧರ್ಮಶಾಸ್ತ್ರಕ್ಕನುಸಾರ ವರ್ತಿಸುವುದೇ, ನಿಜವಾದ ಧರ್ಮಾಚರಣೆ !

ಶ್ರೀ ಗಣೇಶಚತುರ್ಥಿಯ ಸಮಯದಲ್ಲಿ 
ಪೂಜಿಸಬೇಕಾದ ಮೂರ್ತಿಯನ್ನು ಧರ್ಮಶಾಸ್ತ್ರಕ್ಕನುಸಾರ 
ತಯಾರಿಸಿಕೊಳ್ಳುವುದರ ಸಂದರ್ಭದಲ್ಲಿನ ಕೆಲವು ಅಡಚಣೆಗಳು ಮತ್ತು ಅವುಗಳ ಉತ್ತರಗಳು
. ಧರ್ಮಶಾಸ್ತ್ರಕ್ಕನುಸಾರ ಪೂಜಿಸಬೇಕಾದ ಜೇಡಿ ಮಣ್ಣಿನ ಮೂರ್ತಿಯು ದುಬಾರಿಯಾಗಿರುತ್ತದೆ : ಪ್ರತಿಯೊಂದು ಕುಟುಂಬ ದಲ್ಲಿ ಗಣೇಶೋತ್ಸವಕ್ಕಾಗಿ ಆಗುವ ಒಟ್ಟು ವೆಚ್ಚದಲ್ಲಿ (ಉದಾ. ಆಧುನಿಕ ಅಲಂಕಾರ, ಕುಟುಂಬ ದವರ ಬಟ್ಟೆಗಳ ಖರೀದಿ ಇತ್ಯಾದಿ) ಮೂರ್ತಿಯನ್ನು ಖರೀದಿಸಲು ಆಗುವ ವೆಚ್ಚವು ಅತ್ಯಲ್ಪವಾಗಿರುತ್ತದೆ. ಶ್ರೀ ಗಣೇಶನ ಪೂಜೆ ಮಾಡುವುದರ ಉದ್ದೇಶವು ಕುಟುಂಬದವರಿಗೆ ಮೂರ್ತಿಯಿಂದ ಗಣೇಶತತ್ತ್ವ ದೊರೆಯುವುದಾಗಿರುತ್ತದೆ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಮೂರ್ತಿಯಿಂದ ಈ ಲಾಭ ದೊರೆ ಯುವುದು ಸಾಧ್ಯವಿಲ್ಲ. ಗಣೇಶಭಕ್ತರೇ, ಮೂರ್ತಿಯ ಮೂಲ್ಯದ (ಹಣದ) ಪ್ರಶ್ನೆಯಿದ್ದಲ್ಲಿ ಚಿಕ್ಕ ಮೂರ್ತಿಯನ್ನು ಖರೀದಿಸಿರಿ; ಆದರೆ ತುಲನೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಮೂರ್ತಿ ಅಗ್ಗವಿದೆಯೆಂದು ಖರೀದಿಸುವ ಧರ್ಮಶಾಸ್ತ್ರ ವಿರೋಧಿ ವರ್ತನೆಯನ್ನು ಮಾಡಬೇಡಿರಿ.

ಶ್ರೀ ಗಣೇಶನ ಮೂರ್ತಿಯನ್ನು ಕೃತಕ ಕೊಳದಲ್ಲಿ ಏಕೆ ವಿಸರ್ಜಿಸಬಾರದು ?

ಪ್ರದೂಷಣೆ ಮುಕ್ತ ವಿಸರ್ಜನೆಯ ಹೆಸರಿನಲ್ಲಿ ಮಹಾಪಾಲಿಕೆಯವರು ಅಲ್ಲಲ್ಲಿ ನೀರಿನ ಕೊಳಗಳನ್ನು ನಿರ್ಮಿಸುತ್ತಾರೆ. ಆ ಕೊಳದಲ್ಲಿ ಶ್ರೀ ಗಣೇಶನ ಮೂರ್ತಿಯನ್ನು ವಿಸರ್ಜಿಸುವುದು ಅಯೋಗ್ಯ; ಏಕೆಂದರೆ ಕೃತಕ ಕೊಳದಲ್ಲಿ ಶ್ರೀ ಗಣೇಶ ಮೂರ್ತಿಯನ್ನು ವಿಸರ್ಜಿಸಿದಾಗ ಅದು ಕರಗುವ ಮೊದಲೇ ಪಾಲಿಕೆಯ ಸಿಬ್ಬಂದಿಗಳು ಅದನ್ನು ಕೊಳದಿಂದ ಹೊರಗೆ ತೆಗೆದಿಡುತ್ತಾರೆ. ಇದು ಧರ್ಮಬಾಹಿರವಾಗಿದೆ.
ಕೊಳದಲ್ಲಿ ವಿಸರ್ಜಿಸಿದ ಮೂರ್ತಿಯನ್ನು ಪಾಲಿಕೆಯ ಕಸದ ವಾಹನದಲ್ಲಿ ಕೊಂಡೊಯ್ಯುತ್ತಾರೆ ಹಾಗೂ ಗಣೇಶನ ಮೂರ್ತಿಗಳನ್ನು ತೆಗೆದುಕೊಂಡ ಬಳಿಕ ಪಾಲಿಕೆಯು ಕೊಳವನ್ನು ಮುಚ್ಚುವ ಮೊದಲು ಅದರಲ್ಲಿನ ನೀರನ್ನು ಚರಂಡಿಗೆ ಬಿಡುತ್ತಾರೆ. ಇದು ಸಹ ಒಂದು ರೀತಿಯಲ್ಲಿ ಶ್ರೀ ಗಣೇಶನ ವಿಡಂಬನೆಯೇ ಆಗಿದೆ.

ಶ್ರೀ ಗಣೇಶ ಚತುರ್ಥಿಗಾಗಿ ಪೂಜಿಸುವ ಶ್ರೀ ಗಣೇಶನ ಮೂರ್ತಿಯನ್ನು ಮನೆಗೆ ಹೇಗೆ ತರಬೇಕು ?

. ಶ್ರೀ ಗಣೇಶಮೂರ್ತಿಯನ್ನು ಮನೆಗೆ ತರಲು ಮನೆಯಲ್ಲಿನ ಕರ್ತ (ಪ್ರಮುಖ) ಪುರುಷನು ಇತರರೊಂದಿಗೆ ಹೋಗಬೇಕು.
. ಮೂರ್ತಿಯನ್ನು ಕೈಯಲ್ಲಿ ತೆಗೆದುಕೊಳ್ಳುವವನು ಹಿಂದೂ ವೇಷಭೂಷಣವನ್ನು ಧರಿಸಬೇಕು, ಅಂದರೆ ನಿಲುವಂಗಿ (ಅಂಗಿ)-ಧೋತರ ಅಥವಾ ಜುಬ್ಬಾ (ಅಂಗಿ)-ಪೈಜಾಮಾವನ್ನು ಧರಿಸಬೇಕು. ತಲೆಯ ಮೇಲೆ ಟೊಪ್ಪಿಗೆಯನ್ನೂ ಹಾಕಿಕೊಳ್ಳಬೇಕು.
. ಮೂರ್ತಿಯನ್ನು ತರುವಾಗ ಅದರ ಮೇಲೆ ರೇಷ್ಮೆ, ಹತ್ತಿ (ನೂಲಿನ) ಅಥವಾ ಖಾದಿಯ ಸ್ವಚ್ಛ ಬಟ್ಟೆಯನ್ನು ಹಾಕಬೇಕು. ಮೂರ್ತಿ ಯನ್ನು ಮನೆಗೆ ತರುವಾಗ ಮೂರ್ತಿಯ ಮುಖವು ತರುವವನ ಕಡೆಗೆ ಮತ್ತು ಬೆನ್ನು ಮುಂದಿನ ಬದಿಗಿರಬೇಕು.

ಪಟಾಕಿಗಳಿಂದಾಗುವ ವಿನಾಶವನ್ನು ನಾವೇ ಮೈಮೇಲೆ ಎಳೆದುಕೊಳ್ಳುವ ಅಟ್ಟಹಾಸವನ್ನು ಏಕೆ ಮಾಡುತ್ತೇವೆ ?

ಉತ್ಸವದ ಸಮಯದಲ್ಲಿ ಶಾಸ್ತ್ರಬಾಹಿರ ಪಟಾಕಿಗಳನ್ನು ಸಿಡಿಸುವುದು ರಾಷ್ಟ್ರ ಹಾಗೂ ಧರ್ಮ ದ್ರೋಹ !
ಶ್ರೀ ಗಣೇಶಮೂರ್ತಿಯನ್ನು ಮಂಗಳಮೂರ್ತಿ ಮೋರಯಾ ಎಂಬ ನಾದದಲ್ಲಿ ವಿಸರ್ಜನೆ ಮಾಡುವಾಗ ದೊಡ್ಡ ಪ್ರಮಾಣದಲ್ಲಿ ಪಟಾಕಿಗಳನ್ನು ಸಿಡಿಸುತ್ತಾರೆ. ದೇಶವು ಆರ್ಥಿಕ ಸಂಕಟದಲ್ಲಿರುವಾಗ ಹಾಗೂ ಭಯೋತ್ಪಾದನೆಯ ನೆರಳಿನಲ್ಲಿ ಗಣೇಶೋತ್ಸವವನ್ನು ಆಚರಿಸುವಂತಹ ಲಜ್ಜಾಸ್ಪದ ಸ್ಥಿತಿಯಲ್ಲಿರುವಾಗ ಶಾಸ್ತ್ರಬಾಹಿರ ಪಟಾಕಿಗಳನ್ನು ಸಿಡಿಸುವುದು ರಾಷ್ಟ್ರ ಹಾಗೂ ಧರ್ಮ ದ್ರೋಹವೇ ಆಗಿದೆ !

ಬರಗಾಲದ ಕಾರಣವನ್ನು ಮುಂದೆಮಾಡಿ ಧರ್ಮವಿರೋಧಿ ರೂಢಿಯನ್ನು ಬೆಂಬಲಿಸುವವರಿಗೆ ಧರ್ಮಾಚರಣೆಯ ಮಹತ್ವ ತಿಳಿಸಿ !

ಶ್ರೀ. ನಾಗೇಶ ಗಾಡೆ
ಪ್ರತಿವರ್ಷದಂತೆ ಕೆಲವು ಧರ್ಮದ್ರೋಹಿ ಸಂಘಟನೆಗಳು ಟ್ಯಾಂಕರ್ಗಳಲ್ಲಿ ವಿಸರ್ಜನೆ ಮಾಡುವ ಅಥವಾ ಮಹಾರಾಷ್ಟ್ರದಲ್ಲಿ ಮೂರ್ತಿದಾನ ಮಾಡುವ ಅಭಿಯಾನವನ್ನು ಹಮ್ಮಿಕೊಳ್ಳಬಹುದು. ಪ್ರತಿವರ್ಷದ ತುಲನೆಯಲ್ಲಿ ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ, ನದಿ, ಕೆರೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿಲ್ಲ. ಶ್ರೀಗಣೇಶಮೂರ್ತಿಗಳ ವಿಸರ್ಜನೆಯ ಅವಧಿಯಲ್ಲಿ ನದಿ, ಕೆರೆಗಳಲ್ಲಿ ಸಾಕಷ್ಟು ನೀರಿಲ್ಲ. ಆದುದರಿಂದ ಮೂರ್ತಿಯ ವಿಸರ್ಜನೆ ಮಾಡುವುದು ಬೇಡ, ಮೂರ್ತಿದಾನ ಮಾಡಿ ಅಥವಾ ಟ್ಯಾಂಕರ್‌ನಲ್ಲಿ ವಿಸರ್ಜಿಸಿ, ಎಂದು ಧರ್ಮದ್ರೋಹಿಗಳು ಒತ್ತಾಯಿಸಬಹುದು. ಧರ್ಮಶಾಸ್ತ್ರವು ತಿಳಿಯದ ಗಣೇಶಭಕ್ತರಿಗೂ ಈ ಕರೆ ಮೂರ್ತಿದಾನ ಮಾಡಲು ಪ್ರೋತ್ಸಾಹಿಸಲಿದೆ.

ಹಾಸ್ಯಾಸ್ಪದ ಹೇಳಿಕೆ !

ಪಾರಂಪರಿಕ ಮೂರ್ತಿಯನ್ನು ಕಲ್ಲು, ಮರದಿಂದ ಮಾಡುತ್ತಾರೆ ! ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಯನ್ನು ದೊಡ್ಡ ಅಚ್ಚಿನಿಂದ ತಯಾರಿಸುತ್ತಾರೆ ! ಅದನ್ನು ಪಾರಂಪರಿಕ ಮೂರ್ತಿಯೆಂದು ಕರೆಯಲು ಸಾಧ್ಯವೇ ? ಶಿಲ್ಪಿಗಳು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮೂರ್ತಿಯನ್ನು ತಯಾರಿಸುತ್ತಾರೆ. ಆದುದರಿಂದ ಮೂರ್ತಿಯನ್ನು ತಯಾರಿಸಲು ನಿರ್ಬಂಧ ಹೇರಿದರೆ ಶಿಲ್ಪಿಗರ ಪರಂಪರಾಗತ ವ್ಯವಸಾಯ ನಿಂತು ಹೋಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. - ನ್ಯಾಯವಾದಿ ಪ್ರಸನ್ನ ಕುಟ್ಟಿ, ಸಂಭಾಜಿನಗರ (೧೬..೨೦೧೬)